ಲಿಂಗ ಬದಲಾವಣೆ ಮಾಡಿಕೊಂಡ ಸೈಶಾಗೆ ಸಹ ಸ್ಪರ್ಧಿ ಮೇಲೆ ಪ್ರೀತಿ; ‘ಇದು ಬಲು ಕಷ್ಟ’ ಎಂದ ಫ್ಯಾಷನ್​ ಡಿಸೈನರ್

| Updated By: ರಾಜೇಶ್ ದುಗ್ಗುಮನೆ

Updated on: Mar 12, 2022 | 2:55 PM

ಸೈಶಾ ಶಿಂಧೆ ಅವರಿಗೆ ಪ್ರತಿಸ್ಪರ್ಧಿ ಮುನಾವರ್ ಫರೂಕಿ ಮೇಲೆ ಫೀಲಿಂಗ್ಸ್​ ಮೂಡಿದೆ. ಟಾಸ್ಕ್​ ಆಡುವ ವೇಳೆ ಮುನಾವರ್​ ಮೇಲೆ ಅವರಿಗೆ ಕನಿಕರ ಉಂಟಾಗಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿದೆ.

ಲಿಂಗ ಬದಲಾವಣೆ ಮಾಡಿಕೊಂಡ ಸೈಶಾಗೆ ಸಹ ಸ್ಪರ್ಧಿ ಮೇಲೆ ಪ್ರೀತಿ; ‘ಇದು ಬಲು ಕಷ್ಟ’ ಎಂದ ಫ್ಯಾಷನ್​ ಡಿಸೈನರ್
ಸೈಶಾ
Follow us on

‘ಲಾಕಪ್​’  (Lock Upp) ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋಅನ್ನು ಕಂಗನಾ ರಣಾವತ್ (Kangana Ranaut)​ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಫ್ಯಾಷನ್​ ಡಿಸೈನರ್​ ಸೈಶಾ ಶಿಂಧೆ (Saisha Shinde) ಕೂಡ ಇದ್ದಾರೆ. ಅವರು ಈ ಮೊದಲು ಲಿಂಗ ಬದಲಾವಣೆ ಮಾಡಿಕೊಂಡಿದ್ದರು. ಆರಂಭದಲ್ಲಿ ಹುಡುಗನಾಗಿದ್ದ ಸೈಶಾ, ಈಗ ಹುಡುಗಿಯಾಗಿ ಬದಲಾಗಿದ್ದಾರೆ. ಅವರು ಲಾಕಪ್​’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಮತ್ತೋರ್ವ ಸ್ಪರ್ಧಿ ಮೇಲೆ ಪ್ರೀತಿ ಮೂಡಿದೆ. ಆದರೆ, ಅದು ಯಶಸ್ಸು ಕಾಣೋಕೆ ಸಾಧ್ಯವೇ ಇಲ್ಲ ಎನ್ನುವ ನೋವನ್ನು ಅವರು ಹೊರಹಾಕಿದ್ದಾರೆ.

ಸೈಶಾ ಶಿಂಧೆ ಅವರಿಗೆ ಪ್ರತಿಸ್ಪರ್ಧಿ ಮುನಾವರ್ ಫರೂಕಿ ಮೇಲೆ ಫೀಲಿಂಗ್ಸ್​ ಮೂಡಿದೆ. ಟಾಸ್ಕ್​ ಆಡುವ ವೇಳೆ ಮುನಾವರ್​ ಮೇಲೆ ಅವರಿಗೆ ಕನಿಕರ ಉಂಟಾಗಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಈಗ ಮೂಡಿರುವ ಭಾವನೆ ತಮ್ಮಲ್ಲೇ ಸಾಯಲಿದೆ ಎಂಬ ವಿಚಾರ ಕೂಡ ಸೈಶಾಗೆ ಸ್ಪಷ್ಟವಾಗಿದೆ. ‘ಫರೂಕಿ ಮೇಲೆ ನನಗೆ ಕ್ರಶ್​​ ಆಗಿದೆ’ ಎಂದು ಸೈಷಾ ಹೇಳಿಕೊಂಡಿದ್ದರು. ಇದನ್ನು ಕೇಳಿದ ಕರಣ್ ಕುಂದ್ರಾ ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವಂತೆ ಕೋರಿದ್ದಾರೆ.

‘ಭಾವನೆಗಳನ್ನು ವ್ಯಕ್ತಪಡಿಸುವುದು, ಪ್ರೀತಿಯನ್ನು ಹೇಳಿಕೊಳ್ಳುವುದು ನಮಗೆ ಅಷ್ಟು ಸುಲಭದ ವಿಚಾರ ಅಲ್ಲ. ನಾವು ಆ ಬಗ್ಗೆ ತುಂಬಾನೇ ಯೋಚಿಸಬೇಕಾಗುತ್ತದೆ’ ಎಂದು ಬೇಸರ ಹೊರಹಾಕಿದರು ಸೈಶಾ.

ಸೈಶಾ ಅವರ ಮೂಲ ಹೆಸರು ಸ್ವಪ್ನಿಲ್ ಶಿಂಧೆ. ಲಿಂಗ ಬದಲಾವಣೆಯ ನಂತರದಲ್ಲಿ ಅವರು ಹೆಸರನ್ನು ಸೈಶಾ ಎಂದು ಬದಲಾಯಿಸಿಕೊಂಡರು. ಈ ಪಯಣದಲ್ಲಿ ಕುಟುಂಬಸ್ಥರು ಸೈಶಾಗೆ ಬೆಂಬಲವಾಗಿ ನಿಂತರು ಅನ್ನೋದು ಮೆಚ್ಚಿಕೊಳ್ಳುವಂತಹ ವಿಷಯ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಸೈಶಾ ಸಂತಸ ಹೊರ ಹಾಕಿದ್ದರು. ‘ಸಾಮಾನ್ಯವಾಗಿ ಮಕ್ಕಳು ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಪೋಷಕರು ಅದಕ್ಕೆ ಬೆಂಬಲ ನೀಡುವುದಿಲ್ಲ. ಆದರೆ, ನನ್ನ ಕುಟುಂಬದವರು ನನ್ನನ್ನು ಬೆಂಬಲಿಸಿದರು’ ಎಂದಿದ್ದಾರೆ ಸೈಶಾ.

ಲಿಂಗ ಬದಲಾವಣೆ ಆಪರೇಷನ್ ಆದ ನಂತರ ಕುಟುಂಬ ಸದಸ್ಯರು ಮೊದಲ ಬಾರಿಗೆ ಸೈಶಾ ಅವರನ್ನು ನೋಡಿದಾಗ ಶಾಕ್​ಗೆ ಒಳಗಾಗಿದ್ದರು. ಈ ಆಪರೇಷನ್​ ನಂತರದಲ್ಲಿ ಸೈಶಾ ಅವರು ನೇರವಾಗಿ ತಮ್ಮ ಸೋದರಸಂಬಂಧಿಯ ಮದುವೆಗೆ ತೆರಳಿದ್ದರು. ಅಲ್ಲಿದ್ದ ಎಲ್ಲರೂ ಅವರನ್ನು ಕಣ್ಣರಳಿಸಿ ನೋಡುತ್ತಿದ್ದರು.

‘ಲಾಕಪ್​’ ಶೋ ಆಲ್ಟ್​ಬಾಲಾಜಿ ಹಾಗೂ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಉಚಿತವಾಗಿ ನೋಡಬಹುದು. ವಿವಾದಿತ 16 ಸ್ಪರ್ಧಿಗಳು ಈ ರಿಯಾಲಿಟಿ ಶೋ ಸೇರಿದ್ದಾರೆ. ಕಂಗನಾ ರಣಾವತ್​ ಇದನ್ನು ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿ: Samantha: ಮತ್ತೊಮ್ಮೆ ಹಾಟ್ ಆಗಿ ಹೆಜ್ಜೆ ಹಾಕಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಸಮಂತಾ

ಮಾದಕ ಲುಕ್​ನಲ್ಲಿ ಕಾಣಿಸಿಕೊಂಡ ಸಮಂತಾ