ನೆಟ್​ಫ್ಲಿಕ್ಸ್​, ಪ್ರೈಮ್​ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ

| Updated By: ರಾಜೇಶ್ ದುಗ್ಗುಮನೆ

Updated on: Sep 09, 2021 | 4:13 PM

ನೆಟ್​ಫ್ಲಿಕ್ಸ್​ ಹಾಗೂ ಮೊದಲಾದ ಪ್ಲಾಟ್​ಫಾರ್ಮ್​ಗಳ ಸಬ್​​ಸ್ಕ್ರಿಪ್ಶನ್​ ಪಡೆಯುವಾಗ ಡೆಬಿಟ್​/ಕ್ರೆಡಿಟ್​ ಕಾರ್ಡ್​ ಮಾಹಿತಿ ನೀಡಬೇಕಾಗುತ್ತದೆ. ಇದರಲ್ಲಿ ಆಟೋ ಪೇಮೆಂಟ್​ ಆಯ್ಕೆ ಕೂಡ ಇದೆ.

ನೆಟ್​ಫ್ಲಿಕ್ಸ್​, ಪ್ರೈಮ್​ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ
ನೆಟ್​ಫ್ಲಿಕ್ಸ್​, ಪ್ರೈಮ್​ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ
Follow us on

ನೀವು ನೆಟ್​ಫ್ಲಿಕ್ಸ್​, ಹಾಟ್​​ಸ್ಟಾರ್​, ಅಮೇಜಾನ್​ ಪ್ರೈಮ್​ ಮೊದಲಾದ ಒಟಿಟಿ ಪ್ಲಾಟ್​​ಫಾರ್ಮ್​ಗಳನ್ನು ಬಳಕೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಸಿಹಿ ಸುದ್ದಿ ಇದೆ. ಆರ್​ಬಿಐ ಮುಂದಿನ ತಿಂಗಳಿಂದ ಹೊಸ ನಿಯಮ ಜಾರಿಗೆ ತರುತ್ತಿದೆ. ಇದರಿಂದ ಗ್ರಾಹಕರಿಗೆ ಒಂದಷ್ಟು ಲಾಭಗಳು ಸಿಗಲಿವೆ.

ನೆಟ್​ಫ್ಲಿಕ್ಸ್​ ಹಾಗೂ ಮೊದಲಾದ ಪ್ಲಾಟ್​ಫಾರ್ಮ್​ಗಳ ಸಬ್​​ಸ್ಕ್ರಿಪ್ಶನ್​ ಪಡೆಯುವಾಗ ಡೆಬಿಟ್​/ಕ್ರೆಡಿಟ್​ ಕಾರ್ಡ್​ ಮಾಹಿತಿ ನೀಡಬೇಕಾಗುತ್ತದೆ. ಇದರಲ್ಲಿ ಆಟೋ ಪೇಮೆಂಟ್​ ಆಯ್ಕೆ ಕೂಡ ಇದೆ. ಅಂದರೆ, ನಿಮ್ಮ ಸಬ್​​ಸ್ಕ್ರಿಪ್ಶನ್​ ಅವಧಿ ಮುಗಿದ ಕೂಡಲೇ ಬ್ಯಾಂಕ್​ನಿಂದ ಸ್ವಯಂಚಾಲಿತವಾಗಿ ಹಣ ಕಟ್​ ಆಗುತ್ತದೆ ಮತ್ತು ನಿಮ್ಮ ಸಬ್​ಸ್ಕ್ರಿಪ್ಶನ್​ ಅವಧಿ ಮುಂದುವರಿಯುತ್ತದೆ. ಇದರಿಂದ ಗ್ರಾಹಕರಿಗೆ ತೊಂದರೆ ಕೂಡ ಇದೆ.

ಉದಾಹರಣೆಗೆ ನಿಮಗೆ ನೆಟ್​​ಫ್ಲಿಕ್ಸ್​ನಲ್ಲಿ ಮುಂದುವರಿಯೋಕೆ ಇಷ್ಟವಿಲ್ಲ. ಆದರೆ, ಆಟೋ ಪೇಮೆಂಟ್​ನಿಂದ ಹಣ ಕಟ್​ ಆಗಿ, ನಿಮ್ಮ ಸಬ್​ಸ್ಕ್ರಿಪ್ಶನ್​ ಅವಧಿ ಮುಂದುವರಿಯುತ್ತದೆ. ಇದರಿಂದ ಅನೇಕ ಗ್ರಾಹಕರು ಅಸಮಾಧಾನ ಹೊರ ಹಾಕಿದ ಉದಾಹರಣೆ ಇದೆ. ಆದರೆ, ಇನ್ನುಮುಂದೆ ಈ ಆಯ್ಕೆ ಇರುವುದಿಲ್ಲ.

ಬ್ಯಾಂಕಿಗ್​ ವ್ಯವಸ್ಥೆಯಲ್ಲಿ ಭದ್ರತೆಗೆ ಹೆಚ್ಚು ಆದ್ಯತೆ ನೀಡಲು ಆರ್​ಬಿಐ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಆರ್​ಬಿಐ ಮಾರ್ಚ್​ 2021ರಲ್ಲಿ ಆದೇಶವೊಂದನ್ನು ಹೊರಡಿಸಿತ್ತು. ಇದರ ಪ್ರಕಾರ ಆಟೋ ಪೇಮೆಂಟ್ ಸೇರಿ ಸಾಕಷ್ಟು ಆಯ್ಕೆಗಳಿಗೆ ಬ್ರೇಕ್​ ಹಾಕುವುದಾಗಿ ತಿಳಿಸಿತ್ತು. ಇದಕ್ಕೆ ಆರು ತಿಂಗಳು ಗಡವು ಕೂಡ ನೀಡಲಾಗಿತ್ತು. ಈ ಗಡವು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳಿಂದ ಹೊಸ ನಿಯಮ ಜಾರಿಗೆ ಬರಲಿದೆ.

‘ಫ್ರಾಡ್​ಗಳನ್ನು ತಡೆಯುವುದು, ಗ್ರಾಹಕರ ಹಿತಾಸಕ್ತಿ ಕಾಯುವುದು ಹೊಸ ನಿಯಮದ ಉದ್ದೇಶ. ಒಂದೊಮ್ಮೆ ಈ ರೀತಿ ಸ್ವಯಂಚಾಲಿತವಾಗಿ ಬಿಲ್​ ಪೇ ಆಗುತ್ತದೆ ಎಂದರೆ 24 ಗಂಟೆ ಮೊದಲು ಗ್ರಾಹಕರಿಗೆ ಮಾಹಿತಿ ನೀಡಬೇಕು. ಈ ಅವಧಿಯಲ್ಲಿ ಆಟೋಪೇಮೆಂಟ್​ ಆಯ್ಕೆಯಿಂದ ಹೊರಬರಲು ಗ್ರಾಹಕರಿಗೆ ಅವಕಾಶವಿದೆ. 5,000 ರೂಪಾಯಿಗಿಂತ ಹೆಚ್ಚಿನ ಹಣ ಆಟೋಪೇಮೆಂಟ್​ ಇದ್ದರೆ ಒಟಿಪಿ ನೀಡೋದು ಕಡ್ಡಾಯವಾಗಿದೆ ’ ಎಂದು ಆರ್​ಬಿಐ ತಿಳಿಸಿದೆ. ಹೊಸ ನಿಯಮದಿಂದ ಗ್ರಾಹಕರಿಗೆ ಸಾಕಷ್ಟು ಸಹಕಾರಿ ಆಗಲಿದೆ.

ಇದನ್ನೂ ಓದಿ: Money Heist 5: ‘ಮನಿ ಹೈಸ್ಟ್​ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್​: ನಾಯಿ ಜೊತೆಗಿನ ವಿಡಿಯೋ ವೈರಲ್​

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ