Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬರೋಕೆ ರೆಡಿ ಆಯ್ತು ‘ತಾಂಡೇಲ್’ ಸಿನಿಮಾ; ರಿಲೀಸ್ ಯಾವಾಗ?

ನಾಗ ಚೈತನ್ಯ ಅಭಿನಯದ ‘ತಾಂಡೇಲ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಈಗ 100 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಚಿತ್ರವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಸಾಯಿ ಪಲ್ಲವಿ ಅವರೊಂದಿಗೆ ನಟಿಸಿರುವ ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ.

ಒಟಿಟಿಗೆ ಬರೋಕೆ ರೆಡಿ ಆಯ್ತು ‘ತಾಂಡೇಲ್’ ಸಿನಿಮಾ; ರಿಲೀಸ್ ಯಾವಾಗ?
ನಾಗ ಚೈತನ್ಯ-ಸಾಯಿ ಪಲ್ಲವಿ
Follow us
ರಾಜೇಶ್ ದುಗ್ಗುಮನೆ
|

Updated on: Feb 26, 2025 | 8:46 AM

ನಾಗ ಚೈತನ್ಯ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಕಂಡಿದ್ದು ‘ತಾಂಡೇಲ್’ ಚಿತ್ರದ ಮೂಲಕ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದ ಬಳಿಕ ಒಟಿಟಿಗೆ ಬರೋಕೆ ರೆಡಿ ಆಗಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅವರ ಪರ್ಫಾರ್ಮೆನ್ಸ್​​ನ ಒಟಿಟಿಯಲ್ಲಿ ನೋಡುವ ದಿನ ಹತ್ತಿರವಾಗಿದೆ. ಈ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಇಲ್ಲಿದೆ ಮಾಹಿತಿ.

ನಾಗ ಚೈತನ್ಯ ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಂಡರು. ಅವರಿಗೆ ‘ತಾಂಡೇಲ್’ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಈಗ ಅವರು ಗೆದ್ದು ತೋರಿಸಿದ್ದಾರೆ. ಈ ಮೂಲಕ ವಿವಾಹ ಆದ ಬಳಿಕ ರಿಲೀಸ್ ಆದ ಮೊದಲ ಚಿತ್ರವೇ ಹಿಟ್ ಆಗಿದೆ. ಹೀಗಾಗಿ, ಅನೇಕರು ಶೋಭಿತಾ ಅವರನ್ನು ಅದೃಷ್ಟ ದೇವತೆ ಎನ್ನುತ್ತಿದ್ದಾರೆ. ಈಗ ಸಿನಿಮಾ ಒಟಿಟಿಗೆ ಕಾಲಿಡುತ್ತಿದೆ.

ನೆಟ್​ಫ್ಲಿಕ್ಸ್ ಒಟಿಟಿ ಈ ಚಿತ್ರದ ಹಕ್ಕನ್ನು ಪಡೆದಿದೆ. ಮಾರ್ಚ್​ 7ರಂದು ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ನೈಜ ಘಟನೆ ಆಧರಿಸಿದೆ. ಮೀನುಗಾರನೋರ್ವ ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ಅಂತಾರಾಷ್ಟ್ರೀಯ ಗಡಿ ದಾಟಿ ತೆರಳುತ್ತಾನೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾನೆ. ಇದು ಚಿತ್ರದ ಕಥೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನಾಗ ಚೈತನ್ಯ ಅವರು ‘ತಾಂಡೇಲ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿದ್ದಾರೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮತ್ತಷ್ಟು ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಸದ್ಯ ಥಿಯೇಟರ್​​ನಲ್ಲಿ ಸಿನಿಮಾದ ಹವಾ ಕಡಿಮೆ ಆಗುತ್ತಿದ್ದು, ಚಿತ್ರ ಒಟಿಟಿಗೆ ಬರೋಕೆ ಇದು ಸರಿಯಾದ ಸಮಯ ಎಂದು ತಂಡ ನಿರ್ಧರಿಸಿದಂತೆ ಇದೆ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಾಗ ಚೈತನ್ಯ-ಶೋಭಿತಾ

2023ರಲ್ಲಿ ರಿಲೀಸ್ ಆದ ನಾಗ ಚೈತನ್ಯ ನಟನೆಯ ‘ಕಸ್ಟಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಬಳಿಕ ಅವರು ಒಪ್ಪಿಕೊಂಡಿದ್ದು, ‘ತಾಂಡೇಲ್’. ಸದ್ಯ ನಾಗ ಚೈತನ್ಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ