AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​​ಗೆ ಬಂದು ಮಹೇಶ್ ಬಾಬು ಜೊತೆ ಕಾಫಿ ಕುಡಿದ ನೆಟ್​ಫ್ಲಿಕ್ಸ್ ಸಿಇಒ

ಟೆಡ್ ಸೆರಾಂಡಸ್ ಅವರು ಇತ್ತೀಚೆಗೆ ಹೈದರಾಬಾದ್​ಗೆ ಆಗಮಿಸಿದ್ದಾರೆ. ಅವರು ನೇರವಾಗಿ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಭಾರತೀಯ ಸಿನಿಮಾ ರಂಗದ ಕುರಿತು, ಇಲ್ಲಿನ ಬೆಳವಣಿಗೆ ಕುರಿತು ಮಾತುಕತೆ ನಡೆದಿದೆ.

ಹೈದರಾಬಾದ್​​ಗೆ ಬಂದು ಮಹೇಶ್ ಬಾಬು ಜೊತೆ ಕಾಫಿ ಕುಡಿದ ನೆಟ್​ಫ್ಲಿಕ್ಸ್ ಸಿಇಒ
ಮಹೇಶ್ ಬಾಬು
Follow us
ರಾಜೇಶ್ ದುಗ್ಗುಮನೆ
|

Updated on: Dec 09, 2023 | 12:37 PM

ಮಹೇಶ್ ಬಾಬು (Mahesh Babu) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕೇವಲ ಆಂಧ್ರ ಪ್ರದೇಶ, ಕರ್ನಾಟಕ, ತಮಿಳು ನಾಡು ಮಾತ್ರವಲ್ಲದೇ ವಿದೇಶದಲ್ಲೂ ಅವರನ್ನು ಇಷ್ಟಪಡುವ ಅನೇಕರಿದ್ದಾರೆ. ಈಗ ಅವರನ್ನು ನೆಟ್​ಫ್ಲಿಕ್ಸ್ ಸಿಇಒ ಟೆಡ್ ಸೆರಾಂಡಸ್ ಭೇಟಿ ಮಾಡಿದ್ದಾರೆ. ಹೈದರಾಬಾದ್​ನಲ್ಲಿರುವ ಮಹೇಶ್ ಬಾಬು ಮನೆಗೆ ಟೆಡ್ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಮಹೇಶ್ ಬಾಬು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟೆಡ್ ಸೆರಾಂಡಸ್ ಅವರು ಇತ್ತೀಚೆಗೆ ಹೈದರಾಬಾದ್​ಗೆ ಆಗಮಿಸಿದ್ದಾರೆ. ಅವರು ನೇರವಾಗಿ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಭಾರತೀಯ ಸಿನಿಮಾ ರಂಗದ ಕುರಿತು, ಇಲ್ಲಿನ ಬೆಳವಣಿಗೆ ಕುರಿತು ಮಾತುಕತೆ ನಡೆದಿದೆ. ಆ ಬಳಿಕ ಅವರು ಮಹೇಶ್ ಬಾಬು ಮನೆಗೆ ತೆರಳಿದ್ದಾರೆ. ಮಾತುಕತೆಯಲ್ಲಿ ಏನೆಲ್ಲ ನಡೆದಿದೆ ಎನ್ನುವ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.

ಇಂದು (ಡಿಸೆಂಬರ್ 9) ಬೆಳಿಗ್ಗೆ ಟೆಡ್ ಸೆರಾಂಡಸ್ ಹಾಗೂ ಮಹೇಶ್ ಬಾಬು ಭೇಟಿ ಆಗಿದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ಕೂಡ ಈ ಸಂದರ್ಭದಲ್ಲಿ ಇದ್ದರು. ‘ಕಾಫಿ ಹೀರಿ ಚಿಲ್ ಮಾಡಿದೆವು. ದೂರದೃಷ್ಟಿಯುಳ್ಳ ಟೆಡ್​ ಸೆರಾಂಡಸ್​ ಮತ್ತು ಅವರ ತಂಡದೊಂದಿಗೆ ಎಂಟರ್​​ಟೇನ್​ಮೆಂಟ್ ಇಂಡಸ್ಟ್ರಿಯ ಭವಿಷ್ಯದ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳ ಕುರಿತು ಚರ್ಚೆ ಮಾಡಿದೆವು’ ಎಂದು ಮಹೇಶ್ ಬಾಬು ಮಾತನಾಡಿದ್ದಾರೆ.

ಇದನ್ನೂ ಓದಿ: ನಾಗಾರ್ಜುನ ಹೊಸ ಸಿನಿಮಾ ‘ನಾ ಸಾಮಿ ರಂಗ’; ಮಹೇಶ್ ಬಾಬು ಜೊತೆ ಕ್ಲ್ಯಾಶ್​ ಆಗುತ್ತಾ ಈ ಚಿತ್ರ?

ಸದ್ಯ ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು
ನನ್ನ ಪತಿಯನ್ನು ಕೊಂದವರ ಎನ್ಕೌಂಟರ್ ಆಗಬೇಕು: ಶೃತಿ
ನನ್ನ ಪತಿಯನ್ನು ಕೊಂದವರ ಎನ್ಕೌಂಟರ್ ಆಗಬೇಕು: ಶೃತಿ
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು