ಚಿತ್ರಮಂದಿರಗಳ ಬಳಿಕ ಈಗ ಜೀ5ನಲ್ಲಿ ಅಬ್ಬರಿಸಲು ಸಜ್ಜಾದ ‘ಕರಾವಳಿ’; ಇಲ್ಲಿದೆ ವಿವರ

ಥಿಯೇಟರ್‌ಗಳಲ್ಲಿ ಕಂಬಳ ಪ್ರಿಯರ ಮನಗೆದ್ದ ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಈಗ ಒಟಿಟಿಗೆ ಆಗಮಿಸುತ್ತಿದೆ. ಕರಾವಳಿಯ ಸಂಸ್ಕೃತಿ ಮತ್ತು ಜಿದ್ದಾಜಿದ್ದಿನ ಕಥಾಹಂದರ ಹೊಂದಿರುವ ಈ ರೋಮಾಂಚಕ ಚಿತ್ರವು ಆಗಸ್ಟ್ 28ರಿಂದ ‘ಕನ್ನಡ Zee5’ನಲ್ಲಿ ಪ್ರಸಾರವಾಗಲಿದ್ದು, ಡಿಜಿಟಲ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಚಿತ್ರಮಂದಿರಗಳ ಬಳಿಕ ಈಗ ಜೀ5ನಲ್ಲಿ ಅಬ್ಬರಿಸಲು ಸಜ್ಜಾದ ‘ಕರಾವಳಿ’; ಇಲ್ಲಿದೆ ವಿವರ
ಕರಾವಳಿ ಸಿನಿಮಾ

Updated on: Aug 22, 2026 | 11:29 AM

ಮುಖ್ಯಾಂಶಗಳು

  • ಕಂಬಳದ ಕೆಸರಿನಲ್ಲಿ ಪ್ರಾಣ-ಪ್ರತಿಷ್ಠೆಯ ರಣರಂಗ
  • ಒಟಿಟಿಗೆ ಎಂಟ್ರಿ ಕೊಟ್ಟ ‘ಕರಾವಳಿ’
  • ಡಿಜಿಟಲ್ ಅಂಗಳದಲ್ಲೂ ಧೂಳೆಬ್ಬಿಸಲು ಸಜ್ಜಾದ ‘ಕರಾವಳಿ’

ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ‘ಕಂಬಳ’ ಜಾನಪದ ಕ್ರೀಡೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ‘ಕರಾವಳಿ’ ಸಿನಿಮಾ (Karavali Movie) ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಕರಾವಳಿ ಭಾಗದ ಮಣ್ಣಿನ ಕಥೆ, ಪ್ರಾಣಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧ ಹಾಗೂ ಪ್ರತಿಷ್ಠೆಯ ಜಿದ್ದಾಜಿದ್ದಿನ ಕಥಾಹಂದರ ಹೊಂದಿದ್ದ ಈ ಚಿತ್ರ ಈಗ ಒಟಿಟಿ ಅಂಗಳಕ್ಕೆ ಧುಮುಕಲು ಸಂಪೂರ್ಣವಾಗಿ ಸಜ್ಜಾಗಿದೆ. ಆಗಸ್ಟ್ 28ರಿಂದ ಪ್ರಸಿದ್ಧ ಒಟಿಟಿ ಸಂಸ್ಥೆ ‘ಕನ್ನಡ Zee5’ನಲ್ಲಿ ಈ ಸಿನಿಮಾ ಡಿಜಿಟಲ್ ಪ್ರಸಾರ ಆರಂಭಿಸಲಿದೆ.

‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕಥೆಗೆ ಜೀವ ತುಂಬಿದ್ದಾರೆ. ಹಾಸ್ಯ ನಟ ಮಿತ್ರ ಅವರು ಈ ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿದ್ದಾರೆ. ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಗಮನ ಸೆಳೆಯಿತು.

‘ಕರಾವಳಿ’ ಸಿನಿಮಾ ತೆರೆಕಾಣುವ ಸಮಯದಲ್ಲೇ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕರ ನಡುವೆ ಸಂಭಾವನೆಯ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೂರಿತ್ತು. ಹಣದ ಕಿರಿಕ್‌ನಿಂದಾಗಿ ಪ್ರಜ್ವಲ್ ಡಬ್ಬಿಂಗ್ ಪೂರ್ಣಗೊಳಿಸಿಲ್ಲ ಎಂದು ಚಿತ್ರತಂಡ ಗಂಭೀರ ಆರೋಪ ಮಾಡಿತ್ತು.

ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಕರಾವಳಿ’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?

ಈ ನಡುವೆ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಗಲಾಟೆ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಾವೇರುವಂತೆ ಮಾಡಿತ್ತು. ಪ್ರಸ್ತುತ ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಟ ಪ್ರಜ್ವಲ್ ದೇವರಾಜ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸರಣಿಯೇ ನಡೆದಿತ್ತು. ಈ ವಿವಾದದಿಂದ ಸಿನಿಮಾ ತಂಡ ಸಾಕಷ್ಟು ತೊಂದರೆ ಅನುಭವಿಸಿತ್ತು. ಇದರ ಜೊತೆಗೆ ಸಿನಿಮಾಗೆ ಸ್ವಲ್ಪ ಪ್ರಚಾರ ಕೂಡ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:27 am, Sat, 22 August 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us