ಸಾಲು ಸಾಲು ಸರಣಿ, ಸಿನಿಮಾಗಳನ್ನು ರಿಲೀಸ್ ಮಾಡಲು ನೆಟ್‌ಫ್ಲಿಕ್ಸ್ ರೆಡಿ; ಸಿನಿ ಪ್ರಿಯರಿಗೆ ಹಬ್ಬ
ನೆಟ್‌ಫ್ಲಿಕ್ಸ್ 2025ರಲ್ಲಿ ಬಿಡುಗಡೆಯಾಗಲಿರುವ ಹೊಸ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಹಲವು ಚಿತ್ರಗಳು ಸೇರಿವೆ. 'ಅಕ್ಕ', 'ಮಂಡಾಲಾ ಮರ್ಡರರ್ಸ್', 'ದೆಲ್ಲಿ ಕ್ರೈಮ್ 3', 'ರಾಣಾ ನಾಯ್ಡು 2' ಮತ್ತು 'ಸ್ಕ್ವಿಡ್ ಗೇಮ್ 3' ಮುಂತಾದ ಚಿತ್ರಗಳು ಮತ್ತು ಸರಣಿಗಳು ಈ ಪಟ್ಟಿಯಲ್ಲಿ ಸೇರಿವೆ.

ಒಟಿಟಿ ಪ್ಲಾಟ್ಫಾರ್ಮ್ಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್ಸ್ಟಾರ್ ಹೀಗೆ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು ಹೊಸ ಹೊಸ ಸಿನಿಮಾಗಳು ಹಾಗೂ ಸೀರಿಸ್ಗಳನ್ನು ಪ್ರೇಕ್ಷಕರ ಎದುರು ಇಡುತ್ತಿದ್ದಾರೆ. ಅದರ ಪ್ರಚಾರ ಕೂಡ ಜೊರಾಗಿಯೇ ಇರಲಿದೆ. ಈಗ 2025ರಲ್ಲಿ ರಿಲೀಸ್ ಆಗಲಿರುವ ಸೀರಿಸ್ ಹಾಗೂ ಸಿನಿಮಾಗಳನ್ನು ರಿಲೀಸ್ ಮಾಡಲು ನೆಟ್‌ಫ್ಲಿಕ್ಸ್ ರೆಡಿ ಆಗಿದೆ. ಈ ಬಗ್ಗೆ ಘೋಷಣೆ ಮಾಡಿದೆ.
2024ರಲ್ಲಿ ನೆಟ್‌ಫ್ಲಿಕ್ಸ್ ಹಲವು ಸೀರಿಸ್ ಹಾಗೂ ಸಿನಿಮಾಗಳನ್ನು ಪ್ರಸಾರ ಮಾಡಿದೆ. ಕೆಲವು ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡರೆ ಇನ್ನೂ ಕೆಲವು ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ಚಿತ್ರಗಳು ಈ ವರ್ಷ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಾಣುತ್ತಿದೆ. ಆ ಬಗ್ಗೆ ಮಾಹಿತಿ ನೀಡಲಾಗಿದೆ.
ಕೀರ್ತಿ ಸುರೇಶ್ ರಾಧಿಕಾ ಆಪ್ಟೆ ನಟನೆಯ ‘ಅಕ್ಕ’, ವಾಣಿ ಕಪೂರ್, ಸುರ್ವೀನ್ ಛಾವ್ಲಾ ನಟನೆಯ ‘ಮಂಡಾಲಾ ಮರ್ಡರರ್ಸ್’, ಮಾಧವನ್, ಫಾತಿಮಾ ಸನಾ ಶೇಖ್ ಮೊದಲಾದವರು ಅಭಿನಯಿಸಿರೋ ‘ಆಪ್ ಜೈಸಾ ಕೋಯಿ’, ರಾಜ್ಕುಮಾರ್ ರಾವ್ ಅಭಿನಯದ ‘ಟೋಸ್ಟರ್’, ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ ‘ಜೆವೆಲ್ ಥೀಫ್’ ರೀತಿಯ ಸಿನಿಮಾಗಳು ಇದರಲ್ಲಿ ಪ್ರಸಾರ ಕಾಣುತ್ತಿದೆ.
You’re not ready for the biggest, baddest year 💥 The thrills, the action, the drama, the love, the laughs are coming up #NextOnNetflixIndia 🎬 ✨ pic.twitter.com/cIKuWdbu8Z
— Netflix India (@NetflixIndia) February 3, 2025
Sports. Drama. And a hat-trick of a cast. This pitch is all set for this test of life 🏏💥 TEST, a sports drama starring @ActorMadhavan, @NayantharaU, and #Siddharth is coming soon, only on Netflix.#TEST#TESTOnNetflix#NextOnNetflixIndia pic.twitter.com/1cRwMcBfsv
— Netflix India (@NetflixIndia) February 3, 2025
He’s super unlucky. He’s super awkward. He’s super Subbu. Super Subbu is coming soon, only on Netflix.#SuperSubbu#SuperSubbuOnNetflix#NextOnNetflixIndia pic.twitter.com/4YW7hf5XLf
— Netflix India (@NetflixIndia) February 3, 2025
ಸೂಪರ್ ಹಿಟ್ ಆದ ಸೀರಿಸ್ಗಳಲ್ಲಿ ‘ದೆಲ್ಲಿ ಕ್ರೈಮ್’ ಕೂಡ ಒಂದು. ಇದರ ಮೂರನೇ ಸೀಸನ್ ಈ ವರ್ಷ ಪ್ರಸಾರ ಕಾಣಲಿದೆ. ರಾಣಾ ನಟನೆಯ ‘ರಾಣಾ ನಾಯ್ಡು’ ಎರಡನೇ ಸೀಸನ್ ಈ ವರ್ಷ ಪ್ರಸಾರ ಕಾಣಲಿದೆ. ‘ಸ್ಕ್ವಿಡ್ ಗೇಮ್ 3’ ಕೂಡ ಪ್ರಸಾರ ಕಾಣಲಿದೆ.
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಅನ್ನೇ ಕಬ್ಜಾ ಮಾಡಿದ ಅಲ್ಲು ಅರ್ಜುನ್, ಭೇಷ್ ಎಂದ ಅಭಿಮಾನಿಗಳು
ಥಿಯೇಟರ್ನಲ್ಲಿ ರಿಲೀಸ್ ಬಳಿಕ ಕೆಲವು ಸಿನಿಮಾಗಳು ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ. ಇವುಗಳಲ್ಲಿ ಪವನ್ ಕಲ್ಯಾಣ್ ನಟನೆಯ ‘ಒಜಿ’, ಸೂರ್ಯ ನಟನೆಯ ‘ರೆಟ್ರೋ’, ರವಿತೇಜ ನಟನೆಯ ‘ಮಾಸ್ ಜಾತ್ರಾ’, ನಾಗ ಚೈತನ್ಯ ಅಭಿನಯದ ‘ತಾಂಡೇಲ್’, ನಾಗ ಚೈತನ್ಯ ನಟನೆಯ ‘ತಾಂಡೇಲ್’, ನಾಣಿ ನಟನೆಯ ‘ಹಿಟ್ 3’ ಸಿನಿಮಾಗಳು ಇದರಲ್ಲಿ ಒಳಗೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 am, Tue, 4 February 25