AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ‘ಸ್ಕ್ಯಾಮ್’: ಈ ಬಾರಿ ಯಾವ ಮೋಸಗಾರನ ಕತೆ?

Scam 3 web series: ಪ್ರತಿಭಾವಂತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಾ ಬರುತ್ತಿರುವ ‘ಸ್ಕ್ಯಾಮ್’ ವೆಬ್ ಸರಣಿಯ ಎರಡು ಸೀಸನ್​​ಗಳು ಈಗಾಗಲೇ ಬಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮೊದಲಿಗೆ ಬಂದ ‘ಸ್ಕ್ಯಾಮ್ 1992’, ಷೇರು ಮಾರುಕಟ್ಟೆ ಬಳಸಿ ಕೋಟ್ಯಂತರ ಹಣ ಲೂಟಿ ಮಾಡಿದ್ದ ಹರ್ಷಲ್ ಮೆಹ್ತ ಜೀವನ ಆಧರಿಸಿದ ಕತೆ ಒಳಗೊಂಡಿತ್ತು. ಅದು ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ಕರೀಂ ಲಾಲ್ ತೆಲಗಿ ಕುರಿತ ‘ಸ್ಕ್ಯಾಮ್ 2003’ ಬಂತು. ಇದೀಗ ಮತ್ತೊಬ್ಬ ಆರ್ಥಿಕ ಅಪರಾಧಿಯ ಕತೆಯನ್ನು ಹನ್ಸಲ್ ತೆರೆಗೆ ತರುತ್ತಿದ್ದಾರೆ.

ಮತ್ತೆ ಬರುತ್ತಿದೆ ‘ಸ್ಕ್ಯಾಮ್’: ಈ ಬಾರಿ ಯಾವ ಮೋಸಗಾರನ ಕತೆ?
Hansal Mehta
ಮಂಜುನಾಥ ಸಿ.
|

Updated on: May 15, 2026 | 3:59 PM

Share

ಹಿಂದಿಯ ‘ಸ್ಕ್ಯಾಮ್’ (Scam) ವೆಬ್ ಸರಣಿ (Web series) ಭಾರತದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಈ ಸ್ಕ್ಯಾಮ್ ವೆಬ್ ಸರಣಿ ಭಾರತದ ನಿಜ ಆರ್ಥಿಕ ಅಪರಾಧಿಗಳ ಕತೆಗಳನ್ನು ಹೇಳುವ ವೆಬ್ ಸರಣಿ. ಪ್ರತಿಭಾವಂತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಾ ಬರುತ್ತಿರುವ ‘ಸ್ಕ್ಯಾಮ್’ ವೆಬ್ ಸರಣಿಯ ಎರಡು ಸೀಸನ್​​ಗಳು ಈಗಾಗಲೇ ಬಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮೊದಲಿಗೆ ಬಂದ ‘ಸ್ಕ್ಯಾಮ್ 1992’, ಷೇರು ಮಾರುಕಟ್ಟೆ ಬಳಸಿ ಕೋಟ್ಯಂತರ ಹಣ ಲೂಟಿ ಮಾಡಿದ್ದ ಹರ್ಷಲ್ ಮೆಹ್ತ ಜೀವನ ಆಧರಿಸಿದ ಕತೆ ಒಳಗೊಂಡಿತ್ತು. ಅದು ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ಕರೀಂ ಲಾಲ್ ತೆಲಗಿ ಕುರಿತ ‘ಸ್ಕ್ಯಾಮ್ 2003’ ಬಂತು. ಇದೀಗ ಮತ್ತೊಬ್ಬ ಆರ್ಥಿಕ ಅಪರಾಧಿಯ ಕತೆಯನ್ನು ಹನ್ಸಲ್ ತೆರೆಗೆ ತರುತ್ತಿದ್ದಾರೆ.

ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಆರ್ಥಿಕ ಅಪರಾಧಿಗಳ ಜೀವನವನ್ನು ಆಯ್ಕೆ ಮಾಡಿಕೊಂಡು ವೆಬ್ ಸರಣಿ ಮಾಡುವ ಹನ್ಸಲ್ ಮೆಹ್ತಾ, ಈ ಬಾರಿ ಸಹಾರಾ ಇಂಡಿಯಾ ಸ್ಥಾಪಕ ಭಾರತೀಯ ಉದ್ಯಮಿ ದಿವಂಗತ ಸುಬ್ರತಾ ರಾಯ್ ಅವರ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನ್ಸಲ್ ಮೆಹ್ತಾ ಅವರ ‘ಸ್ಕ್ಯಾಮ್ 3’ ನಿರ್ಮಾಪಕರು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲು ಸಜ್ಜಾಗಿದ್ದಾರೆ, ಏಕೆಂದರೆ ಇದರ ಚಿತ್ರೀಕರಣವು ಮೇ 13 ರಿಂದ ಆರಂಭವಾಗಿದೆ ಎನ್ನಲಾಗುತ್ತಿದೆ.

ಭಾರತದ ಅತ್ಯಂತ ವಿವಾದಾತ್ಮಕ ಉದ್ಯಮಿಗಳಲ್ಲಿ ಒಬ್ಬರು ಸುಬ್ರತಾ ರಾಯ್. ಅತ್ಯಂತ ಐಶಾರಾಮಿ ಜೀವನ ನಡೆಸುತ್ತಿದ್ದ ಸುಬ್ರತಾ ರಾಯ್ ಮೇಲೆ ಹಲವು ಆರೋಪಗಳಿದ್ದವು, ವಂಚನೆ, ಪಾಂಜಿ ಸ್ಕ್ಯಾಮ್ ಆರೋಪ, ಮನಿ ಲಾಂಡರಿಂಗ್ ಇನ್ನೂ ಕೆಲವು ಆರೋಪಗಳಿದ್ದವು. ಸುಮಾರು 24 ಸಾವಿರ ಕೋಟಿ ರೂಪಾಯಿಗಳ ಹಣವನ್ನು ಸುಬ್ರತೋ ರಾಯ್ ವಂಚಿಸಿದ್ದರು. ಸುಬ್ರತೋ ರಾಯ್ ಅನ್ನು ಜೈಲಿಗೆ ಹಾಕಿದ ಬಳಿಕ ಅಲ್ಲಿಯೂ ಸಹ ಈ ವ್ಯಕ್ತಿ ಪ್ರಭಾವ ಬಳಸಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದನ್ನೂ ಓದಿ:ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ?

ಸುಬ್ರತಾ ರಾಯ್, ತಮ್ಮ ಮಕ್ಕಳ ಮದುವೆಗೆ 500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದರು. ರಾಜಕಾರಣಿಗಳಿಗೆ ಬಲು ಆಪ್ತರಾಗಿದ್ದ ಸುಬ್ರತೋ ರಾಯ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರುಗಳಿಗೆ ಆಗ ಬೆಂಬಲ ನೀಡಿದ್ದರು. ಅಟಲ್ ಅವರು ಸುಬ್ರತೋ ರಾಯ್ ಪುತ್ರನ ಮದುವೆಗೆ ಸಹ ಆಗಮಿಸಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಸುಬ್ರತೋ ರಾಯ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾರ್ಗಿಲ್​​ನಲ್ಲಿ ಮೃತರಾದ ಸೈನಿಕರ ಕುಟುಂಬಕ್ಕೆ ನೆರವಾಗಿದ್ದರು, ಇನ್ನೂ ಹಲವು ಸಾಮಾಜ ಸೇವೆ ಮಾಡಿದ್ದರು. ಆದರೆ ಅಂತಿಮವಾಗಿ ಸುಬ್ರತೋ ಹೃದಯಾಘಾತದಿಂದ ನಿಧನ ಹೊಂದಿದಾಗ ಅವರ ಮಕ್ಕಳು, ಪತ್ನಿ ಸಹ ಅವರನ್ನು ಕಾಣಲು ಬಂದಿರಲಿಲ್ಲ.

ಇದೀಗ ಹನ್ಸಲ್ ಮೆಹ್ತಾ ಅವರು ಸುಬ್ರತಾ ರಾಯ್ ಅವರ ಜೀವನ ಕತೆಯನ್ನು ವೆಬ್ ಸರಣಿ ಮಾಡಲು ತಯಾರಾಗಿದ್ದು, ಚಿತ್ರಕತೆ ರೆಡಿ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಬೋಡ್ಕೆ ಅವರು ಸುಬ್ರತಾ ರಾಯ್ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್