ಉದ್ಯಮಿ ರಾಜ್ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರುತ್ತಿದ್ದಂತೆಯೇ ಅವರ ನಾದಿನಿ ಶಮಿತಾ ಶೆಟ್ಟಿ (Shamita Shetty) ಅವರು ವಿಪರೀತ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty) ಬಗ್ಗೆಯೂ ನೆಟ್ಟಿಗರಿಂದ ಕಟು ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಶಮಿತಾ ಶೆಟ್ಟಿ ಅವರು ಬಿಗ್ ಬಾಸ್ ಓಟಿಟಿ (Bigg Boss OTT) ಶೋನಲ್ಲಿ ಸ್ಪರ್ಧಿಸುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಪ್ರತಿ ಎಪಿಸೋಡ್ನಲ್ಲಿಯೂ ಶಮಿತಾ ಶೆಟ್ಟಿ ಒಂದಿಲ್ಲೊಂದು ಕಾರಣಕ್ಕೆ ಶೈನ್ ಆಗುತ್ತಿದ್ದಾರೆ. ತಮ್ಮ ಬದುಕಿನ ಹಲವು ವಿವರಗಳನ್ನು ಜನರ ಮುಂದೆ ತೆರೆದಿಡುತ್ತ, ಅವರು ಕರುಣೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಬಾಲಿವುಡ್ನಲ್ಲಿ ಶಿಲ್ಪಾ ಶೆಟ್ಟಿ ಮಾಡಿರುವ ಸಾಧನೆ ದೊಡ್ಡದು. ಶಮಿತಾ ಶೆಟ್ಟಿ ಸಹ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿದ್ದರೂ ಕೂಡ ಅಕ್ಕನಷ್ಟು ಯಶಸ್ಸು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಅವರಿಗೆ ಸ್ವಂತ ಗುರುತು ಸಿಗಲೇ ಇಲ್ಲ. ಅದು ಶಮಿತಾಗೆ ಪ್ರತಿದಿನ ಕಾಡುತ್ತಿದೆ. ಆ ವಿಚಾರವನ್ನು ಹೇಳಿಕೊಂಡು ಬಿಗ್ ಬಾಸ್ ಮನೆಯಲ್ಲಿ ಅವರು ಗಳಗಳನೆ ಅತ್ತಿದ್ದಾರೆ.
ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್ ನೋವಿದೆ. ಈ ವೀಕೆಂಡ್ ಎಪಿಸೋಡ್ನಲ್ಲಿ ಅವರು ಆ ನೋವನ್ನು ತೋಡಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಜನರು ಅವರನ್ನು ಗುರುತಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಶಮಿತಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಈಗ ತಮ್ಮತನವನ್ನು ತೋರಿಸಲು ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ನೆರಳಿನಲ್ಲಿ ತಾವು ಇರುವುದು ಕಷ್ಟಕರವೇ ಹೌದಾದರೂ ಅದು ತಮ್ಮನ್ನು ರಕ್ಷಿಸುತ್ತಿದೆ ಎಂಬ ಸತ್ಯವನ್ನೂ ಶಮಿತಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಾವು ಲಕ್ಕಿ ಎಂದೂ ಅವರು ಹೇಳಿದ್ದಾರೆ. ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವನ್ನು ಖ್ಯಾತ ನಿರ್ಮಾಪಕ ನಿರ್ದೇಶಕ ಕರಣ್ ಜೋಹರ್ ನಿರೂಪಿಸುತ್ತಿದ್ದಾರೆ. ಶಮಿತಾ ಚೆನ್ನಾಗಿ ಆಟ ಆಡುತ್ತಿರುವುದಕ್ಕೆ ಕರಣ್ ಮೆಚ್ಚುಗೆ ಸೂಚಿಸಿದ್ದಾರೆ.
ನೇಹಾ ಭಾಸಿನ್, ರಿಧಿಕಾ ಪಂಡಿತ್, ನಿಶಾಂತ್ ಭಟ್, ದಿವ್ಯಾ ಅಗರ್ವಾಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಣಾಹಣಿ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ
ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?