ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

ಮನೋಜ್ ಬಾಜ್‌ಪಾಯಿ ನಟನೆಯ 'ಘುಸ್ಕೋರ್ ಪಂಡತ್' ಚಿತ್ರದ ಶೀರ್ಷಿಕೆಯು 'ಭ್ರಷ್ಟ ಅರ್ಚಕರು' ಎಂಬ ಅರ್ಥ ಕೊಡುತ್ತದೆ. ಇದು ವಿವಾದಕ್ಕೆ ಸಿಲುಕಿದೆ. ಅರ್ಚಕರ ವರ್ಗ ಮತ್ತು ಸರ್ವ ಬ್ರಾಹ್ಮಿಣ್ ಮಹಸಭಾ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿತ್ತು. ಶೀರ್ಷಿಕೆ ಬದಲಾಯಿಸಲು ನೆಟ್‌ಫ್ಲಿಕ್ಸ್ ನಿರ್ಧರಿಸಿದ ನಂತರ, ಚಿತ್ರದ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ.

ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ
ಮನೋಜ್
Edited By:

Updated on: Feb 12, 2026 | 10:06 PM

‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಿ ಈಗಾಗಲೇ ತಿಂಗಳು ಕಳೆದಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದೆ ಇರುವುದೇ ಸಿನಿಮಾ ರಿಲೀಸ್ ವಿಳಂಬ ಆಗಲು ಕಾರಣ. ಹೀಗಾಗಿ, ಈವರೆಗೆ ಸಿನಿಮಾ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ರಿಲೀಸ್​ಗೆ ಬ್ರೇಕ್ ಬೀಳುವ ಲಕ್ಷಣ ಇತ್ತು. ಆದರೆ, ತಕ್ಷಣ ತೆಗೆದುಕೊಂಡ ನಿರ್ಧಾರದಿಂದ ಸಿನಿಮಾ ರಿಲೀಸ್​​ಗೆ ಅನುವು ಮಾಡಿಕೊಡಲಾಗುತ್ತಿದೆ. ಅದು ಬಾಲಿವುಡ್​​ನ ‘ಘುಸ್ಕೋರ್ ಪಂಡತ್’.

ಮನೋಜ್ ಬಾಜ್​​ಪಾಯಿ ನಟನೆಯ ‘ಘುಸ್ಕೋರ್ ಪಂಡತ್’ ಸುತ್ತ ವಿವಾದದ ಹುತ್ತ ಬೆಳೆದಿದೆ. ಈ ಸಿನಿಮಾದ ಟೈಟಲ್ ವಿವಾದಕ್ಕೆ ಕಾರಣ ಆಗಿತ್ತು. ಈ ಸಿನಿಮಾದ ಟೈಟಲ್​ನ ಕನ್ನಡಕ್ಕೆ ತರ್ಜಮ್ಯ ಮಾಡಿದರೆ, ‘ಭ್ರಷ್ಟ ಅರ್ಚಕರು’ ಎಂಬ ಅರ್ಥ ಕೊಡುತ್ತದೆ. ಹೀಗಾಗಿ, ಇದಕ್ಕೆ ಅರ್ಚಕರ ವರ್ಗ ಧ್ವನಿ ಎತ್ತಿತ್ತು.

ಜೈಪುರದಲ್ಲಿರುವ ಸರ್ವ ಬ್ರಾಹ್ಮಿಣ್ ಮಹಸಭಾ ಅವರು ಈ ಟೈಟಲ್ ವಿರುದ್ಧ ಧ್ವನಿ ಎತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಹತ್ತಿತು. ಟೈಟಲ್ ಬದಲಾವಣೆ ಮಾಡೋವರೆಗೆ ಸಿನಿಮಾ ರಿಲೀಸ್​ಗೆ ಅವಕಾಶ ನೀಡುವುದಿಲ್ಲ ಎನ್ನುವ ಮಾತು ಕೇಳಿ ಬಂದವು. ಈಗ ಪ್ರಕರಣದಲ್ಲಿ ನೆಟ್​​ಫ್ಲಿಕ್ಸ್ ಕೋರ್ಟ್​​ಗೆ ತನ್ನ ನಿರ್ಧಾರ ತಿಳಿಸಿದೆ.

‘ಘುಸ್ಕೋರ್ ಪಂಡತ್ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ತಂಡ ನಿರ್ಧರಿಸಿದೆ. ಸಧ್ಯ ಉದ್ಭವಿಸಿರುವ ಕಳವಳದ ಹಿನ್ನೆಲೆಯಲ್ಲಿ ನಿರ್ಮಾಪಕರು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ’ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

ಸದ್ಯ ನೆಟ್​ಫ್ಲಿಕ್ಸ್​ಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ಸೂಚಿಸಿದೆ. ಒಂದೊಮ್ಮೆ ಸಿನಿಮಾ ರಿಲೀಸ್ ಬಳಿಕ ಮತ್ತಷ್ಟು ವಿವಾದಗಳು ಎದ್ದರೆ ಆಗ ಸಿನಿಮಾಗೆ ಬ್ಯಾನ್ ಬೀತಿ ಎದುರಾಗಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:00 pm, Thu, 12 February 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us