ನೆಟ್​ಫ್ಲಿಕ್ಸ್​ ಅರ್ಧ ವಾರ್ಷಿಕ ‘ಟಾಪ್’ ಪಟ್ಟಿ ಬಿಡುಗಡೆ: ಭಾರತದ ಕಂಟೆಂಟ್​ಗಳಿಗೆ ಎಷ್ಟನೇ ಸ್ಥಾನ

|

Updated on: Dec 13, 2023 | 7:12 PM

Netflix: ಒಟಿಟಿ ದೈತ್ಯ ನೆಟ್​ಫ್ಲಿಕ್ಸ್ 2023ರ ಮೊದಲಾರ್ಧದಲ್ಲಿ ಅತಿ ಹೆಚ್ಚು ಸ್ಟ್ರೀಂ ಆದ ಶೋಗಳು ಹಾಗೂ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಯಾವ ಶೋ ಹಾಗೂ ಸಿನಿಮಾ ಹೆಚ್ಚು ಸ್ಟ್ರೀಂ ಆಗಿದೆ? ಇಲ್ಲಿದೆ ಮಾಹಿತಿ.

ನೆಟ್​ಫ್ಲಿಕ್ಸ್​ ಅರ್ಧ ವಾರ್ಷಿಕ ‘ಟಾಪ್’ ಪಟ್ಟಿ ಬಿಡುಗಡೆ: ಭಾರತದ ಕಂಟೆಂಟ್​ಗಳಿಗೆ ಎಷ್ಟನೇ ಸ್ಥಾನ
ನೆಟ್​ಫ್ಲಿಕ್ಸ್
Follow us on

ಒಟಿಟಿ ದೈತ್ಯ ನೆಟ್​ಫ್ಲಿಕ್ಸ್​ (Netflix), ವಾರದ ಟಾಪ್ ಸ್ಟ್ರೀಮಿಂಗ್ ಪಟ್ಟಿಯನ್ನು ಬಹುತೇಕ ಪ್ರತಿವಾರ ಬಿಡುಗಡೆ ಮಾಡುತ್ತಿತ್ತು. ಆದರೆ ಈ ಬಾರಿ ವಾರ್ಷಿಕ ಪಟ್ಟಿ ಬಿಡುಗಡೆ ಮಾಡಿದೆ. ಆದರೆ 2023ರ ಮೊದಲಾರ್ಧ ಅತಿ ಹೆಚ್ಚು ಸ್ಟ್ರೀಮ್ ಆದ ಶೋಗಳ ಪಟ್ಟಿಯನ್ನು ಮಾತ್ರವೇ ನೆಟ್​ಫ್ಲಿಕ್ಸ್​ ಇದೀಗ ಬಿಡುಗಡೆ ಮಾಡಿದೆ. ಪಟ್ಟಿಯ ಟಾಪ್ 10ನಲ್ಲಿ ಭಾರತದ ಯಾವುದೇ ಶೋ ಅಥವಾ ಹೆಸರು ಇಲ್ಲದಿರುವುದು ಹೆಸರಿಲ್ಲದಿರುವುದು ಆಶ್ಚರ್ಯಕರ.

ಜನವರಿಯಿಂದ ಜೂನ್ 2023ರ ವರೆಗೆ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಂ ಆದ ಶೋಗಳ ಪೈಕಿ ಅತಿ ಹೆಚ್ಚು ಅವಧಿಗೆ ಸ್ಟ್ರೀಂ ಆದ ಟಾಪ್ 10 ಶೋಗಳ ಪಟ್ಟಿ ಇಂತಿದೆ.

‘ದಿ ನೈಟ್ ಏಜೆಂಟ್’ ಸೀಸನ್ 1

‘ಗಿನ್ನಿ ಆಂಡ್ ಜಾರ್ಜಿಯಾ’ ಸೀಸನ್ 2

‘ದಿ ಗ್ಲೋರಿ’ ಸೀಸನ್ 1

‘ವೆಡ್​ನೆಸ್​ ಡೇ’ ಸೀಸನ್ 1

‘ಕ್ವೀನ್ ಶಾರ್ಲೊಟ್ಟೆ: ದಿ ಬ್ರಿಡ್ಜರ್​ಟನ್ ಸ್ಟೋರಿ’

‘ಯೂ’ ಸೀಸನ್ 4

‘ಲಾ ರಿಯೆನಾ ಡೆನ್ ಸೂರ್’ ಸೀಸನ್ 3

’ಔಟರ್ ಬ್ಯಾಂಕ್ಸ್‘ ಸೀಸನ್ 3

‘ಗಿನ್ನಿ ಆಂಡ್ ಜಾರ್ಜಿಯಾ’ ಸೀಸನ್ 1

‘ಫ್ಯೂಬರ್’ ಸೀಸನ್ 1

ಇವುಗಳಲ್ಲಿ ದಿ ನೈಟ್ ಏಜೆಂಟ್ ಸೀಸನ್ 1, 80 ಕೋಟಿಗೂ ಹೆಚ್ಚು ಗಂಟೆಗಳ ಕಾಲ ಸ್ಟ್ರೀಂ ಆಗಿದೆ. ಸುಮಾರು 18200 ಶೋ ಹಾಗೂ ಸಿನಿಮಾಗಳು ಮೊದಲಾರ್ಧದಲ್ಲಿ 99% ಪ್ರತಿಷತ ವೀವರ್​ಶಿಪ್​ ಅನ್ನು ನೆಟ್​ಫ್ಲಿಕ್ಸ್​ಗೆ ತಂದುಕೊಟ್ಟಿವೆ. ಈ ಪಟ್ಟಿಯಲ್ಲಿ ಭಾರತದ ಸಿನಿಮಾ ಹಾಗೂ ಶೋಗಳೂ ಇವೆ.

ಇದನ್ನೂ ಓದಿ:ಹೈದರಾಬಾದ್​​ಗೆ ಬಂದು ಮಹೇಶ್ ಬಾಬು ಜೊತೆ ಕಾಫಿ ಕುಡಿದ ನೆಟ್​ಫ್ಲಿಕ್ಸ್ ಸಿಇಒ

ಮೊದಲಾರ್ಧದಲ್ಲಿ ಅತಿ ಹೆಚ್ಚು ಸ್ಟ್ರೀಂ ಆದ ಭಾರತದ ಶೋ ‘ರಾಣಾ ನಾಯ್ಡು’. ಪಟ್ಟಿಯಲ್ಲಿ 330ನೇ ಸ್ಥಾನದಲ್ಲಿ ‘ರಾಣಾ ನಾಯ್ಡು’ ಇದೆ. ಈ ಸರಣಿಯನ್ನು 4.63 ಲಕ್ಷ ಗಂಟೆಗಳ ಕಾಲ ಸ್ಟ್ರೀಂ ಮಾಡಲಾಗಿದೆ. ಇದರ ಬಳಿಕದ ಸ್ಥಾನ ‘ಚೋರ್ ನಿಕಲ್​ಕೆ ಭಾಗಾ’ ಹಾಗೂ ‘ಮಿಷನ್ ಮಜ್ನು’ ಸಿನಿಮಾಗಳದ್ದು. ಈ ಎರಡೂ ಸಿನಿಮಾಗಳು ಕ್ರಮವಾಗಿ 4.17 ಲಕ್ಷ ಹಾಗೂ 3.20 ಲಕ್ಷ ಗಂಟೆಗಳ ಕಾಲ ಸ್ಟ್ರೀಂ ಆಗಿದೆ. ಅದರ ನಂತರದ ಸ್ಥಾನ ‘ಇಂಡಿಯನ್ ಮ್ಯಾಚ್ ಮೇಕಿಂಗ್’ ರಿಯಾಲಿಟಿ ಶೋನದ್ದು. ಈ ಶೋ 3 ಲಕ್ಷ ಗಂಟೆಗಳ ಕಾಲ ಸ್ಟ್ರೀಂ ಆಗಿದೆ.

ನೆಟ್​ಫ್ಲಿಕ್ಸ್​ನಲ್ಲಿ ಹವಾ ಎಬ್ಬಿಸಿದ್ದ ‘ಆರ್​ಆರ್​ಆರ್’ ಸಿನಿಮಾ ವೀಕ್ಷಣೆಯಾಗಿರುವುದು 2.71 ಲಕ್ಷ ಗಂಟೆಗಳ ಕಾಲ. ರಾಣಿ ಮುಖರ್ಜಿಯ ‘ಮಿಸ್ ಚಟರ್ಜಿ vs ನಾರ್ವೆ’ ಸಿನಿಮಾ 2.92 ಲಕ್ಷ ಗಂಟೆಗಳ ಕಾಲ ಸ್ಟ್ರೀಂ ಆಗಿದೆ. ರಣ್​ಬೀರ್ ಕಪೂರ್ ನಟನೆಯ ‘ತು ಝೂಟಿ ಮೇ ಮಕ್ಕಾರ್’ ಹಾಗೂ ಕಾರ್ತಿಕ್ ಆರ್ಯನ್​ರ ‘ಶೆಹಜಾದಾ’ ಸಿನಿಮಾ 2.48 ಲಕ್ಷ ಗಂಟೆಗಳ ಕಾಲ ಸ್ಟ್ರೀಂ ಆಗಿದೆ.

ನೆಟ್​ಫ್ಲಿಕ್ಸ್​ ಕಂಟೆಂಟ್ ಸ್ಟ್ರೀಮಿಂಗ್ ಮಾಹಿತಿ ವಿಚಾರದಲ್ಲಿ ಪಾರದರ್ಶಕತೆ ಪ್ರದರ್ಶಿಸುತ್ತಿಲ್ಲ ಎಂಬ ಸತತ ಆರೋಪ ಕೇಳಿಬರುತ್ತಿದ್ದ ಕಾರಣದಿಂದಾಗಿ ಇದೀಗ ನೆಟ್​ಫ್ಲಿಕ್ಸ್​ ಈ ಅರ್ಧವಾರ್ಷಿಕ ವರದಿ ಬಿಡುಗಡೆ ಮಾಡಿದೆ. ‘ಈ ವರದಿಯಲ್ಲಿ ನಿಮ್ಮ ಅಗತ್ಯಕ್ಕಿಂತಲೂ ಮಿಗಿಲಾದ ಮಾಹಿತಿ ಇದೆ’ ಎಂದು ನೆಟ್​ಫ್ಲಿಕ್ಸ್ ಸಿಇಓ ಹೇಳಿದ್ದಾರೆ. ಈ ಮಾಹಿತಿ ನಮ್ಮ ಕಂಟೆಂಟ್ ಕ್ರಿಯೇಟರ್​ಗಳಿಗೂ ಸಹಾಯವಾಗಲಿದೆ ಎಂಬ ಭರವಸೆ ಇದೆ ಎಂದು ನೆಟ್​ಫ್ಲಿಕ್ಸ್ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ