ಸಿನಿಮಾಗಳಿಗಿಂತಲೂ ಹೆಚ್ಚಾಗಿ ಈಗ ವೆಬ್ ಸಿರೀಸ್ಗಳು ಧೂಳೆಬ್ಬಿಸುತ್ತಿವೆ. ಲಾಕ್ಡೌನ್ ಬಳಿಕ ಬದಲಾದ ಕಾಲಘಟ್ಟದಲ್ಲಿ ಓಟಿಟಿ ಮೂಲಕ ಮನರಂಜನೆ ಪಡೆಯುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆಯೇ ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ವೆಬ್ ಸಿರೀಸ್ಗಳ (Web Series) ಕಡೆಗೆ ಮುಖ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ‘ನವರಸ’ (Navarasa) ಶೀರ್ಷಿಕೆಯ ಈ ವೆಬ್ ಸರಣಿಯಲ್ಲಿ ತಮಿಳು ಚಿತ್ರರಂಗದ ಅನೇಕ ಸ್ಟಾರ್ ನಟರು ಅಭಿನಯಿಸಿದ್ದಾರೆ. ಈಗ ಟ್ರೇಲರ್ ಮೂಲಕ ಈ ವೆಬ್ ಸಿರೀಸ್ ಕೌತುಕ ಮೂಡಿಸಿದೆ.
‘ನವರಸ’ ವೆಬ್ ಸಿರೀಸ್ನಲ್ಲಿ ಹೆಸರೇ ಸೂಚಿಸುವಂತೆ 9 ಕಥೆಗಳ ಸಂಗಮ ಆಗಿದೆ. 9 ಪ್ರತ್ಯೇಕ ಕಥೆಗಳ ಮೂಲಕ ನವರಸಗಳನ್ನು ವಿವರಿಸಲಾಗಿದೆ. ಪ್ರತಿ ಕಥೆಗೂ ಬೇರೆ ಬೇರೆ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಕಾಲಿವುಡ್ನ ಖ್ಯಾತ ನಿರ್ದೇಶಕರಾದ ಪ್ರಿಯದರ್ಶನ್, ವಸಂತ್ ಎಸ್. ಸಾಯಿ, ಗೌತಮ್ ವಾಸುದೇವ್ ಮೆನನ್, ಅರವಿಂದ್ ಸ್ವಾಮಿ, ಬಿಜೋಯ್ ನಂಬಿಯಾರ್, ಕಾರ್ತಿಕ್ ಸುಬ್ಬರಾಜು, ಕಾರ್ತಿಕ್ ನರೇನ್, ಸರ್ಜುನ್ ಕೆ.ಎಮ್, ರತೀಂದ್ರನ್ ಆರ್. ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
9 Stories, 9 Emotions and one incredible journey. #NavarasaOnNetflix#ManiSir @JayendrasPOV @Suriya_offl @VijaySethuOffl @Actor_Siddharth @thearvindswami @nambiarbejoy @menongautham @karthicknaren_M @karthiksubbaraj @priyadarshandir pic.twitter.com/pSnhi7MEyq
— Netflix India South (@Netflix_INSouth) July 27, 2021
ವಿಜಯ್ ಸೇತುಪತಿ, ಸೂರ್ಯ, ಪ್ರಕಾಶ್ ರೈ, ಸಿದ್ಧಾರ್ಥ್, ಅಶೋಕ್ ಸೆಲ್ವನ್, ನಾಗ ಶೌರ್ಯ, ಪಾರ್ವತಿ ತಿರುವತ್ತು, ರೇವತಿ, ಯೋಗಿ ಬಾಬು, ಅಂಜಲಿ, ಅರವಿಂದ್ ಸ್ವಾಮಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಜು.27ರಂದು ಬಿಡುಗಡೆ ಆಗಿರುವ ಟ್ರೇಲರ್ಗೆ ಮೆಚ್ಚುಗೆ ಸಿಕ್ಕಿದೆ. ನೆಟ್ಫ್ಲಿಕ್ಸ್ ಮೂಲಕ ಆಗಸ್ಟ್ 6ರಂದು ‘ನವರಸ’ ಬಿಡುಗಡೆ ಆಗಲಿದೆ. ತಮಿಳು ಮಾತ್ರವಲ್ಲದೆ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
(ನವರಸ ವೆಬ್ ಸಿರೀಸ್ ಟ್ರೇಲರ್)
ಕನ್ನಡದಲ್ಲೂ ಸಹ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಹಲವು ನಿರ್ದೇಶಕರು ಸೇರಿಕೊಂಡು, ಹಲವು ಕಥೆಗಳನ್ನು ಇಟ್ಟುಕೊಂಡು ಒಂದೇ ಸಿನಿಮಾ ಮಾಡುವ ಕೆಲಸ ಜಾರಿಯಲ್ಲಿದೆ. ‘ಆದ್ದರಿಂದ’ ಮತ್ತು ‘ಪೆಂಟಗಾನ್’ ಚಿತ್ರಗಳಿಗೆ ಹಲವು ನಿರ್ದೇಶಕರು ಕೈ ಜೋಡಿಸಿದ್ದಾರೆ.
ಇದನ್ನೂ ಓದಿ:
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನ ಮುಖ್ಯವಾದ ಸೀಕ್ರೆಟ್ ಬಗ್ಗೆ ಮನೋಜ್ ಬಾಜಪೇಯ್ ಹೇಳಿದ್ದೇನು?
ನೆಟ್ಫ್ಲಿಕ್ಸ್ನಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ವಿಡಿಯೊ ಗೇಮ್ಸ್: ಮಕ್ಕಳಿಗಾಗಿ ಎರಡು ಹೊಸ ಕೊಡುಗೆ ಘೋಷಣೆ