‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಥಿಯೇಟರ್​ನಲ್ಲಿ ಬಿಡುಗಡೆ ಕಂಡಿದೆ. ಈಗ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕೇವಲ 30 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿದೆ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿವರ ಇಲ್ಲಿದೆ.

‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ
ಕಾಂತಾರ

Updated on: Oct 31, 2025 | 11:07 AM

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಥಿಯೇಟರ್​ನಲ್ಲಿ ಅಬ್ಬರಿಸಿದ ಬಳಿಕ ಈಗ ಒಟಿಟಿಗೆ ಕಾಲಿಟ್ಟಿದೆ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರಸಾರ ಕಾಣುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಮೆಚ್ಚುಗೆ ಪಡೆಯಿತು. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟು ಎಂಬ ಬಗ್ಗೆ, ಈ ಸಿನಿಮಾದ ಹಿಂದಿ ವರ್ಷನ್ ಒಟಿಟಿಗೆ ಬರೋದು ಯಾವಾಗ ಎಂಬ ಬಗ್ಗೆ ಇಲ್ಲಿದೆ ವಿವರ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಥಿಯೇಟರ್​ನಲ್ಲಿ ಬಿಡುಗಡೆ ಕಂಡಿದೆ. ಈಗ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕೇವಲ 30 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿದೆ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ. ಈ ಸಿನಿಮಾ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ಹಿಟ್ ಆಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾರತದ ಒಟ್ಟಾರೆ ಕಲೆಕ್ಷನ್ 714 ಕೋಟಿ ರೂಪಾಯಿ. ಈ ಚಿತ್ರ ಕನ್ನಡದಲ್ಲಿ 239 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಉತ್ತರ ಭಾರತದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿದ್ದು 243 ಕೋಟಿ ರೂಪಾಯಿ. ತಮಿಳುನಾಡಿನಲ್ಲಿ 70 ಕೋಟಿ ರೂಪಾಯಿ, ಕೇರಳದಲ್ಲಿ 55 ಕೋಟಿ ರೂಪಾಯಿ ಹಾಗೂ ಆಂಧ್ರ ಹಾಗೂ ತೆಲಂಗಾಣದಿಂದ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ
‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ
ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇದನ್ನೂ ಓದಿ: ಒಟಿಟಿ ರಿಲೀಸ್ ದಿನಾಂಕ ಘೋಷಿಸಿದ ಬಳಿಕವೂ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’

ಹಿಂದಿ ಒಟಿಟಿ ರಿಲೀಸ್ ವಿಳಂಬ

ಸದ್ಯ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕನ್ನಡ, ತಮಿಳು, ಮಲಯಾಳಂ ಹಾಗೂ ತಮಿಳು ವರ್ಷನ್ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಹಿಂದಿ ವರ್ಷನ್ ಇನ್ನೂ ಬಿಡುಗಡೆ ಕಂಡಿಲ್ಲ. ಇದನ್ನು ನೋಡಲು ಪ್ರೇಕ್ಷಕರು ಇನ್ನೂ ಒಂದು ತಿಂಗಳು ಕಾಯಬೇಕು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.