AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿಬಿಸಿ ದೃಶ್ಯಗಳನ್ನು ಅನಾಯಾಸವಾಗಿ ಮಾಡಲು ನನ್ನ ಮಾಜಿ ಪತಿಯೇ ಕಾರಣ ಎಂದ ನಟಿ ಕೀರ್ತಿ

ಮದುವೆ ಆದ ಬಳಿಕ ನಟಿ ಇಂಟಿಮೇಟ್​ ದೃಶ್ಯಗಳನ್ನು ಮಾಡುತ್ತಾರೆ ಎಂದಾದರೆ ಅದಕ್ಕೆ ಪತಿ ಒಪ್ಪುವುದಿಲ್ಲ. ಆದರೆ, ಸಾಹಿಲ್ ಸೇಘಲ್ ಜತೆ ವೈವಾಹಿಕ ಜೀವನದಲ್ಲಿದ್ದಾಗ ಈ ರೀತಿಯ ತೊಂದರೆಗಳನ್ನು ನಟಿ ಕೀರ್ತಿ ಅನುಭವಿಸಿಯೇ ಇಲ್ಲವಂತೆ.

ಹಸಿಬಿಸಿ ದೃಶ್ಯಗಳನ್ನು ಅನಾಯಾಸವಾಗಿ ಮಾಡಲು ನನ್ನ ಮಾಜಿ ಪತಿಯೇ ಕಾರಣ ಎಂದ ನಟಿ ಕೀರ್ತಿ
ಕೀರ್ತಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 16, 2022 | 2:45 PM

Share

ಕೆಲ ನಟಿಯರು ಹಸಿಬಿಸಿ ದೃಶ್ಯಗಳಲ್ಲಿ (Intimate) ಕಾಣಿಸಿಕೊಳ್ಳೋಕೆ ಹಿಂಜರಿಯುತ್ತಾರೆ. ಅದರಲ್ಲೂ ಮದುವೆ ಆದ ನಂತರ ಈ ರೀತಿಯ ಪಾತ್ರಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಆದರೆ, ಕೆಲವರು ಹಾಗಲ್ಲ. ಆ ರೀತಿಯ ದೃಶ್ಯಗಳನ್ನು ಕೇವಲ ನಟನೆ ಎಂದು ಮಾತ್ರ ಪರಿಗಣಿಸಿ ಯಾವುದೇ ಮುಜುಗರ ಇಲ್ಲದೆ ಮಾಡುತ್ತಾರೆ. ಈಗ ಖ್ಯಾತ ನಟಿ ಕೀರ್ತಿ ಕಲ್ಹಾರಿ (Kirti Kulhari) ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಫೋರ್ ಮೋರ್ ಶಾಟ್ಸ್​ ಪ್ಲೀಸ್​’ ವೆಬ್ ಸರಣಿಯಲ್ಲಿ ಅವರು ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಅನಾಯಾಸವಾಗಿ ಮಾಡಲು ಕಾರಣರಾದ ಮಾಜಿ ಪತಿಗೆ ಕ್ರೆಡಿಟ್ ಕೊಟ್ಟಿದ್ದಾರೆ ಅವರು.

ಮದುವೆ ಆದ ಬಳಿಕ ನಟಿ ಇಂಟಿಮೇಟ್​ ದೃಶ್ಯಗಳನ್ನು ಮಾಡುತ್ತಾರೆ ಎಂದಾದರೆ ಅದಕ್ಕೆ ಪತಿ ಒಪ್ಪುವುದಿಲ್ಲ. ಈ ಬಗ್ಗೆ ಅಪಸ್ವರ ಕೇಳಿಬರುತ್ತದೆ. ಆದರೆ, ಸಾಹಿಲ್ ಸೇಘಲ್ ಜತೆ ವೈವಾಹಿಕ ಜೀವನದಲ್ಲಿದ್ದಾಗ ಈ ರೀತಿಯ ತೊಂದರೆಗಳನ್ನು ನಟಿ ಕೀರ್ತಿ ಅನುಭವಿಸಿಯೇ ಇಲ್ಲವಂತೆ. ಈ ರೀತಿಯ ದೃಶ್ಯಗಳನ್ನು ಮಾಡಲು ಸಾಹಿಲ್ ಅವರು ಬೆಂಬಲ ನೀಡುತ್ತಿದ್ದರಂತೆ.

‘ನಾನು 2016ರಲ್ಲಿ ಮದುವೆ ಆದೆ. ನನ್ನ ಪತಿಯಾಗಿದ್ದ ಸಾಹಿಲ್ ನಿಜಕ್ಕೂ ನನ್ನನ್ನು ಬೆಂಬಲಿಸಿದರು. ಅವರಿಗೆ ಅಭದ್ರತೆ ಕಾಡುತ್ತಿರಲಿಲ್ಲ. ಇಂಟಿಮೇಟ್ ದೃಶ್ಯಗಳನ್ನು ಮಾಡಬೇಡ ಎಂದು ಅವರು ಎಂದಿಗೂ ಹೇಳಿಲ್ಲ. ಅವರು ನನಗೆ ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಬೆಂಬಲ ನೀಡಿದರು. ನನ್ನ ಪಾತ್ರ ಯಾವ ರೀತಿ ಕೇಳುತ್ತದೆಯೋ ಅದನ್ನು ಮಾಡಲು ಒಪ್ಪುತ್ತಿದ್ದರು. ಇದರಿಂದ ನನಗೆ ಕಾನ್ಫಿಡೆನ್ಸ್ ಬಂತು. ಹೀಗಾಗಿ ನಾನು ಆರಾಮವಾಗಿ ಆ ರೀತಿಯ ದೃಶ್ಯಗಳನ್ನು ಮಾಡುತ್ತಿದ್ದೆ’ ಎಂದಿದ್ದಾರೆ ಅವರು.

‘ಈ ವೆಬ್​ ಸರಣಿಯಲ್ಲಿ ನಟಿಸಿದ ನಾವು ನಾಲ್ಕು ಹುಡುಗಿಯರು ಲೈಂಗಿಕ ದೃಶ್ಯಗಳನ್ನು ಭಿನ್ನ ರೀತಿಯಲ್ಲಿ ನೋಡುತ್ತಿದ್ದೆವು. ಕೆಲವರು ಭಯಗೊಂಡಿದ್ದರು. ಕೆಲವರಿಗೆ ಇದು ಮುಖ್ಯವಾಗಿರಲಿಲ್ಲ. ನನಗೆ ಯಾವುದೇ ಭಯ ಇರಲಿಲ್ಲ. ಕಾನ್ಫಿಡೆನ್ಸ್ ಇತ್ತು. ನಟಿಯಾಗಿ ಅದು ನನಗೆ ಅತಿ ಮುಖ್ಯವಾಗಿತ್ತು’ ಎಂದಿದ್ದಾರೆ ಕೀರ್ತಿ.

ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಲ್ಲ ಎಂಬ ಹೇಳಿಕೆ; ನಟ ಚೇತನ್ ವಿರುದ್ಧ ದೂರು ದಾಖಲು

ಕಳೆದ ವರ್ಷ ಕೀರ್ತಿ ಅವರು ಸಾಹಿಲ್ ಜತೆ ವಿಚ್ಛೇದ ಘೋಷಿಸಿದರು. ಇದು ಸುಲಭದ ನಿರ್ಧಾರ ಆಗಿರಲಿಲ್ಲ ಎಂದು ಅವರು ಹೇಳಿದ್ದರು. ಅಲ್ಲದೆ, ಇಬ್ಬರೂ ಬೇರೆ ಆಗುವುದು ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದರು. ಆದರೆ, ವಿಚ್ಛೇದನಕ್ಕೆ ಅವರು ಕಾರಣ ತಿಳಿಸಿರಲಿಲ್ಲ. ‘ಫೋರ್ ಮೋರ್ ಶಾಟ್ಸ್​ ಪ್ಲೀಸ್’ ಸರಣಿಯ ಹೊಸ ಸೀಸನ್ ಇತ್ತೀಚೆಗಷ್ಟೇ ಪ್ರಸಾರ ಕಂಡಿದೆ.

Published On - 2:45 pm, Wed, 16 November 22