‘ಹನುಮಾನ್ ಅಂಶ್’ ಸಿನಿಮಾ ಒಟಿಟಿ ಹಕ್ಕಿ ಮಾರಾಟವಾಗಿದ್ದು ಎಷ್ಟು ಕೋಟಿಗೆ?

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ 452 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾಕ್ಕಿಂತಲೂ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳು ಭಾರತದಲ್ಲಿವೆ, ಆದರೆ ಇದರಷ್ಟು ಹೆಚ್ಚು ಲಾಭ (ಹೂಡಿಕೆಗೆ ದೊರೆತ ಲಾಭ) ಮಾಡಿದ ಇನ್ಯಾವುದೇ ಸಿನಿಮಾ ಇಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಸಿನಿಮಾದ ಒಟಿಟಿ ಹಕ್ಕುಗಳು ಸಹ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

‘ಹನುಮಾನ್ ಅಂಶ್’ ಸಿನಿಮಾ ಒಟಿಟಿ ಹಕ್ಕಿ ಮಾರಾಟವಾಗಿದ್ದು ಎಷ್ಟು ಕೋಟಿಗೆ?
Hanuman Ansh

Updated on: Nov 22, 2026 | 2:54 PM

ಮುಖ್ಯಾಂಶಗಳು

  • ‘ಹನುಮಾನ್ ಅಂಶ್’ ಒಟಿಟಿ ಹಕ್ಕು ಮಾರಾಟ
  • ‘ಹನುಮಾನ್ ಅಂಶ್’ ಸಿನಿಮಾದ ಟಿವಿ ಹಕ್ಕು ಮಾರಾಟ
  • ಭಾರಿ ಮೊತ್ತಕ್ಕೆ ಮಾರಾಟವಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು

‘ಹನುಮಾನ್ ಅಂಶ್’ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ. ಕೇವಲ 2 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಅಳಿಸಲಾಗದ ದಾಖಲೆ ಬರೆದಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ 452 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾಕ್ಕಿಂತಲೂ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳು ಭಾರತದಲ್ಲಿವೆ, ಆದರೆ ಇದರಷ್ಟು ಹೆಚ್ಚು ಲಾಭ (ಹೂಡಿಕೆಗೆ ದೊರೆತ ಲಾಭ) ಮಾಡಿದ ಇನ್ಯಾವುದೇ ಸಿನಿಮಾ ಇಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಸಿನಿಮಾದ ಒಟಿಟಿ ಹಕ್ಕುಗಳು ಸಹ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆ ಆಗಿ 110 ದಿನಗಳಿಗೂ ಹೆಚ್ಚಾಗಿದೆ. ಈಗಲೂ ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ್ ಘೋಷಣೆ ಮಾಡಲಾಗಿದೆ. ಸಿನಿಮಾವು ನವೆಂಬರ್ 27ರಂದು ಸೋನಿ ಲಿವ್ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಒಟಿಟಿ ಮತ್ತು ಟಿವಿ ಹಕ್ಕುಗಳು ಏಕಕಾಲಕ್ಕೆ ಮಾರಾಟ ಆಗಿದ್ದು, ಭಾರಿ ಮೊತ್ತಕ್ಕೆ ಸಿನಿಮಾದ ಹಕ್ಕುಗಳನ್ನು ಸೋನಿ ಸಂಸ್ಥೆ ಖರೀದಿ ಮಾಡಿದೆ.

Loading...

‘ಹನುಮಾನ್ ಅಂಶ್’ ಸಿನಿಮಾದ ಒಟಿಟಿ ಮತ್ತು ಟಿವಿ ಸ್ಯಾಟಲೈಟ್ ಹಕ್ಕುಗಳು ಬರೋಬ್ಬರಿ 63 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಬಿಡುಗಡೆ ಆಗಿ 100 ದಿನಗಳಾದ ಬಳಿಕವೂ ಸಿನಿಮಾ ಒಂದಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಗಾಗಿ ಕೊಡುತ್ತಿರುವುದು ಭಾರತದಲ್ಲಿ ಇದೇ ಮೊದಲ ಎನ್ನಲಾಗುತ್ತಿದೆ. ಕೇವಲ ಎರಡು ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಸಿನಿಮಾಕ್ಕೆ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಗೆ 63 ಕೋಟಿ ಕೊಟ್ಟಿರುವುದು ಸಾಮಾನ್ಯವಲ್ಲ.

ಇದನ್ನೂ ಓದಿ:ಒಟಿಟಿಗೆ ಬರುತ್ತಿದೆ ‘ಹನುಮಾನ್ ಅಂಶ್’: ಯಾವಾಗ? ಎಲ್ಲಿ ನೋಡಬಹುದು?

ನವೆಂಬರ್ 27ರಂದು ‘ಹನುಮಾನ್ ಅಂಶ್’ ಸಿನಿಮಾ ಸೋನಿ ಲಿವ್​​ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸ್ಯಾಟಲೈಟ್ ಹಕ್ಕುಗಳನ್ನು ಸಹ ಸೋನಿ ಎಂಟರ್ಟೈನ್​​ಮೆಂಟ್​​ನವರೇ ಖರೀದಿ ಮಾಡಿದ್ದು, ಸೋನಿ ಮ್ಯಾಕ್ಸ್ ಟಿವಿಯಲ್ಲಿ ಸಿನಿಮಾ ಪ್ರಸಾರ ಆಗಲಿದೆ. ಆದರೆ ಟಿವಿಯಲ್ಲಿ ಎಂದು ಪ್ರಸಾರ ಆಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

‘ಹನುಮಾನ್ ಅಂಶ್’ ಸಿನಿಮಾ ಆಗಸ್ಟ್ 7ರಂದು ರಿಲೀಸ್ ಆಗಿತ್ತು. ಅತ್ಯಂತ ಸಣ್ಣ ಬಜೆಟ್​​ನ ಈ ಸಿನಿಮಾ ಸೀಮಿತ ಸ್ಕ್ರೀನ್​​ಗಳಲ್ಲಿ ಮಾತ್ರವೇ ರಿಲೀಸ್ ಆಗಿತ್ತು. ಹೆಚ್ಚಿನ ಚಿತ್ರಮಂದಿರಗಳವರು ಸಿನಿಮಾ ಪ್ರದರ್ಶಿಸಲು ಅವಕಾಶವನ್ನೇ ನೀಡಿರಲಿಲ್ಲ. ಆದರೆ ಕೆಲವೇ ಸ್ಕ್ರೀನ್​​ಗಳಿಂದ ಆರಂಭಿಸಿ ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗುವಷ್ಟರಲ್ಲಿ ಸ್ಕ್ರೀನ್​​ಗಳ ಸಂಖ್ಯೆ 500 ದಾಟಿತ್ತು. ಸಿನಿಮಾ ನೋಡಿದವರ ಬಾಯಿ ಪ್ರಚಾರ ಮಾತ್ರದಿಂದಲೇ ಸಿನಿಮಾದ ಜನಪ್ರಿಯತೆ ದೇಶದಾದ್ಯಂತ ವ್ಯಾಪಿಸಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 452 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us