‘ನೀನು ನಾನು ಬೆಸ್ಟ್ ಫ್ರೆಂಡ್ಸ್ ಅಲ್ಲ’-ರೂಪೇಶ್; ‘ನಿನ್ನನ್ನು ಕಳೆದುಕೊಳ್ಳೋಕೆ ಇಷ್ಟ ಇಲ್ಲ’-ಸಾನ್ಯಾ

| Updated By: ರಾಜೇಶ್ ದುಗ್ಗುಮನೆ

Updated on: Sep 06, 2022 | 9:04 PM

ಈ ವಾರ ಕೆಲವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಪಕ್ಕಾ ಆಗಿದೆ. ಹೀಗಿರುವಾಗಲೇ ಮನೆಯಲ್ಲಿ ಕ್ಲೋಸ್ ಫ್ರೆಂಡ್ಸ್ ಮಧ್ಯೆ ಅಸಮಾಧಾನ ಮೂಡಿದೆ.

‘ನೀನು ನಾನು ಬೆಸ್ಟ್ ಫ್ರೆಂಡ್ಸ್ ಅಲ್ಲ’-ರೂಪೇಶ್; ‘ನಿನ್ನನ್ನು ಕಳೆದುಕೊಳ್ಳೋಕೆ ಇಷ್ಟ ಇಲ್ಲ’-ಸಾನ್ಯಾ
ರೂಪೇಶ್​-ಸಾನ್ಯಾ
Follow us on

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಅಯ್ಯರ್ ಇಬ್ಬರೂ ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿ ಕ್ಲೋಸ್ ಆಗಿದ್ದಾರೆ. ಇವರ ಫ್ರೆಂಡ್​ಶಿಪ್ ಹೈಲೈಟ್ ಆಗುತ್ತಿದೆ. ಇದನ್ನು ಮನೆಯವರು ಬೇರೆಯ ರೀತಿಯಲ್ಲಿ ಅರ್ಥೈಸಿಕೊಂಡಿದ್ದೂ ಇದೆ. ಈ ವಿಚಾರದ ಬಗ್ಗೆ ರೂಪೇಶ್ ಹಾಗೂ ಸಾನ್ಯಾಗೆ (Sanye Iyer) ತೀವ್ರ ಬೇಸರ ಆಗಿತ್ತು. ಆದರೆ, ಈಗ ಇವರ ಫ್ರೆಂಡ್​ಶಿಪ್ ಮಧ್ಯೆ ಬಿರುಕು ಮೂಡುವ ಸೂಚನೆ ಸಿಕ್ಕಿದೆ. ರೂಪೇಶ್ ಹಾಗೂ ಸಾನ್ಯಾ ಇಬ್ಬರೂ ಪರಸ್ಪರ ಬೇಸರ ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಿದೆ. 9 ಸ್ಪರ್ಧಿಗಳು ಉಳಿದುಕೊಂಡಿದ್ದು, ರೂಪೇಶ್, ಸಾನ್ಯಾ ಹಾಗೂ ರಾಕೇಶ್ ಫಿನಾಲೇ ವೀಕ್ ತಲುಪಿದ್ದಾರೆ. ಉಳಿದ ಆರು ಮಂದಿ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಈ ವಾರ ಕೆಲವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಪಕ್ಕಾ ಆಗಿದೆ. ಹೀಗಿರುವಾಗಲೇ ಮನೆಯಲ್ಲಿ ಕ್ಲೋಸ್ ಫ್ರೆಂಡ್ಸ್ ಮಧ್ಯೆ ಅಸಮಾಧಾನ ಮೂಡಿದೆ.

‘ಬಿಗ್ ಬಾಸ್’ನಲ್ಲಿ ಸಾನ್ಯಾ ಹಾಗೂ ಜಶ್ವಂತ್ ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ. ಈ ವಿಚಾರದಲ್ಲಿ ರೂಪೇಶ್ ಹಾಗೂ ನಂದಿನಿ ಇಬ್ಬರಿಗೂ ಬೇಸರ ಇದೆ. ಕೆಲ ದಿನಗಳಿಂದ ಸಾನ್ಯಾ ಅವರು ರೂಪೇಶ್ ಜತೆ ಸರಿಯಾಗಿ ಮಾತನಾಡಿಲ್ಲ. ಈ ವಿಚಾರದಿಂದ ರೂಪೇಶ್​ಗೆ ಬೇಸರ ಆಗಿದೆ. ಇದನ್ನು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ ಅವರು.

ಇದನ್ನೂ ಓದಿ
Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
‘ಬಿಗ್ ಬಾಸ್​ಗೆ ಬಂದಿದ್ದು ಆಟ ಆಡೋಕೆ, ಶೋಕಿ ಮಾಡೋಕೆ’: ಸೋನು ಶ್ರೀನಿವಾಸ್ ಗೌಡ
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

‘ನೀನು ನನ್ನ ಬೆಸ್ಟ್ ಫ್ರೆಂಡ್ ಅಲ್ಲ. ನಾನು ನಿನ್ನ ಕ್ಲೋಸ್ ಫ್ರೆಂಡ್ ಅಷ್ಟೇ. ನೀನು ಜಶ್ವಂತ್​​ಗೆ ಬೆಸ್ಟ್ ಫ್ರೆಂಡ್ಸ್. ಎರಡು ದಿನಗಳಿಂದ ನೀನು ಎಲ್ಲಿದ್ದೀಯೋ ಅಲ್ಲಿ ಹೋಗಿ ನಾನು ಮಾತನಾಡುತ್ತಿದ್ದೇನೆ. ಒಂದೊಮ್ಮೆ ನೀನಿದ್ದಲ್ಲಿ ನಾನು ಬರಲಿಲ್ಲ ಎಂದಿದ್ದರೆ ನಮ್ಮಿಬ್ಬರ ನಡುವೆ ಮಾತುಕತೆಯೇ ಆಗುತ್ತಿರಲಿಲ್ಲ. ನಾನು ಎರಡು ದಿನಗಳಿಂದ ಬೇಸರದಲ್ಲಿ ಇದ್ದೇನೆ. ಅದು ನಿನಗೆ ಅರ್ಥವಾಗಿಯೇ ಇಲ್ಲ’ ಎಂದರು ರೂಪೇಶ್.

ಇದನ್ನೂ ಓದಿ: ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆದ ರೂಪೇಶ್ ಶೆಟ್ಟಿ; ಮನೆಯವರ ಟೀಕೆಗೆ ನೇರ ತಿರುಗೇಟು

ಇದಕ್ಕೆ ಸಾನ್ಯಾ ಉತ್ತರ ನೀಡುವ ಪ್ರಯತ್ನ ಮಾಡಿದರು. ‘ಜಶ್ವಂತ್ ನನ್ನ ಕ್ಲೋಸ್​ ಫ್ರೆಂಡ್ ಅಷ್ಟೇ. ಬೆಸ್ಟ್​ ಫ್ರೆಂಡ್ ಅಲ್ಲವೇ ಅಲ್ಲ. ನಮ್ಮಿಬ್ಬರ ಮಧ್ಯೆ ಒಂದು ಬಾಂಡಿಂಗ್ ಬೆಳೆದಿದೆ. ನಿನ್ನನ್ನು ಕಳೆದುಕೊಳ್ಳೋಕೆ ನನಗೆ ಇಷ್ಟ ಇಲ್ಲ’ ಎಂದರು ಸಾನ್ಯಾ.