ಟಾಲಿವುಡ್ ಸ್ಟಾರ್ ಹೀರೋ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ (Game Changer) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಈ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಸಂಸ್ಥೆ ಖರೀದಿಸಿರುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಈ ಸಂಸ್ಥೆಯೇ ಮಾಹಿತಿ ಹಂಚಿಕೊಂಡಿದೆ. ಮೂಲಗಳ ಪ್ರಕಾರ ಬರೋಬ್ಬರಿ 105 ಕೋಟಿ ರೂಪಾಯಿಗೆ ಒಟಿಟಿ ಡೀಲ್ ಕುದುರಿಸಲಾಗಿದೆ. ಈ ಸುದ್ದಿ ಕೇಳಿ ರಾಮ್ ಚರಣ್ (Ram Charan) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.
‘ಗೇಮ್ ಚೇಂಜರ್’ ಸಿನಿಮಾಗೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ರಾಮ್ ಚರಣ್ ಜೊತೆ ಅವರು ಕೈ ಜೋಡಿಸಿರುವುದರಿಂದ ಜನರ ನಿರೀಕ್ಷೆ ಡಬಲ್ ಆಗಿದೆ. ಕಿಯಾರಾ ಅಡ್ವಾಣಿ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚುನಾವಣೆ ಕುರಿತಾದ ಕಥೆ ಈ ಸಿನಿಮಾದಲ್ಲಿ ಇರಲಿದೆ. ರಾಮ್ ಚರಣ್ ಅವರು ಐಎಎಸ್ ಆಫೀಸರ್ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಫ್ಯಾನ್ ಪೇಜ್ನಲ್ಲಿ ಶಿವಣ್ಣನ ವಿಡಿಯೋ ವೈರಲ್; ಏನಿದೆ ಇದರಲ್ಲಿ?
ಒಟಿಟಿ ಸಂಸ್ಥೆಗಳ ನಡುವೆ ಸಖತ್ ಪೈಪೋಟಿ ಇದೆ. ಹೊಸ ಹೊಸ ಸಿನಿಮಾ ಮತ್ತು ವೆಬ್ ಸಿರೀಸ್ಗಳನ್ನು ತಮ್ಮದಾಗಿಸಿಕೊಳ್ಳಲು ಈ ಸಂಸ್ಥೆಗಳು ಸ್ಪರ್ಧೆಗೆ ಬಿದ್ದಿವೆ. ‘ಅಮೇಜಾನ್ ಪ್ರೈಂ ವಿಡಿಯೋ’ ಇತ್ತೀಚೆಗೆ 70 ವಿವಿಧ ಕಂಟೆಂಟ್ಗಳನ್ನು ಅನೌನ್ಸ್ ಮಾಡಿದೆ. ಅದರಲ್ಲಿ ‘ಗೇಮ್ ಚೇಂಜರ್’ ಸಿನಿಮಾ ಕೂಡ ಇದೆ. ಹಾಗಂತ ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ ಎಂದರ್ಥವಲ್ಲ. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕೆಲವು ತಿಂಗಳು ಕಳೆದ ಬಳಿಕ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಅಂದು ರಾಮ್ ಚರಣ್ ಫೋಟೋ ಲೀಕ್, ಇಂದು ‘ಗೇಮ್ ಚೇಂಜರ್’ ಕಥೆಯೇ ಬಹಿರಂಗ
‘ಆರ್ಆರ್ಆರ್’ ಸಿನಿಮಾದ ನಂತರ ರಾಮ್ ಚರಣ್ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಅವರು ನಟಿಸುತ್ತಿರುವ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಇರುವುದರಿಂದ ಒಟಿಟಿ ಹಕ್ಕುಗಳ ಖರೀದಿಗೆ ಪೈಪೋಟಿ ಹೆಚ್ಚಾಗಿದೆ. ‘ಗೇಮ್ ಚೇಂಜರ್’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ತನ್ನದಾಗಿಸಿಕೊಂಡಿದೆ. 105 ಕೋಟಿ ರೂಪಾಯಿಗೆ ವ್ಯವಹಾರ ನಡೆದಿದ್ದು ಹೌದೋ ಅಥವಾ ಎಲ್ಲವೋ ಎಂಬುದರ ಬಗ್ಗೆ ಅಧಿಕೃತವಾಗಿ ಯಾರೂ ಮಾತನಾಡಿಲ್ಲ. ಆದರೆ ಗಾಸಿಪ್ ವಲಯದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.