Bigg Boss OTT: ಶೀಘ್ರವೇ ಶುರುವಾಗತ್ತೆ ಬಿಗ್​ ಬಾಸ್ ಒಟಿಟಿ 2ನೇ ಸೀಸನ್​; ಈ ಬಾರಿ ನಿರೂಪಕರ ಬದಲಾವಣೆ ಖಚಿತ

|

Updated on: May 13, 2023 | 1:01 PM

ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ ಇರುತ್ತವೆ. ಸೆನ್ಸಾರ್​ನ ಹಂಗಿಲ್ಲದೇ ಕಾರ್ಯಕ್ರಮ ನಡೆಸಬಹುದು. ತುಂಬ ಬೋಲ್ಡ್​ ಆದಂತಹ ಟಾಸ್ಕ್​ಗಳನ್ನು ನೀಡಬಹುದು.

Bigg Boss OTT: ಶೀಘ್ರವೇ ಶುರುವಾಗತ್ತೆ ಬಿಗ್​ ಬಾಸ್ ಒಟಿಟಿ 2ನೇ ಸೀಸನ್​; ಈ ಬಾರಿ ನಿರೂಪಕರ ಬದಲಾವಣೆ ಖಚಿತ
ಬಿಗ್ ಬಾಸ್ ಒಟಿಟಿ
Follow us on

ಬಿಗ್​ ಬಾಸ್​ ಶೋ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿ. ಬೇರೆ ಎಲ್ಲ ರಿಯಾಲಿಟಿ ಶೋಗಳಿಗಿಂತಲೂ ಬಿಗ್​ ಬಾಸ್ (Bigg Boss)​ ಕಾರ್ಯಕ್ರಮ ಸಂಪೂರ್ಣ ಭಿನ್ನ. ಇಲ್ಲಿನ ನಿಯಮಗಳೇ ಬೇರೆ. ಪ್ರತಿ ದಿನವೂ ಬೇರೆ ಬೇರೆ ಡ್ರಾಮಾ ನಡೆಯುತ್ತದೆ. ಪ್ರತಿ ಎಲಿಮಿನೇಷನ್​ನಲ್ಲೂ ಟ್ವಿಸ್ಟ್​ ಇರುತ್ತದೆ. ನೂರಾರು ದಿನಗಳ ಕಾಲ ನಡೆಯುವ ಈ ಶೋನಲ್ಲಿ ಬಗೆಬಗೆಯ ವ್ಯಕ್ತಿತ್ವದ ಸ್ಪರ್ಧಿಗಳು ಪೈಪೋಟಿ ನಡೆಸುತ್ತಾರೆ. ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್​ ಬಾಸ್​ ಒಟಿಟಿ’ (Bigg Boss OTT) ಆವೃತ್ತಿ ಆರಂಭಿಸಲಾಗಿತ್ತು. ಟಿವಿಗಿಂತಲೂ ಕೊಂಚ ಡಿಫರೆಂಟ್​ ಆಗಿ ಒಟಿಟಿ ಶೋ ಮೂಡಿಬಂತು. ಈಗ ‘ಬಿಗ್​ ಬಾಸ್​ ಒಟಿಟಿ 2ನೇ ಸೀಸನ್​’ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ನಿರೂಪಕರ ಸ್ಥಾನಕ್ಕೆ ಕರಣ್​ ಜೋಹರ್​ ಬದಲಿಗೆ ಸಲ್ಮಾನ್​ ಖಾನ್​ (Salman Khan) ಅವರು ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ನಿರೂಪಣೆಯಲ್ಲಿ ಕರಣ್​ ಜೋಹರ್​ ಮತ್ತು ಸಲ್ಮಾನ್​ ಖಾನ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮದ ಹಲವು ಸೀಸನ್​ಗಳನ್ನು ನಡೆಸಿಕೊಟ್ಟ ಅನುಭವ ಸಲ್ಮಾನ್​ ಖಾನ್​ ಅವರಿಗೆ ಇದೆ. ಅದೇ ರೀತಿ ಕರಣ್​ ಜೋಹರ್​ ಕೂಡ ಹಲವಾರು ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ‘ಹಿಂದಿ ಬಿಗ್​ ಬಾಸ್​ ಒಟಿಟಿ’ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್​ ಅನ್ನು ಸಲ್ಮಾನ್ ಖಾನ್​ ನಡೆಸಿಕೊಟ್ಟರೆ ಸೂಕ್ತ ಎಂದು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: Salman Khan: ಸೋಲಿನ ನೋವು ಮರೆತು ಪೋಸ್​ ಕೊಟ್ಟ​ ಸಲ್ಮಾನ್​ ಖಾನ್​; ‘ಘರ್ಜಿಸಲು ಟೈಗರ್​ ರೆಡಿ’ ಎಂದ ಫ್ಯಾನ್ಸ್​

ಇದನ್ನೂ ಓದಿ
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ

ಸಲ್ಮಾನ್​ ಖಾನ್​ ಅವರು ಸಿನಿಮಾಗಳ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೊಂಚ ಎಡವಿದ್ದಾರೆ. ಅವರು ನಟಿಸಿದ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಿಲ್ಲ. ಆದರೂ ಕೂಡ ಸಲ್ಮಾನ್​ ಖಾನ್​ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಕಿರುತೆರೆಯಲ್ಲಿ ಅವರನ್ನು ನೋಡಲು ಜನರು ಇಷ್ಟಪಡುತ್ತಾರೆ.

ಇದನ್ನೂ ಓದಿ: Salman Khan: 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಸಲ್ಮಾನ್​ ಖಾನ್​ ನಟನೆಯ 16 ಚಿತ್ರಗಳು; ಇಲ್ಲಿದೆ ಪಟ್ಟಿ

ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್​ನ ಹಂಗಿಲ್ಲದೇ ಕೆಲವು ಟಾಸ್ಕ್​ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್​ ಪಡೆದುಕೊಂಡಿತ್ತು. ತುಂಬ ಬೋಲ್ಡ್​ ಆದಂತಹ ಟಾಸ್ಕ್​ಗಳನ್ನು ನೀಡಲಾಗಿತ್ತು. 2ನೇ ಸೀಸನ್​ನಲ್ಲಿ ಇನ್ನೂ ಹೆಚ್ಚಿನ ಮಸಾಲಾ ಬೆರೆಸಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.