ನಟ ಪ್ರಭಾಸ್ (Prabhas) ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಬರೀ ಸಿನಿಮಾ ಕೆಲಸಗಳಲ್ಲೇ ಮುಳುಗಿ ಹೋಗಿರುವ ಅವರು ಮದುವೆ ಬಗ್ಗೆ ಇನ್ನೂ ಆಲೋಚನೆ ಮಾಡಿದಂತಿಲ್ಲ. ಅವರು ಎಲ್ಲೇ ಹೋದರೂ ಅಭಿಮಾನಿಗಳು ವಿವಾಹದ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಹಲವು ಸಂದರ್ಶನಗಳಲ್ಲೂ ಪ್ರಭಾಸ್ ಅವರಿಗೆ ಈ ಪ್ರಶ್ನೆ ಎದುರಾಗೋದು ಸಹಜ ಎಂಬಂತಾಗಿದೆ. ಇತ್ತೀಚೆಗೆ ಅವರು ‘ಅನ್ಸ್ಟಾಪಬಲ್’ (Unstoppable) ಟಾಕ್ ಶೋಗೆ ಅತಿಥಿಯಾಗಿ ಹೋಗಿದ್ದಾರೆ. ಅದರಲ್ಲಿಯೂ ಮದುವೆ ಬಗ್ಗೆ ಮಾತು ಬಂದಿದೆ. ಅದಕ್ಕೆ ಪ್ರಭಾಸ್ ಅಚ್ಚರಿಯ ಉತ್ತರ ನೀಡಿದ್ದಾರೆ. ‘ಸಲ್ಮಾನ್ ಖಾನ್ (Salman Khan) ಮದುವೆ ಆದ ನಂತರವೇ ನನ್ನ ಮದುವೆ’ ಎಂದು ಅವರು ಹೇಳಿದ್ದಾರೆ. ಇದರ ಪ್ರೋಮೋ ಸಖತ್ ವೈರಲ್ ಆಗಿದೆ.
ಟಾಲಿವುಡ್ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ‘ಅನ್ಸ್ಟಾಪಬಲ್’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ತೆಲುಗಿನ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಭಾಸ್ ಪಾಲ್ಗೊಂಡಿರುವ ಈ ಸಂಚಿಕೆ ಡಿಸೆಂಬರ್ 30ರಂದು ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಪ್ರಭಾಸ್ ಜೊತೆ ನಟ ಗೋಪಿಚಂದ್ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: Prabhas: ಪ್ರಭಾಸ್ ಹೊಸ ಚಿತ್ರದ ಒಂದೇ ಸೆಟ್ಗೆ 10 ಕೋಟಿ ರೂ. ಸುರಿಯಲು ಮುಂದಾದ ನಿರ್ಮಾಪಕರು
‘ಶರ್ವಾನಂದ್ ಹೇಳ್ತಾಯಿದ್ರು.. ಪ್ರಭಾಸ್ ಮದುವೆ ಆದ್ಮೇಲೆ ಅವರು ಮದುವೆ ಆಗ್ತಾರಂತೆ’ ಎಂದು ಬಾಲಯ್ಯ ಹೇಳಿದರು. ಅದಕ್ಕೆ ಉತ್ತರಿಸಿದ ಪ್ರಭಾಸ್, ‘ಸಲ್ಮಾನ್ ಖಾನ್ ಮದುವೆ ಆದ ನಂತರ ನಾನು ಮದುವೆ ಆಗ್ತೀನಿ’ ಎಂದಿದ್ದಾರೆ. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಈ ಮಸ್ತ್ ಎಪಿಸೋಡ್ ನೋಡಲು ಪ್ರಭಾಸ್ ಅಭಿಮಾನಿಗಳು ಕಾದಿದ್ದಾರೆ.
ಪ್ರಭಾಸ್-ಕೃತಿ ಸನೋನ್ ಬಗ್ಗೆ ಹಬ್ಬಿತ್ತು ಗಾಸಿಪ್:
ಕೆಲವೇ ದಿನಗಳ ಹಿಂದೆ ರಿಯಾಲಿಟಿ ಶೋವೊಂದರಲ್ಲಿ ವರುಣ್ ಧವನ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೋನ್ ಕೂಡ ಇದ್ದರು. ಕರಣ್ ಜೋಹರ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್ ಧವನ್ ಅವರು ಕೃತಿ ಸನೋನ್ ಹೆಸರನ್ನು ಕೈ ಬಿಟ್ಟಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ ವರುಣ್ ಧವನ್ ಅಸಲಿ ವಿಷಯ ಬಾಯ್ಬಿಟ್ಟಿದ್ದರು. ‘ಈ ಪಟ್ಟಿಯಲ್ಲಿ ಕೃತಿ ಸನೋನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ’ ಎಂದು ವರುಣ್ ಧವನ್ ಹೇಳಿದರು. ‘ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಧವನ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸಿದರು.
ಇದನ್ನೂ ಓದಿ: ‘ಹನುಮಾನ್’ ಚಿತ್ರದ ಟೀಸರ್ನಲ್ಲಿ ಬರುವ ಗ್ರಾಫಿಕ್ಸ್ ನೋಡಿ ಪ್ರಭಾಸ್ಗೆ ಚುಚ್ಚಿದ ಸಿನಿಪ್ರಿಯರು
ಗಾಸಿಪ್ಗೆ ಸ್ಪಷ್ಟನೆ ನೀಡಿದ ಕೃತಿ ಸನೋನ್:
‘ಅದು ಪ್ರೀತಿ ಅಲ್ಲ. ಪ್ರಚಾರದ ಗಿಮಿಕ್ ಕೂಡ ಅಲ್ಲ. ರಿಯಾಲಿಟಿ ಶೋನಲ್ಲಿ ವರುಣ್ ಧವನ್ ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಬೇರೆ ಯಾವುದೋ ಮಾಧ್ಯಮದವರು ನನ್ನ ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ನಾನೇ ಆ ಭ್ರಮೆಯನ್ನು ಹೊಡೆದುಹಾಕುತ್ತೇನೆ. ಎಲ್ಲ ವದಂತಿಗಳು ಆಧಾರರಹಿತವಾಗಿವೆ’ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೋನ್ ಬರೆದುಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 pm, Sun, 18 December 22