AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಪಾಳಕ್ಕೆ ಭಾರಿಸುವೆ’ ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಕೂಗಾಡಿದ ಸುಶಾಂತ್ ಮಾಜಿ ಗೆಳತಿ ರಿಯಾ

Rhea Chakraborty: ನಟಿ ರಿಯಾ ಚಕ್ರವರ್ತಿ ಇದೀಗ ‘ರೋಡೀಸ್ ಡಬಲ್ ಎಕ್ಸ್’ ರಿಯಾಲಿಟಿ ಶೋನ ಜಡ್ಜ್​ಗಳಲ್ಲಿ ಒಬ್ಬರು. ಆದರೆ ಇತ್ತೀಚೆಗೆ ಈ ಶೋನ ಎಪಿಸೋಡ್​ ಒಂದರಲ್ಲಿ ರಿಯಾ ಚಕ್ರವರ್ತಿ ಸ್ಪರ್ಧಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಪಾಳಕ್ಕೆ ಹೊಡೆಯುತ್ತೇನೆ ಎಂದಿದ್ದಾರೆ. ನಟಿಯ ಕೋಪಕ್ಕೆ ಕಾರಣವೇನು?

‘ಕಪಾಳಕ್ಕೆ ಭಾರಿಸುವೆ’ ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಕೂಗಾಡಿದ ಸುಶಾಂತ್ ಮಾಜಿ ಗೆಳತಿ ರಿಯಾ
Rhea Chakrabarty
ಮಂಜುನಾಥ ಸಿ.
|

Updated on: Feb 11, 2025 | 10:55 AM

Share

ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ನಿಧನದ ಬಳಿಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮರಳಿ ಬಂದಿರುವ ರಿಯಾ ಚಕ್ರವರ್ತಿ ಮತ್ತೆ ಮನೊರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಯೂಟ್ಯೂಬ್ ಪಾಡ್​ಕಾಸ್ಟ್, ಇನ್​ಸ್ಟಾ ಮಾಡೆಲಿಂಗ್ ಜೊತೆಗೆ ರಿಯಾಲಿಟಿ ಶೋ ಜಡ್ಜ್ ಸಹ ಆಗಿದ್ದಾರೆ. ಆದರೆ ಇತ್ತೀಚೆಗೆ ರಿಯಾಲಿಟಿ ಶೋನ ಎಪಿಸೋಡ್ ಒಂದರಲ್ಲಿ ಸ್ಪರ್ಧಿಯ ವರ್ತನೆಯಿಂದ ಬೇಸರಗೊಂಡ ರಿಯಾ ಏಕಾಏಕಿ ಸ್ಪರ್ಧಿಯ ಮೇಲೆ ಸಿಟ್ಟಾಗಿದ್ದಾರೆ.

ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ‘ರೋಡೀಸ್’ನ ಹೊಸ ಸೀಸನ್ ‘ರೋಡೀಸ್ ಡಬಲ್ ಎಕ್ಸ್’ನ ಜಡ್ಜ್​ ಅಥವಾ ‘ಗ್ಯಾಂಗ್ ಲೀಡರ್’ ಆಗಿದ್ದಾರೆ ರಿಯಾ ಚಕ್ರವರ್ತಿ. ಇತ್ತೀಚೆಗಿನ ಎಪಿಸೋಡ್ ಒಂದರಲ್ಲಿ ರಿಷಬ್ ಹೆಸರಿನ ಸ್ಪರ್ಧಿಗೆ ಕೆಲವು ಟಾಸ್ಕ್​ಗಳನ್ನು ನೀಡಲಾಗಿತ್ತು. ಆತ ಕ್ವಾಲಿಫೈ ಆಗಲು ಬೇರೆ ಬೇರೆ ರೀತಿಯ ಟಾಸ್ಕ್​ಗಳನ್ನು ಮಾಡಬೇಕಿತ್ತು. ಫಿಸಿಕಲ್ ಫಿಟ್​ನೆಸ್ ತೋರಿಸುವ ಜೊತೆಗೆ ಬೆಲ್ಲಿ ಡ್ಯಾನ್ಸ್ ಮಾಡುವುದು, ರಿಯಾ ಚಕ್ರವರ್ತಿಯನ್ನು ಇಂಪ್ರೆಸ್ ಮಾಡುವ ಟಾಸ್ಕ್​ ಸಹ ನೀಡಲಾಗಿತ್ತು.

ಸ್ಪರ್ಧಿ ರಿಷಬ್ ಎಲ್ಲವನ್ನೂ ಮಾಡಿದ, ರಿಯಾ ಚಕ್ರವರ್ತಿಯನ್ನು ಇಂಪ್ರೆಸ್ ಮಾಡಲು ಹಾಡು ಹಾಡುತ್ತಾ ನಟಿಯ ಕೈ ಹಿಡಿದು ಎಳೆದ. ಇದರಿಂದ ರಿಯಾ ಚಕ್ರವರ್ತಿ ಸಿಟ್ಟಾದರು. ಕೂಡಲೇ ಪ್ರತಿಕ್ರಿಯೆ ನೀಡಿದ ನಟಿ ರಿಯಾ ಚಕ್ರವರ್ತಿ, ರಿಷಬ್ ನಿಂದ ಕೈ ಬಿಡಿಸಿಕೊಂಡಿದ್ದಲ್ಲದೆ, ‘ಇದೇ ಕೆಲಸವನ್ನು ಹೊರಗೆಲ್ಲಾದರೂ ನೀನು ಮಾಡಿದ್ದರೆ, ಕಪಾಳಕ್ಕೆ ಹೊಡೆತ ತಿನ್ನುತ್ತಿದ್ದೆ’ ಎಂದರು. ರಿಯಾರ ಆಕ್ರೋಶದ ಪ್ರತಿಕ್ರಿಯೆ ಕಂಡು ಶಾಕ್ ಆದ ರಿಷಬ್ ಕೂಡಲೇ ಕ್ಷಮೆ ಸಹ ಕೇಳಿದ. ಅಲ್ಲಿಗೆ ಪರಿಸ್ಥಿತಿ ತಿಳಿಯಾಯ್ತು.

ಇದನ್ನೂ ಓದಿ:ಆಫರ್ ಸಿಗದೇ ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ ಚೋಪ್ರಾ? ಇದರಲ್ಲಿ ಸತ್ಯ ಎಷ್ಟು?

ಸುಶಾಂತ್ ಸಿಂಗ್ ಮರಣಾನಂತರ ಆ ಆರೋಪ ರಿಯಾ ತಲೆಗೆ ಕಟ್ಟಲಾಗಿತ್ತು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ. ಈ ಪ್ರಕರಣದಲ್ಲಿ ರಿಯಾ ಮತ್ತು ಆಕೆಯ ಸಹೋದರ ಜೈಲು ಸಹ ಸೇರಿದ್ದರು. ಇದೀಗ ರಿಯಾ ಚಕ್ರವರ್ತಿಯ ಹೆಸರು ಬೆಂಗಳೂರಿನ ಖ್ಯಾತ ಉದ್ಯಮಿ ಜಿರೋಧಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಕೇಳಿ ಬರುತ್ತಿದೆ. ಕೆಲ ವಾರಗಳ ಹಿಂದಷ್ಟೆ ಇಬ್ಬರೂ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ವಿದೇಶ ಪ್ರವಾಸಕ್ಕೆ ಸಹ ಹೋಗಿದ್ದರು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ