ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಳೆದ ಆರು ದಶಕಗಳಿಂದಲೂ ಫಿಲ್ಮ್ಫೇರ್ ಪ್ರಶಸ್ತಿ ನೀಡಲಾಗುತ್ತಿದೆ. ಕಾಲ ಬದಲಾದಂತೆ ಈ ಪ್ರಶಸ್ತಿಯ ವ್ಯಾಪ್ತಿ ಕೂಡ ಹಿರಿದಾಗುತ್ತಿದೆ. ಈಗ ಓಟಿಟಿ ಜಮಾನಾ. ಚಿತ್ರಮಂದಿರಗಳಿಗೆ ಪರ್ಯಾಯವಾಗಿ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಅನೇಕ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ವೆಬ್ ಸಿರೀಸ್ಗಳ ಹವಾ ಕೂಡ ಹೆಚ್ಚಾಗಿದೆ. ಹಾಗಾಗಿ ಫಿಲ್ಮ್ಫೇರ್ ವತಿಯಿಂದ ವೆಬ್ ಸರಣಿಯ ಪ್ರತಿಭೆಗಳನ್ನೂ ಗೌರವಿಸುವ ಕೆಲಸ ಆಗುತ್ತಿದೆ. ‘ಫಿಲ್ಮ್ಫೇರ್ ಓಟಿಟಿ ಅವಾರ್ಡ್ಸ್’ ನೀಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು, ಪ್ರತೀಕ್ ಗಾಂಧಿ ನಟನೆಯ ‘ಸ್ಕ್ಯಾಮ್ 1992’ ಮತ್ತು ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ಗಳು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಈ ಬಾರಿಯ ಫಿಲ್ಮ್ಫೇರ್ ಓಟಿಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸ್ಕ್ಯಾಮ್ 1992’ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಒರಿಜಿನಲ್ ಸೌಂಡ್ ಟ್ರ್ಯಾಕ್, ಅತ್ಯುತ್ತಮ ವಸ್ತ್ರ ವಿನ್ಯಾಸ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಂಕಲನ, ಅತ್ಯುತ್ತಮ ವಿಎಫ್ಎಕ್ಸ್, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ನಿರ್ದೇಶನ (ಹನ್ಸಲ್ ಮೆಹ್ತಾ), ಅತ್ಯುತ್ತಮ ನಟ (ಪ್ರತೀಕ್ ಗಾಂಧಿ), ಅತ್ಯುತ್ತಮ ಸಂಭಾಷಣೆ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡು ‘ಸ್ಕ್ಯಾಮ್ 1992’ ವೆಬ್ ಸಿರೀಸ್ ಮಿಂಚಿದೆ.
ಮನೋಜ್ ಬಾಜಪೇಯ್, ಪ್ರಿಯಾಮಣಿ, ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ಕೂಡ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಮೂಲ ಕಥೆ, ಅತ್ಯುತ್ತಮ ಚಿತ್ರಕಥೆ, ಅತ್ತುತ್ತಮ ನಿರ್ದೇಶನ-ಕ್ರಿಟಿಕ್ಸ್ (ಸುಪರ್ಣ್ ವರ್ಮಾ), ಅತ್ಯುತ್ತಮ ನಟಿ (ಸಮಂತಾ), ಅತ್ಯುತ್ತಮ ವೆಬ್ ಸಿರೀಸ್ ಪ್ರಶಸ್ತಿಗಳನ್ನು ‘ದಿ ಫ್ಯಾಮಿಲಿ ಮ್ಯಾನ್ 2’ ಬಾಚಿಕೊಂಡಿದೆ.
ಓಟಿಟಿ ಮೂಲಕ ಅನೇಕ ಸೆಲೆಬ್ರಿಟಿಗಳು ಮಿಂಚುತ್ತಿದ್ದಾರೆ. ಸ್ಟಾರ್ ಕಲಾವಿದರೂ ಕೂಡ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ನಟಿಸಿದ ಬಳಿಕ ಸಮಂತಾ ಅವರ ಚಾರ್ಮ್ ಹೆಚ್ಚಿತು. ಅವರ ಬೇಡಿಕೆ ಕೂಡ ದುಪ್ಪಟ್ಟಾಯಿತು. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಬಿಡುಗಡೆಯಾದ ಆ ವೆಬ್ ಸರಣಿಯಲ್ಲಿ ಸಖತ್ ಬೋಲ್ಡ್ ಆದಂತಹ ಪಾತ್ರವನ್ನು ಸಮಂತಾ ಮಾಡಿದರು. ಅದಕ್ಕೆ ಕೆಲವರಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಅದೇ ಪಾತ್ರಕ್ಕಾಗಿ ಸಮಂತಾಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿರುವುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.
ಇದನ್ನೂ ಓದಿ:
ಸಮಂತಾ ವಾಟ್ಸಾಪ್ ಸಂದೇಶದ ಸ್ಕ್ರೀನ್ಶಾಟ್ ಬಹಿರಂಗ; ಅರೆಬರೆ ಮುಚ್ಚಿಟ್ಟು ನಟಿ ಹೇಳಿದ್ದೇನು?
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸಿರೀಸ್