‘ಪಾತಾಳ್ ಲೋಕ್’ ‘ ಸೀರಿಸ್ನಿಂದ ಬದಲಾಯ್ತು ಬದುಕು; 50 ಪಟ್ಟು ಹೆಚ್ಚು ಸಂಬಳ ಪಡೆದ ಜೈದೀಪ್
ಜೈದೀಪ್ ಅಹ್ಲಾವತ್ ಅವರ ಜನ್ಮದಿನದಂದು, ಅವರ ಅದ್ಭುತ ನಟನೆಯಿಂದಾಗಿ ಜನಪ್ರಿಯವಾದ ‘ಪಾತಾಳ್ ಲೋಕ್ 2’ ಸರಣಿಯ ಯಶಸ್ಸು ಮತ್ತು ಅವರ ಸಂಭಾವನೆಯ ಬಗ್ಗೆ ಚರ್ಚಿಸಲಾಗಿದೆ. ಈ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ಅವರ ಪಾತ್ರ ಮತ್ತು ಅವರ ವೃತ್ತಿಪರ ಪ್ರಗತಿಯನ್ನು ಈ ಲೇಖನ ವಿವರಿಸುತ್ತದೆ.

ಜೈದೀಪ್ ಅಹ್ಲಾವತ್ ಅವರಿಗೆ (ಫೆಬ್ರವರಿ 8) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಈ ವರ್ಷ ಅವರಿಗೆ ಸಖತ್ ವಿಶೇಷ. ಅವರ ನಟನೆಯ ‘ಪಾತಾಳ್ ಲೋಕ್ 2’ ಸರಣಿ ಜನವರಿ 27ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಈ ಸರಣಿ ಮೂಡಿ ಬಂದಿದೆ. ಹಾಥಿರಾಮ್ ಚೌಧರಿ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಸಂಭಾವನೆ ವಿಚಾರ ಕೂಡ ಚರ್ಚೆಗೆ ಕಾರಣ ಆಗಿದೆ.
‘ಪಾತಾಳ್ ಲೋಕ್’ ಸರಣಿ ಸೂಪರ್ ಹಿಟ್ ಆಗಿತ್ತು. ಈ ಸರಣಿ ಕೂಡ ಕ್ರೈಮ್ ಥ್ರಿಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಜರ್ನಲಿಸಂ ಲೋಕದ ಕೆಲವು ಕರಾಳ ಸತ್ಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಎರಡನೇ ಭಾಗದಲ್ಲೂ ಒಂದೊಳ್ಳೆಯ ಕಥೆಯ ಜೊತೆಗೆ ಬರಲಾಗಿದೆ. ಈ ಸರಣಿಗೆ ಇವರು ಪಡೆದ ಸಂಭಾವನೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಜೈದೀಪ್ ಅಹ್ಲಾವತ್ ಅವರು ಹಾಥಿರಾಮ್ ಚೌಧರಿ ಪಾತ್ರದಲ್ಲಿ ಮುಂದವುರಿದಿದ್ದಾರೆ. ಅವರು ಮೊದಲ ಸೀಸನ್ಗಿಂತ 50 ಪಟ್ಟು ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಅವರು 40 ಲಕ್ಷ ರೂಪಾಯಿನ ಮೊದಲ ಸೀಸನ್ಗೆ ಪಡೆದಿದ್ದರು. ಅವರ ಖ್ಯಾತಿ ಹೆಚ್ಚಿದ್ದರಿಂದ ಎರಡನೇ ಸೀಸನ್ಗೆ 20 ಕೋಟಿ ರೂಪಾಯಿ ಪಡೆದರು ಎನ್ನುತ್ತಿದೆ ವರದಿ.
2020ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಶೋ ಪ್ರಸಾರ ಕಂಡಿತು. ಹಾಥಿರಾಮ್ ಆಗಿ ಜೈದೀಪ್ ನಟನೆ ಎಲ್ಲರಿಗೂ ಇಷ್ಟ ಆಯಿತು. ಇದನ್ನು ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಮೊದಲ ಸೀಸನ್ನಲ್ಲಿ ಅನುಷ್ಕಾ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಟೀಸರ್ ಮೂಲಕ ಭಾರಿ ನಿರೀಕ್ಷೆ ಸೃಷ್ಟಿಸಿದ ‘ಪಾತಾಳ್ ಲೋಕ್ 2’ ವೆಬ್ ಸಿರೀಸ್
‘ಪಾತಾಳ್ ಲೋಕ್ 2’ ಇನ್ವೆಸ್ಟಿಗೇಷನ್ ಡ್ರಾಮಾ ಕಥೆ ಹೊಂದಿದೆ. ನಾಗಾಲ್ಯಾಂಡ್ನ ಪ್ರಮುಖ ವ್ಯಕ್ತಿಯ ಕೊಲೆ ಆಗುತ್ತದೆ. ಈ ಕೊಲೆಯನ್ನು ಬೆನ್ನತ್ತಿ ಹೋಗುವ ಹಾಥಿರಾಮ್ ಅವರು ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಾರೆ. ಗೆಳೆಯನನ್ನೂ ಅವರು ಕಳೆದುಕೊಳ್ಳುತ್ತಾರೆ. ಜೈದೀಪ್ ಅವರು 2010ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ರಾಝಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಕೆಲವು ವೆಬ್ ಸೀರಿಸ್ಗಳಲ್ಲೂ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.