AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಮತ್ತೊಮ್ಮೆ ಹಾಟ್ ಆಗಿ ಹೆಜ್ಜೆ ಹಾಕಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಸಮಂತಾ

ಬಹುಭಾಷಾ ನಟಿ ಸಮಂತಾ ಕಾಣಿಸಿಕೊಂಡಿದ್ದ ‘ಊ ಅಂಟಾವಾ’ ಹಾಡು ದೊಡ್ಡ ಹಿಟ್ ಆಗಿತ್ತು. ಇದರ ಬೆನ್ನಲ್ಲೇ ನಟಿ ಮತ್ತೊಮ್ಮೆ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ.

Samantha: ಮತ್ತೊಮ್ಮೆ ಹಾಟ್ ಆಗಿ ಹೆಜ್ಜೆ ಹಾಕಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಸಮಂತಾ
ಸಮಂತಾ
TV9 Web
| Updated By: shivaprasad.hs|

Updated on: Mar 10, 2022 | 4:00 PM

Share

ಟಾಲಿವುಡ್ ನಟಿ ಸಮಂತಾ (Samantha) ಇದೀಗ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಫ್ಯಾಮಿಲಿ ಮ್ಯಾನ್ 2’ ಮೂಲಕ ಗುರುತಿಸಿಕೊಂಡ ಅವರಿಗೆ, ಓಟಿಟಿ ಹಾಗೂ ಸೀರೀಸ್​ಗಳಲ್ಲೂ ಭರ್ಜರಿ ಆಫರ್​ಗಳು ಒಲಿಯುತ್ತಿವೆ. ವಿಶೇಷವೆಂದರೆ ನಟಿ ಮಹಿಳಾ ಪ್ರಧಾನ ಕತೆಗಳತ್ತ ಒಲವು ತೋರುತ್ತಿದ್ದಾರೆ. ಇದಕ್ಕೆ ಸದ್ಯ ಅವರ ಬತ್ತಳಿಕೆಯಲ್ಲಿರುವ ಚಿತ್ರಗಳೇ ಸಾಕ್ಷಿ. ಇತ್ತೀಚೆಗೆ ಸಮಂತಾ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ. ‘ಊ ಅಂಟಾವಾ ಮಾವಾ’ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿದ ಸಮಂತಾ ಚಿತ್ರದ ಮೈಲೇಜ್ ಹೆಚ್ಚಲು ಕಾರಣರಾದರು. ಈ ಹಾಡು ಸೂಪರ್ ಹಿಟ್ ಆಗಿದ್ದಲ್ಲದೇ ವಿಶ್ವದೆಲ್ಲೆಡೆ ದೊಡ್ಡ ಟ್ರೆಂಡ್ ಸೃಷ್ಟಿಸಿತು. ಬಾಕ್ಸಾಫೀಸ್​ನಲ್ಲೂ ಕಮಾಯಿ ಮಾಡಿದ ಚಿತ್ರ 300 ಕೋಟಿ ರೂ ಅಧಿಕ ಮೊತ್ತವನ್ನು ಬಾಚಿಕೊಂಡಿತು. ಈ ಹಾಡಿಗೆ ಸಮಂತಾ 1.5 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ಮೊದಲಿಗೆ ಗುಲ್ಲೆಬ್ಬಿತ್ತು. ಆದರೆ ನಂತರದಲ್ಲಿ ಸಮಂತಾ ಪಡೆದಿದ್ದು ಬರೋಬ್ಬರಿ ₹ 5 ಕೋಟಿ ಎಂದು ವರದಿಗಳು ಹೇಳಿದ್ದವು. ಸಮಂತಾರಿಂದ ಚಿತ್ರಕ್ಕಾದ ಲಾಭವನ್ನು ಗಮನಿಸಿದರೆ ಅವರಿಗೆ ನೀಡಿದ ಸಂಭಾವನೆಗೆ ಮೋಸವಿಲ್ಲ ಎಂದು ಹಲವರು ಸಂಭಾವನೆ ವಿಚಾರಕ್ಕೆ ಸಮರ್ಥನೆಯನ್ನೂ ನೀಡಿದ್ದರು. ಈ ಹಾಡು ಹಿಟ್ ಆದ ಬೆನ್ನಲ್ಲೇ ಸಮಂತಾ ಮಾದಕವಾಗಿ ಕಾಣಿಸಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದನ್ನು ವಿವರಿಸಿದ್ದರು. ವಿಶೇಷವೆಂದರೆ ಈಗ ನಟಿ ಮತ್ತೊಮ್ಮೆ ಮಾದಕವಾಗಿ ಹೆಜ್ಜೆಹಾಕಿದ್ದಾರೆ.

ಪ್ರಸ್ತುತ ಸಮಂತಾ ಹೆಜ್ಜೆ ಹಾಕಿರುವುದು ಜಾಹಿರಾತೊಂದಕ್ಕೆ. ಲಿಕ್ಕರ್ ಕಂಪನಿಯ ಜಾಹಿರಾತೊಂದರಲ್ಲಿ ನಟಿ ಕಾಣಿಸಿಕೊಂಡಿದ್ದು, ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ್ದಾರೆ. ವಿವಿಧ ಗೆಟಪ್​ಗಳಲ್ಲಿ ನಟಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳಿಗೆ ‘ಪುಷ್ಪ’ ಚಿತ್ರದ ಹಾಡು ನೆನಪಾಗಿದೆ. ಇದನ್ನು ಕಾಮೆಂಟ್​ಗಳಲ್ಲೂ ಹೇಳಿಕೊಂಡಿದ್ದಾರೆ.

ಸಮಂತಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪ್ರಗ್ಯಾ ಜೈಸ್ವಾಲ್, ಶಿಲ್ಪಾ ರೆಡ್ಡಿ ಮೊದಲಾದವರು ಸಮಂತಾಗೆ ಶಹಬ್ಬಾಸ್ ಎಂದಿದ್ದಾರೆ. ಪ್ರಸ್ತುತ ಈ ವಿಡಿಯೋ ವೈರಲ್ ಆಗಿದೆ.

ಸಮಂತಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಸಮಂತಾ ಚಿತ್ರರಂಗಕ್ಕೆ ಬಂದು 12 ವರ್ಷಗಳು ಕಳೆದಿವೆ. ನಾಗ ಚೈತನ್ಯ ಜತೆಯಲ್ಲಿ ‘ಏ ಮಾಯಾ ಚೇಸಾವೆ’ ಮೂಲಕ ನಟಿ ಟಾಲಿವುಡ್ ಪ್ರವೇಶಿಸಿದ್ದರು. ಪ್ರಸ್ತುತ ಸಮಂತಾ ‘ಶಾಕುಂತಲಮ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ‘ಅರೇಂಜ್​ಮೆಂಟ್ಸ್ ಆಫ್ ಲವ್’, ‘ಕಾಥುವಾಕುಲ ರೆಂಡು ಕಾದಲ್’ ಮೊದಲಾದ ಚಿತ್ರಗಳಲ್ಲಿ ನಟಿ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ:

‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ

ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?