ಮತ್ತೆ ಬರ್ತಿದೆ ‘ಲಸ್ಟ್​ ಸ್ಟೋರಿಸ್’; ಕಿಯಾರಾ, ತಮನ್ನಾ ಇರ್ತಾರಾ?

ನೆಟ್‌ಫ್ಲಿಕ್ಸ್‌ನ ಸೂಪರ್ ಹಿಟ್ ಆಂಥಾಲಜಿ ಸಿನಿಮಾ 'ಲಸ್ಟ್ ಸ್ಟೋರೀಸ್' ಮೂರನೇ ಭಾಗದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ನಾಲ್ಕು ಪ್ರಸಿದ್ಧ ನಿರ್ದೇಶಕರು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಾಧಿಕಾ ಆಪ್ಟೆ, ವಿಜಯ್ ವರ್ಮಾ ಸೇರಿದಂತೆ ದೊಡ್ಡ ತಾರಾಗಣವಿದೆ. ಮೊದಲ ಸೀಸನ್‌ನಲ್ಲಿ ಮಿಂಚಿದ್ದ ಕಿಯಾರಾ ಅಡ್ವಾಣಿ ಮತ್ತೆ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಶುರುವಾಗಿದೆ.

ಮತ್ತೆ ಬರ್ತಿದೆ ‘ಲಸ್ಟ್​ ಸ್ಟೋರಿಸ್’; ಕಿಯಾರಾ, ತಮನ್ನಾ ಇರ್ತಾರಾ?
ಕಿಯಾರಾ-ತಮನ್ನಾ

Updated on: Sep 01, 2026 | 8:55 AM

ಮುಖ್ಯಾಂಶಗಳು

  • ನೆಟ್‌ಫ್ಲಿಕ್ಸ್‌ನಲ್ಲಿ 'ಲಸ್ಟ್ ಸ್ಟೋರೀಸ್ 3' ಹವಾ
  • ನಾಲ್ವರು ಖ್ಯಾತ ನಿರ್ದೇಶಕರ ಜುಗಲ್‌ಬಂದಿ
  • ಸೀಸನ್ 3 ಯಲ್ಲಿ ಕಿಯಾರಾ ಅಡ್ವಾಣಿ?

ಬಾಲಿವುಡ್‌ನ ಜನಪ್ರಿಯ ವೆಬ್ ಫಿಲ್ಮ್ ‘ಲಸ್ಟ್ ಸ್ಟೋರೀಸ್’ (Lust Stories) ಈಗ ಮೂರನೇ ಭಾಗದೊಂದಿಗೆ ಮತ್ತೆ ರಂಜಿಸಲು ಸಜ್ಜಾಗಿದೆ. ಈ ಸರಣಿಯ ಮುಂದಿನ ಭಾಗದ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರ ಪ್ರಸಾರವಾಗಲಿದೆ. ಸೆಪ್ಟೆಂಬರ್ 18ರಂದು ಈ ಆ್ಯಂಥಾಲಜಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಈ ಬಾರಿಯ ‘ಲಸ್ಟ್ ಸ್ಟೋರೀಸ್ 3’ ಚಿತ್ರವು ಒಟ್ಟು ನಾಲ್ಕು ಸಣ್ಣ ಕಥೆಗಳನ್ನು ಒಳಗೊಂಡಿರಲಿದೆ. ಖ್ಯಾತ ನಿರ್ದೇಶಕರಾದ ವಿಕ್ರಮಾದಿತ್ಯ ಮೋಟ್ವಾನೆ ಹಾಗೂ ಕಿರಣ್ ರಾವ್ ಚಿತ್ರ ನಿರ್ದೇಶಿಸಿದ್ದಾರೆ. ಶಕುನ್ ಬಾತ್ರಾ ಮತ್ತು ವಿಶಾಲ್ ಭಾರದ್ವಾಜ್ ಕೂಡ ಕಥೆಗಳನ್ನು ನಿರ್ದೇಶಿಸಿದ್ದಾರೆ. ಈ ನಾಲ್ಕು ದಿಗ್ಗಜ ನಿರ್ದೇಶಕರ ಸಾರಥ್ಯ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಚಿತ್ರದಲ್ಲಿ ದೊಡ್ಡ ತಾರಾಗಣವೇ ನೆರೆದಿದೆ. ರಾಧಿಕಾ ಆಪ್ಟೆ, ಕೊಂಕಣ ಸೇನ್ ಶರ್ಮಾ ಹಾಗೂ ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಭಿಷೇಕ್ ಬ್ಯಾನರ್ಜಿ, ಅಲಿ ಫಜಲ್, ರಾಧಿಕಾ ಮದನ್, ಸಿದ್ಧಾರ್ಥ್, ಅದಿತಿ ರಾವ್ ಹೈದರಿ ನಟಿಸಿದ್ದಾರೆ. ಗುರ್‌ಫತೇಹ್ ಪಿರ್ಜಾದಾ ಮತ್ತು ಹೊಸ ನಟಿ ಸನಾ ತಂಪಿ ಕೂಡ ಬಣ್ಣ ಹಚ್ಚಿದ್ದಾರೆ.

ಪ್ರತಿಯೊಂದು ಕಥೆಯೂ ಮಾನವ ಸಂಬಂಧಗಳ ವಿಭಿನ್ನ ಆಯಾಮಗಳನ್ನು ತೆರೆದಿಡಲಿದೆ. ಕಾಮನೆ ಮತ್ತು ಆಸೆಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ. ಈ ಹಿಂದೆ ಬಂದ ಸೀಸನ್ 1 ರಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಪ್ರಸ್ತುತ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಮಾಡುತ್ತಿರುವ ಕಿಯಾರಾ, ಸೀಸನ್ 3ರಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು.ಆದರೆ, ಹಾಗಿಲ್ಲ.

ಇದನ್ನೂ ಓದಿ:  ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು

ಈ ಹಿಂದಿನ ಎರಡು ಭಾಗಗಳು ನೆಟ್‌ಫ್ಲಿಕ್ಸ್‌ನಲ್ಲಿ ಭಾರಿ ಯಶಸ್ಸು ಕಂಡಿದ್ದವು. ವಿಶೇಷವಾಗಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ನಟಿಸಿದ್ದ ಸೀಸನ್ 2 ದೊಡ್ಡ ಸಂಚಲನ ಸೃಷ್ಟಿಸಿತ್ತು. ಈಗ ಮೂರನೇ ಅಧ್ಯಾಯವು ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದೆ ಎಂಬ ಕಾತುರ ಹೆಚ್ಚಾಗಿದೆ. ಈ ಹೊಸ ಸೀಸನ್ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us