AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಕಾಲಿಟ್ಟ ‘ವಾರ್ 2’ ಸಿನಿಮಾ: ಇಲ್ಲಿದೆ ವಿವರ

Hritik Roshan-Jr NTR: ಹೃತಿಕ್ ರೋಷನ್ ಮತ್ತು ಜೂ ಎನ್​ಟಿಆರ್ ಒಟ್ಟಾಗಿ ನಟಿಸಿದ್ದ ‘ವಾರ್ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ‘ವಾರ್ 2’ ಸಿನಿಮಾ ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು? ಯಾವ ದಿನದಿಂದ ಸ್ಟ್ರೀಮ್ ಆಗಲಿದೆ? ಮಾಹಿತಿ ಇಲ್ಲಿದೆ...

ಒಟಿಟಿಗೆ ಕಾಲಿಟ್ಟ ‘ವಾರ್ 2’ ಸಿನಿಮಾ: ಇಲ್ಲಿದೆ ವಿವರ
War 2
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Oct 09, 2025 | 2:47 PM

Share

‘ವಾರ್ 2’ (War 2) ಜೂನಿಯರ್ ಎನ್ ಟಿಆರ್ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ. ಈ ವರ್ಷದ ಅತಿದೊಡ್ಡ ಮಲ್ಟಿ-ಸ್ಟಾರರ್ ಚಿತ್ರವಾಗಿ ಮಾರ್ಪಟ್ಟಿರುವ ಈ ಸ್ಪೈ ಆಕ್ಷನ್ ಥ್ರಿಲ್ಲರ್ ನಲ್ಲಿ ಕಿಯಾರಾ ಅಡ್ವಾಣಿ ನಾಯಕಿ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆಯಾಗಿ ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್​ನ ಭಾಗವಾಗಿ ಬಿಡುಗಡೆಯಾಯಿತು. ಅಭಿಮಾನಿಗಳು ನಿರೀಕ್ಷಿಸಿದಷ್ಟು ಉತ್ತಮವಾಗಿರದಿದ್ದರೂ, ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಗಳಿಸಿತು. ಈ ಸಿನಿಮಾ ಒಟಿಟಿಗೆ ಬರುತ್ತಿದೆ.

‘ವಾರ್ 2’ ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ಇಷ್ಟ ಆದವು. ವಿಶೇಷವಾಗಿ ತಾರಕ್ ಮತ್ತು ಹೃತಿಕ್ ನಡುವಿನ ದೃಶ್ಯಗಳು ‘ವಾರ್ 2’ ಚಿತ್ರದ ಹೈಲೈಟ್ ಆಗಿದ್ದವು. ಥಿಯೇಟರ್ ಗಳಲ್ಲಿ ಸಾಧಾರಣವಾಗಿ ಪ್ರದರ್ಶನಗೊಂಡ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಅನೇಕ ಪ್ರೇಕ್ಷಕರು ಕಾಯುತ್ತಿದ್ದಾರೆ. ಅವರ ಕಾಯುವಿಕೆ ಕೊನೆ ಆಗಿದೆ.

‘ವಾರ್ 2’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಸಿದ್ಧ OTT ದೈತ್ಯ ನೆಟ್‌ಫ್ಲಿಕ್ಸ್ ಖರೀದಿಸಿದೆ. ಥಿಯೇಟರ್ ಅಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘ವಾರ್ 2’ ಚಿತ್ರವನ್ನು OTT ಗೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಈ ಚಿತ್ರ ಇಲ್ಲಿಯವರೆಗೆ ಒಟಿಟಿಗೆ ಬಂದಿರಲಿಲ್ಲ. ಈಗ ಸಿನಿಮಾ ಪ್ರಸಾರ ಕಂಡಿದೆ.

ಇದನ್ನೂ ಓದಿ:ಈ ಹಾರರ್ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ; ಕನ್ನಡದಲ್ಲೂ ಇದೆ

ಗುರುವಾರ (ಅಕ್ಟೋಬರ್ 9) ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ‘ವಾರ್ 2’ ಸ್ಟ್ರೀಮಿಂಗ್ ಆಗಲಿದೆ. ಇದು ತೆಲುಗು ಜೊತೆಗೆ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ನೆಟ್‌ಫ್ಲಿಕ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಆದಿತ್ಯ ಚೋಪ್ರಾ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ‘ವಾರ್ 2’ ಅನ್ನು ನಿರ್ಮಿಸಿದ್ದಾರೆ. ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಶುತೋಷ್ ರಾಣಾ, ಅನಿಲ್ ಕಪೂರ್, ವರುಣ್ ಬಂಡೋಲಾ, ವಿಜಯ್ ವಿಕ್ರಮ್ ಸಿಂಗ್ ಮತ್ತು ಇತರರು ವಿವಿಧ ಪಾತ್ರಗಳಲ್ಲಿ ಮಿಂಚಿದ್ದಾರೆ. ಟೈಗರ್ ಶ್ರಾಫ್, ವಾಣಿ ಕಪೂರ್, ಬಾಬಿ ಡಿಯೋಲ್ ಕೂಡ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಪ್ರೀತಮ್ ಸಂಗೀತ ನೀಡಿದ್ದಾರೆ. ಉತ್ತಮ ಆಕ್ಷನ್ ಚಲನಚಿತ್ರಗಳನ್ನು ನೋಡಲು ಬಯಸುವವರಿಗೆ ‘ವಾರ್ 2’ ಉತ್ತಮ ಆಯ್ಕೆ ಎಂದು ಹೇಳಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ