Liger OTT Date: ‘ಲೈಗರ್​’ ಸಿನಿಮಾ ಒಟಿಟಿಗೆ ಬರೋದು ಯಾವಾಗ?

| Updated By: ಮದನ್​ ಕುಮಾರ್​

Updated on: Aug 28, 2022 | 5:33 PM

Liger Movie | Vijay Deverakonda: ‘ಲೈಗರ್​’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರು ಬಾಕ್ಸರ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ವಿಶೇಷ ಮ್ಯಾನರಿಸಂ ಇದೆ.

Liger OTT Date: ‘ಲೈಗರ್​’ ಸಿನಿಮಾ ಒಟಿಟಿಗೆ ಬರೋದು ಯಾವಾಗ?
ವಿಜಯ್ ದೇವರಕೊಂಡ
Follow us on

ಪುರಿ ಜಗನ್ನಾಥ್​ ನಿರ್ದೇಶನದ ‘ಲೈಗರ್​’ ಸಿನಿಮಾ (Liger Movie) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹತ್ತು ಹಲವು ಕಾರಣಗಳಿಂದಾಗಿ ಈ ಚಿತ್ರ ಹೈಪ್​ ಸೃಷ್ಟಿ ಮಾಡಿತ್ತು. ಆಗಸ್ಟ್​ 25ರಂದು ಬಿಡುಗಡೆ ಆದ ಈ ಸಿನಿಮಾದ ಮೇಲೆ ವಿಜಯ್​ ದೇವರಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಬಾಕ್ಸ್​ ಆಫೀಸ್​ ಗಳಿಕೆ ವಿಚಾರದಲ್ಲಿ ‘ಲೈಗರ್​’ ಸಿನಿಮಾ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿತ್ತು. ಅದೇನೇ ಇರಲಿ, ವಿಜಯ್​ ದೇವರಕೊಂಡ (Vijay Deverakonda) ಅವರಿಗೆ ಈ ಸಿನಿಮಾದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿರುವುದಂತೂ ನಿಜ. ಕೊರೊನಾ ಬಳಿಕ ಬದಲಾದ ಈ ಕಾಲಘಟ್ಟದಲ್ಲಿ ಜನರು ಒಟಿಟಿಯಲ್ಲಿ (OTT) ಸಿನಿಮಾ ನೋಡಲು ಬಯಸುತ್ತಿದ್ದಾರೆ. ‘ಲೈಗರ್​’ ಚಿತ್ರ ಯಾವಾಗ ಒಟಿಟಿಗೆ ಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ತೆರೆಕಂಡ ‘ಲೈಗರ್’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಇಷ್ಟು ದಿನ ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ಅವರು ಈಗ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಪರಿಚಿತರಾಗಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡದೇ ಇರುವವರು​ ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡಲಿದ್ದಾರೆ.

‘ಲೈಗರ್’ ತೆರೆಕಂಡು ಕೆಲವೇ ದಿನಗಳು ಕಳೆದಿವೆ. ಹಲವು ಥಿಯೇಟರ್​ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ನಿರ್ಮಾಪಕರು ಈಗಲೇ ಒಟಿಟಿ ರಿಲೀಸ್​ ಡೇಟ್​ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಿದ್ದರೂ ಕೂಡ ಒಂದಷ್ಟು ವರದಿಗಳು ಪ್ರಕಟ ಆಗಿವೆ. ಮೂಲಗಳ ಪ್ರಕಾರ, ಸೆಪ್ಟೆಂಬರ್​ 30ರಂದು ‘ಲೈಗರ್’ ಒಟಿಟಿಗೆ ಬರಲಿದೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಅಧಿಕೃತ ಪ್ರಕಟಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ
Liger Collection: ಅಷ್ಟೆಲ್ಲ ಅಬ್ಬರಿಸಿದ ‘ಲೈಗರ್​’ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್​ ಎಷ್ಟು?
‘ಲೈಗರ್​’ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಹೀರೋಯಿನ್​ ಆದ ಅನನ್ಯಾ ಪಾಂಡೆ
Liger Twitter Review: ‘ಲೈಗರ್​’ ಮೊದಲ ಶೋ ನೋಡಿ ಬಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಯ್ತಾ?
Liger: ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರಕ್ಕೆ ಹೈಪ್ ಹೆಚ್ಚಲು ಇಲ್ಲಿದೆ 5 ಕಾರಣ

‘ಲೈಗರ್​’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರು ಬಾಕ್ಸರ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ವಿಶೇಷ ಮ್ಯಾನರಿಸಂ ಇದೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಅವರು ಕೂಡ ಈ ಚಿತ್ರದಲ್ಲಿ ನಟಿಸಿದ್ದರಿಂದ ಹೆಚ್ಚು ಹೈಪ್​ ಕ್ರಿಯೇಟ್​ ಆಯಿತು. ಹಾಡುಗಳು ಕೂಡ ಸಖತ್​ ಸೌಂಡು ಮಾಡಿದವು. ಅದಕ್ಕೆ ತಕ್ಕಂತೆ ಬಾಕ್ಸ್​ ಆಫೀಸ್​ ಕಲೆಕ್ಷನ್​ ಆಗಿಲ್ಲ ಎಂಬುದು ಬೇಸರದ ಸಂಗತಿ. ಈ ಚಿತ್ರಕ್ಕೆ ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:33 pm, Sun, 28 August 22