
ರಣ್ವೀರ್ ಸಿಂಗ್ ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ 2025ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಈ ವಾರ ಮತ್ತೊಮ್ಮೆ ಒಟಿಟಿಗೆ ಬಂದಿದೆ. ಕಳೆದ ವರ್ಷ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಜಿಯೋ ಹಾಟ್ಸ್ಟಾರ್ಗನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಇರದಿದ್ದ ಕೆಲ ಸೀನ್ಗಳು ಸಿನಿಮಾನಲ್ಲಿ ಇರಲಿವೆಯಂತೆ.

‘ಔಟ್ ಆಫ್ ಸಿಲೆಬಸ್’ ಒಂದು ಕನ್ನಡ ಸಿನಿಮಾ ಆಗಿದ್ದು, ಪ್ರದೀಪ್ ದೊಡ್ಡಯ್ಯ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾನಲ್ಲಿ ಹೃತಿಕಾ ಶ್ರೀನಿವಾಸ್ ನಾಯಕಿ. ಯೋಗರಾಜ್ ಭಟ್, ಅಚ್ಯುತ್ ಕುಮಾರ್ ಇನ್ನೂ ಕೆಲವರು ನಟಿಸಿದ್ದು, ಸಿನಿಮಾ ಸನ್ ನೆಕ್ಸ್ಟ್ನಲ್ಲಿ ಬಿಡುಗಡೆ ಆಗಿದೆ.

ತೆಲುಗಿನ ಈ ಹಾಸ್ಯ ಸಿನಿಮಾ ಚಿತ್ರಮಂದಿರಗಳಲ್ಲಿ ತುಸು ಸದ್ದು ಮಾಡಿತ್ತು. ತರುಣ್ ಭಾಸ್ಕರ್ ನಾಯಕ, ಫರಿಯಾ ಅದ್ಬುಲ್ಲಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾನಲ್ಲಿ ಶ್ರೀ ವಿಷ್ಣು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಖತ್ ಹಾಸ್ಯಮಯ ಸಿನಿಮಾ ಇದು. ಸಿನಿಮಾ ಪ್ರೈ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

ಕೆಟ್ಟ ಪೊಲೀಸ್ ಮತ್ತು ಒಳ್ಳೆಯ ಪೊಲೀಸ್ ಕುರಿತ ಕತೆಯನ್ನು ಒಳಗೊಂಡಿರುವ ಸಿನಿಮಾ ‘ವಾರೆಂಟ್’. ಸಾಧಾರಣ ವ್ಯಕ್ತಿ ಪೊಲೀಸ್ ಆಗಿ ಅಲ್ಲಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರ, ಅಮಾನವೀಯತೆಯನ್ನು ಪ್ರತಿಭಟಿಸುವ ಆದರೆ ಆ ವಿಷವರ್ತುಲದಲ್ಲಿ ಖುದ್ದು ತಾನೇ ಸಿಕ್ಕಿ ಹಾಕಿಕೊಳ್ಳುವ ಕತೆಯನ್ನು ಒಳಗೊಂಡಿದೆ ‘ವಾರೆಂಟ್’ ಸಿನಿಮಾ. ಈ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸೋನಿ ಲಿವ್ನಲ್ಲಿ ಬಿಡುಗಡೆ ಆಗಿರುವ ‘ಮಧುವೀಡು’ ಮಲಯಾಳಂ ಸಿನಿಮಾ ಹಾಸ್ಯ ಮಿಶ್ರಿತ ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾ ಆಗಿದೆ. ಹಿಂದೂ ಕುಟುಂಬದವರು ಕ್ರಿಶ್ಚಿಯನ್ ಕುಟುಂಬದೊಂದಿಗೆ ಮದುವೆ ಸಂಬಂಧ ಬೆಳೆಸುವ ತಮಾಷೆಯ ಪ್ರಸಂಗ ಸಿನಿಮಾನಲ್ಲಿದೆ.

ಈ ಹಿಂದೆ ವೆಬ್ ಸರಣಿಯಾಗಿ ಭಾರಿ ಯಶಸ್ಸು ಗಳಿಸಿದ್ದ ‘ಜಾಕ್ ರಿಯಾನ್’ ಅನ್ನು ಆಧರಿಸಿ ಇದೀಗ ಆಕ್ಷನ್ ಸಿನಿಮಾ ಬಂದಿದ್ದು, ಈ ಆಕ್ಷನ್ ಸಿನಿಮಾ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜಾಕ್ ರಯಾನ್: ದಿ ಘೋಸ್ಟ್ ವಾರ್’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಈ ವಾರ ವೀಕ್ಷಿಸಬಹುದು.

ದಕ್ಷಿಣದ ಖ್ಯಾತ ನಟಿ ಜ್ಯೋತಿಕಾ ಮತ್ತು ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹ ಒಟ್ಟಿಗೆ ನಟಿಸಿರುವ ಈ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಇದೊಂದು ಕೋರ್ಟ್ ರೂಂ ಡ್ರಾಮಾ ಆಗಿದ್ದು, ಸಮಾಜದ ಅವ್ಯವಸ್ಥೆಗಳ ವಿರುದ್ಧ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.