Family Pack: ಪ್ರೈಮ್ನಲ್ಲಿ ರಿಲೀಸ್ ಆಯ್ತು ಪುನೀತ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’
OTT | Prime Video: ಫೆಬ್ರವರಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಿರುವ ಮೂರು ಚಿತ್ರಗಳು ಪ್ರೈಮ್ನಲ್ಲಿ ಬಿತ್ತರವಾಗಲಿವೆ. ಈ ಪೈಕಿ ಎರಡನೇ ಚಿತ್ರವಾಗಿ ‘ಫ್ಯಾಮಿಲಿ ಪ್ಯಾಕ್’ ಇಂದು ರಿಲೀಸ್ ಆಗಿದೆ.
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಜತೆಜತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿದ್ದರು. ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಅವರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಫೆಬ್ರವರಿಯಲ್ಲಿ ಪುನೀತ್ ನಿರ್ಮಾಣದ ಮೂರು ಚಿತ್ರಗಳು ನೇರವಾಗಿ ಒಟಿಟಿ ಬಿಡುಗಡೆಯಾಗಲಿವೆ ಎಂದು ಘೋಷಿಸಲಾಗಿತ್ತು. ಅದರಂತೆ ದಾನಿಶ್ ಸೇಠ್ ನಟನೆಯ ‘ಒನ್ ಕಟ್ ಟು ಕಟ್’ ಚಿತ್ರ ಫೆಬ್ರವರಿ 3ರಂದು ರಿಲೀಸ್ ಆಗಿದೆ. ಇದೀಗ ‘ಫ್ಯಾಮಿಲಿ ಪ್ಯಾಕ್’ (Family Pack) ಸರದಿ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ‘ಫ್ಯಾಮಿಲಿ ಪ್ಯಾಕ್’, ಇಂದು (ಫೆಬ್ರವರಿ 17) ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿದೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆ ನಿರ್ವಹಿಸಿರುವ ‘ಫ್ಯಾಮಿಲಿ ಪ್ಯಾಕ್’ ಒಂದು ಕಾಮಿಡಿ ಚಿತ್ರ ಎನ್ನುವುದನ್ನು ಈಗಾಗಲೇ ಟ್ರೈಲರ್ ಸಾಬೀತು ಮಾಡಿದೆ. ಚಿತ್ರದಲ್ಲಿ ಮತ್ತೇನೋ ಇದೆ ಎನ್ನುವುದನ್ನೂ ವೀಕ್ಷಕರು ಗುರುತಿಸಿದ್ದರು. ಅದೇನು? ಚಿತ್ರದಲ್ಲಿ ಮತ್ತೇನೇನಿದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದ್ದು, ಪ್ರೈಮ್ನಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.
ಫ್ಯಾಮಿಲಿ ಪ್ಯಾಕ್ ರಿಲೀಸ್ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್:
“ಫ್ಯಾಮಿಲಿ ಪ್ಯಾಕ್” ಚಿತ್ರವನ್ನು ನಿಮಗೆ ಪ್ರಸ್ತುತಪಡಿಸುತ್ತೇವೆ.
Dive in to this amusing story of love, hope and destiny.#FamilyPackOnPrime, watch now on @PrimeVideoIN: https://t.co/BUBskcd1Sr@PRK_Productions @PRKAudio #ArjunKumar @realgurukiran @LikithShetty @amrutha_iyengar
— Ashwini Puneeth Rajkumar (@ashwinipuneet) February 16, 2022
ಫ್ಯಾಮಿಲಿ ಪ್ಯಾಕ್ನಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು ಜತೆಗೆ ಪದ್ಮಜಾ ರಾವ್, ನಾಗಭೂಷಣ್, ಸಿಹಿ ಕಹಿ ಚಂದ್ರು, ಸಾಧು ಕೋಕಿಲ ಮೊದಲಾದ ಕಲಾವಿದರು ಬಣ್ಣಹಚ್ಚಿದ್ದಾರೆ. ಅರ್ಜುನ್ ಕುಮಾರ್ ಎಸ್ ಆಕ್ಷನ್ ಕಟ್ ಹೇಳಿದ್ದು, ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ, ಶ್ರೀಶ ಕುಡುವಳ್ಳಿ, ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಒನ್ ಕಟ್ ಟು ಕಟ್:
ಇತ್ತೀಚೆಗಷ್ಟೇ ದಾನಿಶ್ ಸೇಠ್, ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಒನ್ ಕಟ್ ಟು ಕಟ್’ ರಿಲೀಸ್ ಆಗಿತ್ತು. ಈ ಚಿತ್ರ ವೀಕ್ಷಕರ ಗಮನ ಸೆಳೆದಿತ್ತು. ವಂಶಿಧರ್ ಭೋಗರಾಜು ನಿರ್ದೇಶಿಸಿದ್ದ ಈ ಚಿತ್ರ ಕೂಡ ಸಂಪೂರ್ಣ ಕಾಮಿಡಿ ಎಂಟರ್ಟೈನರ್ ಮಾದರಿಯಲ್ಲಿ ಮೂಡಿಬಂದಿತ್ತು. ಸರ್ಕಾರಿ ಶಾಲೆ ಉಳಿಸಿ ಎಂಬ ಸಂದೇಶವೂ ಚಿತ್ರದಲ್ಲಿತ್ತು.
ಪುನೀತ್ ಈಗಾಗಲೇ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈಗಾಗಲೇ ‘ಕವಲುದಾರಿ’, ‘ಮಾಯಾಬಜಾರ್2016’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ನಿರ್ಮಾಣದ 3 ಹೊಸ ಚಿತ್ರಗಳು ಫೆಬ್ರವರಿಯಲ್ಲಿ ನೇರವಾಗಿ ಒಟಿಟಿಯಲ್ಲಿ ಬಿತ್ತರವಾಗಲಿದೆ. ಇದೀಗ ‘ಫ್ಯಾಮಿಲಿ ಪ್ಯಾಕ್’ ಮೂಲಕ ಎರಡನೇ ಚಿತ್ರ ರಿಲೀಸ್ ಆದಂತಾಗಿದ್ದು, ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಶೀಘ್ರದಲ್ಲೇ ತೆರೆ ಕಾಣಲಿದೆ.
ಇದನ್ನೂ ಓದಿ:
Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..