ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಖುಷಿ ಸುದ್ದಿ; ‘ಗಂಧದಗುಡಿ’ ಒಟಿಟಿ ರಿಲೀಸ್ ದಿನಾಂಕ ರಿವೀಲ್
Gandhdadgudi OTT Release Date: ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿಗೂ ಒಂದು ದಿನ ಮೊದಲು (ಅಕ್ಟೋಬರ್ 28) ಈ ಸಾಕ್ಷ್ಯಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಈಗ ಈ ಡಾಕ್ಯುಮೆಂಟರಿ ಒಟಿಟಿಗೆ ಕಾಲಿಡುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡಿರುವ ನೋವು ಇಷ್ಟು ಬೇಗ ಕಡಿಮೆ ಆಗುವಂಥದ್ದಲ್ಲ. ಸಿನಿಮಾಗಳ ಮೂಲಕ, ಅವರು ಮಾಡಿದ ಒಳ್ಳೆಯ ಕೆಲಸಗಳ ಮೂಲಕ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಅವರು ನಿರ್ಮಿಸಿ ‘ಗಂಧದಗುಡಿ’ ಸಾಕ್ಷ್ಯಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇ ಪ್ರಯುಕ್ತ ಮಾರ್ಚ್ 17ರಂದು ಈ ಡಾಕ್ಯುಮೆಂಟರಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಲಿದೆ. ಈ ಮೂಲಕ ದೊಡ್ಮನೆ ಕುಟುಂಬ ಫ್ಯಾನ್ಸ್ಗೆ ಉಡುಗೊರೆ ನೀಡುತ್ತಿದೆ.
‘ಗಂಧದಗುಡಿ’ ಸಾಕ್ಷ್ಯಚಿತ್ರದಲ್ಲಿ ಕಾಡಿನ ಕಥೆ ಇದೆ. ನಾಗರಹೊಳೆಯಿಂದ ಆರಂಭವಾಗುವ ಪುನೀತ್ ಹಾಗೂ ನಿರ್ದೇಶಕ ಅಮೋಘವರ್ಷ ಪಯಣ ರಾಜ್ಕುಮಾರ್ ಹುಟ್ಟೂರಾದ ಗಾಜನೂರು, ಬಿಆರ್ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು, ಕರಾವಳಿಯ ನೇತ್ರಾಣಿ, ಜೋಗ ಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ ನದಿಯ ಕಡೆಗಳಲ್ಲಿ ಸಾಗಿ ಕಾಳಿ ನದಿಯಲ್ಲಿ ಪೂರ್ಣಗೊಳ್ಳುತ್ತದೆ. ಕರ್ನಾಟಕದ ಅರಣ್ಯ ವೈವಿಧ್ಯತೆಯ ದರ್ಶನ ಈ ಸಾಕ್ಷ್ಯಚಿತ್ರದಿಂದ ಆಗಿದೆ. ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿಗೂ ಒಂದು ದಿನ ಮೊದಲು (ಅಕ್ಟೋಬರ್ 28) ಈ ಸಾಕ್ಷ್ಯಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಈಗ ಈ ಡಾಕ್ಯುಮೆಂಟರಿ ಒಟಿಟಿಗೆ ಕಾಲಿಡುತ್ತಿದೆ.
ಇಂದು (ಮಾರ್ಚ್ 14) ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಈ ವಿಶೇಷ ದಿನದಂದು ‘ಗಂಧದಗುಡಿ’ಯ ಒಟಿಟಿ ರಿಲೀಸ್ ದಿನಾಂಕ ತಿಳಿಸಲಾಗಿದೆ. ಪುನೀತ್ ರಾಜ್ಕುಮಾರ್ ಬರ್ತ್ಡೇಗೆ ಇದು ಅಭಿಮಾನಿಗಳಿಗೆ ಸಿಗುತ್ತಿರುವ ಗಿಫ್ಟ್ ಎಂದು ಕೆಲವರು ಕರೆದಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ಬರ್ತ್ಡೇ: ಹುಟುಹಬ್ಬಕ್ಕೂ ಮೊದಲು 4 ಕೋಟಿ ರೂ. ಕಾರು ಗಿಫ್ಟ್ ಕೊಟ್ಟಿದ್ದ ಅಪ್ಪು
Get ready to explore the marvels of nature on this fascinating musical journey ? #GandhadaGudiOnPrime, Mar 17#GandhadaGudi#DrPuneethRajkumar #Amoghavarsha @AJANEESHB @PRK_Productions @PRKAudio #Mudskipper#GGMovie pic.twitter.com/fSWvliEWCG
— Ashwini Puneeth Rajkumar (@Ashwini_PRK) March 14, 2023
get ready to explore the marvels of nature on this fascinating musical journey ? #GandhadaGudiOnPrime, Mar 17#DrPuneethRajkumar @Ashwini_PRK #Amoghavarsha @AJANEESHB @PRK_Productions @PRKAudio #Mudskipper pic.twitter.com/zATMcYnCzg
— prime video IN (@PrimeVideoIN) March 14, 2023
ಕಳೆದ ವರ್ಷ ಮಾರ್ಚ್ 17ರಂದು ‘ಜೇಮ್ಸ್’ ಸಿನಿಮಾ ರಿಲೀಸ್ ಆಯಿತು. ಇದು ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಈ ವರ್ಷ ಅವರ ಬರ್ತ್ಡೇ ಪ್ರಯುಕ್ತ ‘ಗಂಧದಗುಡಿ’ ಒಟಿಟಿಗೆ ಕಾಲಿಡುತ್ತಿದೆ. ಈ ಡಾಕ್ಯುಮೆಂಟರಿಯಲ್ಲಿ ಪುನೀತ್ ರಾಜ್ಕುಮಾರ್ ಅವರು ಎಷ್ಟು ಸರಳ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿತ್ತು. ತೆರೆಮೇಲೆ ಹೀರೋ ಆಗಿ ಮಿಂಚಿದ ಪುನೀತ್ ಅವರು ಇಲ್ಲಿ ಸಾಮಾನ್ಯರಲ್ಲೇ ಸಾಮಾನ್ಯರಾಗಿ ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Tue, 14 March 23