ಒಟಿಟಿಗೆ ಬರಲು ರೆಡಿ ಆಯ್ತು ‘ಜೈಲರ್ 2’; ಹೆಚ್ಚುವರಿಯಾಗಿ 30 ನಿಮಿಷ ಸೇರ್ಪಡೆ?

ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಕಟ್ ಮಾಡಲಾಗಿದ್ದ ಮೋಹನ್‌ಲಾಲ್ ಹಾಗೂ ವಿಜಯ್ ಸೇತುಪತಿ ಅವರ ದೃಶ್ಯಗಳು ಸೇರಿದಂತೆ ಸುಮಾರು ಮೂವತ್ತು ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸಲಾಗುವುದು ಎಂಬ ವರದಿಗಳು ಬಂದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಒಟಿಟಿಗೆ ಬರಲು ರೆಡಿ ಆಯ್ತು ‘ಜೈಲರ್ 2’; ಹೆಚ್ಚುವರಿಯಾಗಿ 30 ನಿಮಿಷ ಸೇರ್ಪಡೆ?
ಜೈಲರ್ 2

Updated on: Nov 05, 2026 | 2:40 PM

ಮುಖ್ಯಾಂಶಗಳು

  • ಒಟಿಟಿಯಲ್ಲಿ ಶುರುವಾಗಲಿದೆ ‘ಜೈಲರ್ 2’ ಅಬ್ಬರ
  • ಮೂವತ್ತು ನಿಮಿಷಗಳ ಎಕ್ಸ್‌ಟೆಂಡೆಡ್ ಕಟ್ ಬಿಡುಗಡೆ ಸುಳಿವು
  • ಕೈಬಿಟ್ಟಿದ್ದ ದೃಶ್ಯಗಳಿಗೆ ಮರುಜೀವ

ತಮಿಳು ನಟ ರಜನಿಕಾಂತ್ ಅಭಿನಯದ ‘ಜೈಲರ್ 2‘ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಡಿಜಿಟಲ್ ಪ್ರೀಮಿಯರ್ ಕುರಿತು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿದೆ. ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದ ಅಭಿಮಾನಿಗಳು ಈಗ ಒಟಿಟಿ ರಿಲೀಸ್​​ಗೆ ಕಾಯುತ್ತಿದ್ದಾರೆ. ಈ ಕಾಯುವಿಕೆಗೆ ಕಾರಣ ಆಗಿದ್ದು ತಂಡ ತೆಗೆದುಕೊಂಡ ಒಂದು ನಿರ್ಧಾರ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಬರಲಿದೆ. ವಿಶೇಷವೆಂದರೆ, ಒಟಿಟಿ ರಿಲೀಸ್ ವೇಳೆ ಸುಮಾರು ಮೂವತ್ತು ನಿಮಿಷಗಳಷ್ಟು ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರಮಂದಿರಗಳ ಕಟ್‌ನಲ್ಲಿ ಕೈಬಿಡಲಾಗಿದ್ದ ಈ ದೃಶ್ಯಗಳು ಒಟಿಟಿ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಸನ್ ನೆಕ್ಸ್ಟ್ ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ನವೆಂಬರ್ 10ರ ಬಳಿಕ ಒಟಿಟಿಗೆ ಬರಲಿದೆ ಎನ್ನಲಾಗಿದೆ.

Loading...

ಥಿಯೇಟರ್ ರಿಲೀಸ್ ವೇಳೆ ಸಿನಿಮಾದಲ್ಲಿ ಮೋಹನ್‌ಲಾಲ್, ವಿಜಯ್ ಸೇತುಪತಿ, ಶಿವರಾಜ್​ಕುಮಾರ್, ಸಂತಾನಂ ಹಾಗೂ ಹೃತಿಕ್ ರೋಷನ್ ಅವರ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಇದರಿಂದ ಆಯಾ ನಟರ ಅಭಿಮಾನಿಗಳಿಗೆ ತೀವ್ರ ನಿರಾಶೆಯುಂಟಾಗಿತ್ತು. ಅದರಲ್ಲೂ ಶಿವಣ್ಣ ಸ್ಕ್ರೀನ್ ಸ್ಪೇಸ್ ಕಮ್ಮಿ ಆಗಿದ್ದಕ್ಕೆ ಕರ್ನಾಟಕದ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಕತ್ತರಿಸಲ್ಪಟ್ಟ ದೃಶ್ಯಗಳನ್ನು ಈಗ ಒಟಿಟಿಗಾಗಿ ತಯಾರಾಗುತ್ತಿರುವ ವಿಸ್ತೃತ ಆವೃತ್ತಿಯಲ್ಲಿ ಸೇರಿಸುವ ಸಾಧ್ಯತೆಯಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿಯಿದೆ.

ಈ ಬಿಗ್ ಬಜೆಟ್ ಸಿನಿಮಾಗೆ ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್​​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅದ್ಭುತ ಸಂಗೀತ ನೀಡಿದ್ದಾರೆ. ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಎಸ್.ಜೆ. ಸೂರ್ಯ, ವಿದ್ಯಾ ಬಾಲನ್, ಶಿವರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಮೊದಲ ಭಾಗದ ಕಥೆ ಮುಗಿದ ಮೂರು ತಿಂಗಳ ಬಳಿಕ ನಡೆಯುವ ರೋಚಕ ಘಟನೆಗಳನ್ನು ಹಾಗೂ ಕಳುವಾದ ಮೂರು ಕಂಟೈನರ್‌ಗಳ ರಹಸ್ಯವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ; ರಜನಿಕಾಂತ್ ಜೊತೆ ನಟಿಸುವ ಅವಕಾಶ

ಮೂಲ ಕಥೆಯ ಮುಂದುವರಿದ ಭಾಗವಾಗಿ ಬಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಒಟಿಟಿಯಲ್ಲಿ ಬರುವ ಈ ಹೊಸ ಎಕ್ಸ್‌ಟೆಂಡೆಡ್ ಕಟ್ ಆವೃತ್ತಿಯು ಸಿನಿಮಾ ನೋಡಿದವರಿಗೂ ಮತ್ತೆ ಹೊಸ ಅನುಭವ ಸಿಗೋದು ಫಿಕ್ಸ್. ಸದ್ಯದ ಮಟ್ಟಿಗೆ ಅಧಿಕೃತ ಬಿಡುಗಡೆ ದಿನಾಂಕ ಹಾಗೂ ಹೆಚ್ಚುವರಿ ದೃಶ್ಯಗಳ ಕುರಿತು ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ. ಸಿನಿರಸಿಕರು ಮಾತ್ರ ಈ ಬಹುನಿರೀಕ್ಷಿತ ಡಿಜಿಟಲ್ ಪ್ರೀಮಿಯರ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us