ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ‘ಅಗ್ನಿಸಾಕ್ಷಿ’ ಸೀರಿಯಲ್ ಶೀರ್ಷಿಕೆ ಗೀತೆ

ಇತ್ತೀಚೆಗೆ ವಿಶ್ವ ಸಂಗೀತ ದಿನದ ಸಂಭ್ರಮದ ಪ್ರಯುಕ್ತ ‘ಅಗ್ನಿಸಾಕ್ಷಿ’ ಧಾರಾವಾಹಿಯ ಶೀರ್ಷಿಕೆ ಗೀತೆ ಬಿಡುಗಡೆ ಮಾಡಲಾಯಿತು. ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಸಾಂಗ್ ಗಮನ ಸೆಳೆದಿದೆ. ಸುನಾದ್ ಗೌತಮ್ ಸಂಗೀತ ಸಂಯೋಜನೆಯ ಈ ಹಾಡಿಗೆ ವಿಕಾಸ್ ನೇಗಿಲೋಣಿ ಸಾಹಿತ್ಯ ಬರೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ‘ಅಗ್ನಿಸಾಕ್ಷಿ’ ಸೀರಿಯಲ್ ಶೀರ್ಷಿಕೆ ಗೀತೆ
Shamanth Bro Gowda, Varshini Gowda

Updated on: Jun 24, 2026 | 5:21 PM

ಮುಖ್ಯಾಂಶಗಳು

  • ‘ಕಲರ್ಸ್ ಕನ್ನಡ’ ವಾಹಿನಿಯ ‘ಅಗ್ನಿಸಾಕ್ಷಿ’ ಸೀರಿಯಲ್ ರೊಮ್ಯಾಂಟಿಕ್ ಶೀರ್ಷಿಕೆ ಗೀತೆ ಬಿಡುಗಡೆ.
  • ವಿಕಾಸ್ ನೇಗಿಲೋಣಿ ಸಾಹಿತ್ಯ, ಸುನಾದ್ ಗೌತಮ್ ಸಂಗೀತ, ರಜತ್ ಹೆಗಡೆ ಹಾಡಿರುವ ಗೀತೆ ಇದು.
  • ಹ್ಯಾರಿಸ್ ನಿರ್ಮಾಣ, ಪ್ರಶಾಂತ್ ನಿರ್ದೇಶನದ ಸೀರಿಯಲ್‌ನಲ್ಲಿ ಶಮಂತ್, ವರ್ಷಿಣಿ ಗೌಡ ನಟನೆ.

ವಿಶ್ವ ಸಂಗೀತ ದಿನದ ವಿಶೇಷ ಸಂದರ್ಭದಲ್ಲಿ, ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ (Colors Kannada) ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೊಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರಸಾರ ಆರಂಭವಾಗಿ ಕೇವಲ ದಿನಗಳಲ್ಲೇ ರಾಜ್ಯಾದ್ಯಂತ ಪ್ರೇಕ್ಷಕರ ಮನಗೆದ್ದಿರುವ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್, ತನ್ನ ಟೈಟಲ್ ಸಾಂಗ್ ಮೂಲಕವೂ ಗಮನ ಸೆಳೆಯುತ್ತಿದೆ.

‘ಅಗ್ನಿಸಾಕ್ಷಿ’ ಸೀರಿಯಲ್ ಸದ್ಯ ಸಂಜೆ 7 ಗಂಟೆಯ ಪ್ರೈಮ್-ಟೈಮ್ ಸ್ಲಾಟ್‌ನಲ್ಲಿ ಭರ್ಜರಿ ಪ್ರಶಂಸೆ ಗಳಿಸುತ್ತಿದೆ. ಇದು ಅಗ್ನಿ ಮತ್ತು ಸಾಕ್ಷಿ ಎಂಬ ಇಬ್ಬರು ಸಮಾನ ಮನಸ್ಕರ, ಹಠಮಾರಿಗಳ ನಡುವಿನ ರೋಚಕ ಪ್ರೇಮಕಾವ್ಯವಾಗಿದೆ. ಕೆಂಡ ಮತ್ತು ಬಿರುಗಾಳಿಯಂತಿರುವ ಅವರಿಬ್ಬರ ಮುಖಾಮುಖಿ ಮುಂದೆ ಹೇಗೆ ಸುಂದರ ಪ್ರೇಮದ ಮಳೆಯಾಗಲಿದೆ ಎಂಬುದನ್ನು ಈ ಹೊಸ ಹಾಡು ವಿವರಿಸುತ್ತದೆ.

‘ಅಗ್ನಿಸಾಕ್ಷಿ’ ಧಾರಾವಾಹಿಯ ಶೀರ್ಷಿಕೆ ಗೀತೆ:

‘ಮಾಯದ ಗಾಯವ ಮಾಡಿರೋ ಒಲವೇ…’ ಎಂಬ ಸಾಲುಗಳಿಂದ ಆರಂಭವಾಗುವ ಈ ಸುಮಧುರ ಗೀತೆಯಲ್ಲಿ ಸುನಾದ್ ಗೌತಮ್, ವಿಕಾಸ್ ನೇಗಿಲೋಣಿ, ರಜತ್ ಹೆಗಡೆ ಅವರ ಕಾಂಬಿನೇಷನ್ ಇದೆ. ಸುನಾದ್ ಗೌತಮ್ ಅವರು ಸಂಗೀತ ಸಂಯೋಜಿಸಿದ್ದು, ‘ಕನ್ನಡತಿ’ ಧಾರಾವಾಹಿಗೆ ಕಥೆ-ಸಂಭಾಷಣೆ ಬರೆದಿದ್ದ ವಿಕಾಸ್ ನೇಗಿಲೋಣಿ ಅವರು ಸಾಹಿತ್ಯ ರಚಿಸಿದ್ದಾರೆ. ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿ, ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡ ರಜತ್ ಹೆಗಡೆ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ

ಭಾವನೆಗಳ ತೀವ್ರತೆ ಮತ್ತು ಕಥೆಯ ಆಳವನ್ನು ಹಿಡಿದಿಡುವ ಈ ಶೀರ್ಷಿಕೆ ಗೀತೆಯು ‘ಕಲರ್ಸ್ ಕನ್ನಡ’ ವಾಹಿನಿಯ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರನ್ನು ಸೆಳೆದುಕೊಂಡಿದೆ. ಹ್ಯಾರಿಸ್ ನಿರ್ಮಾಣದ, ಪ್ರಶಾಂತ್ ಡಿ.ಪಿ. ನಿರ್ದೇಶನದ ಈ ಮೆಗಾ ಫಿಕ್ಷನ್ ಶೋನಲ್ಲಿ ಶಮಂತ್ ಬ್ರೋ ಗೌಡ (ಅಗ್ನಿ) ಮತ್ತು ಪ್ರತಿಭಾವಂತ ನಟಿ ವರ್ಷಿಣಿ ಗೌಡ (ಸಾಕ್ಷಿ) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us