ಒಂದೆಡೆ ಶಿಲ್ಪಾ ಶೆಟ್ಟಿ (Shilpa Shetty) ಕುಟುಂಬ ಕಷ್ಟಪಡುತ್ತಿದೆ. ಮತ್ತೊಂದೆಡೆ ಅವರ ತಂಗಿ ಶಮಿತಾ ಶೆಟ್ಟಿ (Shamita Shetty) ಅವರು ಬಿಗ್ ಬಾಸ್ (Bigg Boss OTT) ಮನೆಯಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಶಿಲ್ಪಾ ಪತಿ ರಾಜ್ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ದಂಧೆಯ ಆರೋಪಿ ಆಗಿದ್ದಾರೆ. ಒಟ್ಟಿನಲ್ಲಿ ಅವರ ಇಡೀ ಫ್ಯಾಮಿಲಿ ಮೇಲೆ ಜನರು ಈಗ ಕಣ್ಣಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಶಮಿತಾ ಶೆಟ್ಟಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯೊಬ್ಬರು ಕಿಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಶಮಿತಾ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
‘ಬಿಗ್ ಬಾಸ್ ಓಟಿಟಿ’ ಕಾರ್ಯಕ್ರಮವು ವೂಟ್ನಲ್ಲಿ ಪ್ರಸಾರ ಆಗುತ್ತಿದೆ. ಆರು ವಾರಗಳ ಕಾಲ ನಡೆಯುವ ಈ ಶೋಗೆ ಕರಣ್ ಜೋಹರ್ ನಿರೂಪಕರಾಗಿದ್ದಾರೆ. ಟಿವಿಯಲ್ಲಿ ಪ್ರಸಾರ ಆಗುವ ಮಾಮೂಲಿ ಬಿಗ್ ಬಾಸ್ಗಿಂತಲೂ ಈ ಶೋ ಸ್ವಲ್ಪ ಸ್ಟ್ರಾಂಗ್ ಆಗಿದೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಎಬ್ಬಿಸಲು ಪ್ರತಿ ದಿನ ಬೆಳಗ್ಗೆ ಹಾಡು ಪ್ಲೇ ಮಾಡಲಾಗುತ್ತಿದೆ. ಈ ವೇಳೆ ಶಮಿತಾ ಶೆಟ್ಟಿ ಮಲಗಿದ್ದ ಜಾಗಕ್ಕೆ ತೆರಳಿದ ರಾಕೇಶ್ ಬಾಪಟ್ ಅವರು ಕಿಸ್ ಮಾಡಿದ್ದಾರೆ. ಅವರು ಶಮಿತಾ ಕೈಗೆ ಮುತ್ತಿಟ್ಟಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಧಾನವಾಗಿ ಶಮಿತಾ ಮತ್ತು ರಾಕೇಶ್ ಬಾಪಟ್ ನಡುವೆ ಆತ್ಮೀಯತೆ ಹೆಚ್ಚುತ್ತಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಟಾಸ್ಕ್ನಲ್ಲಿ ಶಮಿತಾ ಶೆಟ್ಟಿ ಸೋಲಬೇಕಾಯಿತು. ಬಳಿಕ ಅವರಿಗೆ ಬಿಗ್ ಬಾಸ್ ಸಾದಾ ಶಿಕ್ಷೆ ನೀಡಿದರು. ಅದನ್ನು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಶಮಿತಾ ಅಳಲು ಪ್ರಾರಂಭಿಸಿದರು. ‘ಬಿಗ್ ಬಾಸ್ ಮನೆಯಲ್ಲಿ ತಾರತಮ್ಯ ಆಗುತ್ತಿದೆ. ಪದೇಪದೇ ನಾವು ಒಳ್ಳೆಯವರು ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಬೇಕಾಗಿದೆ. ನನ್ನ ಕುಟುಂಬ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ನಾನು ಬಿಗ್ ಬಾಸ್ಗೆ ಬಂದು ಮೂರ್ಖಳಾದೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಇದನ್ನ ಓದಿ:
‘ನೀನು ಡೈಪರ್ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್ ಆದೇಶ ನೀಡಿದ ಶಮಿತಾ ಶೆಟ್ಟಿ
(Raqesh Bapat wakes Shamita Shetty up with a kiss in Bigg Boss OTT)
Published On - 5:19 pm, Wed, 25 August 21