‘ದೃಶ್ಯಂ 3’ ನಿರ್ಮಾಪಕರೊಟ್ಟಿಗೆ ವಿವಾದ: ಬಹಿರಂಗ ಎಚ್ಚರಿಕೆ ನೀಡಿದ ಅಮೆಜಾನ್ ಪ್ರೈಂ

Drishyam 3 release: ‘ದೃಶ್ಯಂ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾದ ಎರಡನೇ ಭಾಗ ‘ದೃಶ್ಯಂ 2’ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯ್ತು. ಇದೀಗ ಸಿನಿಮಾದ ಮೂರನೇ ಭಾಗ ‘ದೃಶ್ಯಂ 3’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದರ ಬೆನ್ನಲ್ಲೆ ಅಮೆಜಾನ್ ಪ್ರೈಂ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದೆ. ಈ ಎಚ್ಚರಿಕೆಯನ್ನು ಅಮೆಜಾನ್ ಪ್ರೈಂ ಸಾರ್ವಜನಿಕವಾಗಿ ಹೊರಡಿಸಿದ್ದು, ಸಿನಿಮಾದ ಡಿಜಿಟಲ್ ಹಕ್ಕಿನ ಕುರಿತಾದ ಎಚ್ಚರಿಕೆ ಇದಾಗಿದೆ.

‘ದೃಶ್ಯಂ 3’ ನಿರ್ಮಾಪಕರೊಟ್ಟಿಗೆ ವಿವಾದ: ಬಹಿರಂಗ ಎಚ್ಚರಿಕೆ ನೀಡಿದ ಅಮೆಜಾನ್ ಪ್ರೈಂ
Drishyam 3

Updated on: Apr 03, 2026 | 6:10 PM

ಮೋಹನ್ ಲಾಲ್ (Mohan Lal) ನಟಿಸಿ ಜೀತು ಜೋಸೆಫ್ ನಿರ್ದೇಶನದ ಬಹುನಿರೀಕ್ಷಿತ ಮಲಯಾಳಂ ಚಿತ್ರ ‘ದೃಶ್ಯಂ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾದ ಎರಡನೇ ಭಾಗ ‘ದೃಶ್ಯಂ 2’ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯ್ತು. ಇದೀಗ ಸಿನಿಮಾದ ಮೂರನೇ ಭಾಗ ‘ದೃಶ್ಯಂ 3’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದರ ಬೆನ್ನಲ್ಲೆ ಅಮೆಜಾನ್ ಪ್ರೈಂ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದೆ. ಈ ಎಚ್ಚರಿಕೆಯನ್ನು ಅಮೆಜಾನ್ ಪ್ರೈಂ ಸಾರ್ವಜನಿಕವಾಗಿ ಹೊರಡಿಸಿದ್ದು, ಸಿನಿಮಾದ ಡಿಜಿಟಲ್ ಹಕ್ಕಿನ ಕುರಿತಾದ ಎಚ್ಚರಿಕೆ ಇದಾಗಿದೆ.

ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಆಶೀರ್ವಾದ್ ಸಿನಿಮಾಸ್ ಮತ್ತು ತನ್ನ ನಡುವಿನ ಅಸ್ತಿತ್ವದಲ್ಲಿರುವ ಒಪ್ಪಂದಗಳ ಪ್ರಕಾರ, ‘ದೃಶ್ಯಂ 3’ ಚಿತ್ರದ ಎಲ್ಲಾ ರೀತಿಯ ಡಿಜಿಟಲ್ ಹಕ್ಕುಗಳು ತನಗೆ ಮಾತ್ರ ಸೇರಿವೆ ಎಂದು ಸ್ಪಷ್ಟಪಡಿಸಿದೆ. ಸಿನಿಮಾದ ಹಕ್ಕುಗಳನ್ನು ಅಮೆಜಾನ್ ಹೊರತುಪಡಿಸಿ ಬೇರೆ ಯಾರೂ ಹೊಂದಿಲ್ಲ. ಆಶೀರ್ವಾದ್ ಸಿನಿಮಾಸ್ ಅಥವಾ ಅದರ ಪ್ರತಿನಿಧಿಗಳಿಗೆ ಈ ಡಿಜಿಟಲ್ ಹಕ್ಕುಗಳನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ಪರವಾನಗಿ ನೀಡಲು ಯಾವುದೇ ಅಧಿಕಾರವಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಮೋಹನ್ ಲಾಲ್, ಮಮ್ಮುಟಿಗಳ ದಾಖಲೆಗಳ ಮುರಿದ ಹುಡುಗರು ‘ಮಂಜ್ಞುಮಲ್ ಬಾಯ್ಸ್’

ಅಮೆಜಾನ್‌ನ ಈ ಪ್ರತ್ಯೇಕ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಸಂಬಂಧಿಸಿದಂತೆ ವ್ಯವಹರಿಸಿದರೆ, ಅವರು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅದರಿಂದಾಗುವ ಹಾನಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಅಮೆಜಾನ್ ಎಚ್ಚರಿಸಿದೆ. ಆಶೀರ್ವಾದ್ ಸಿನಿಮಾಸ್‌ನ ಮಾಲೀಕ ಮತ್ತು ‘ದೃಶ್ಯಂ’ ಸಿನಿಮಾ ಸರಣಿಯ ನಿರ್ಮಾಪಕ ಆಂಟೋನಿ ಪೆರುಂಬವೂರ್ ಅವರು ಈ ನೋಟಿಸ್‌ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಚಿತ್ರತಂಡವು ಅಮೆಜಾನ್ ಹೊರತುಪಡಿಸಿ ಇತರ ಡಿಜಿಟಲ್ ವೇದಿಕೆಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವುದು ಈ ವಿವಾದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

‘ದೃಶ್ಯಂ 3’ ಚಿತ್ರವು ಈ ಮೊದಲು ಏಪ್ರಿಲ್ 2 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ಘೋಷಣೆಯಂತೆ, ಈ ಚಿತ್ರವು ಮೇ 21 ರಂದು ಮೋಹನ್ ಲಾಲ್ ಅವರ ಜನ್ಮದಿನದ ಅಂಗವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಕೂಡ ತಮ್ಮ ಹಳೆಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ‘ದೃಶ್ಯಂ’ ಸರಣಿಯ ಕೊನೆಯ ಭಾಗವಾಗಿದ್ದು, ಜಾರ್ಜ್ ಕುಟ್ಟಿಯ ಕಥೆ ಇಲ್ಲಿಗೆ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us