ಅಕ್ಷಯ್​ ಕುಮಾರ್ ನಂಬಿ ದುಡ್ಡು ಸುರಿದವರಿಗೆ ದೊಡ್ಡ ನಷ್ಟ; ಹಣ ಗಳಿಸಲು ನಿರ್ಮಾಪಕರ ಹೊಸ ಪ್ಲ್ಯಾನ್

| Updated By: ರಾಜೇಶ್ ದುಗ್ಗುಮನೆ

Updated on: Jun 12, 2022 | 3:04 PM

ಐತಿಹಾಸಿಕ ಕಥಾಹಂದರದ ಚಿತ್ರವಾದ್ದರಿಂದ ದೊಡ್ಡದೊಡ್ಡ ಕೋಟೆಗಳ ಸೆಟ್ ನಿರ್ಮಿಸಲಾಗಿತ್ತು. ಇದಕ್ಕೆ ಹೆಚ್ಚಿನ ಹಣ ಖರ್ಚಾಗಿದೆ. ಈಗ ನಷ್ಟ ಭರಿಸಲು ನಿರ್ಮಾಪಕರು ಹೆಣಗಾಡುತ್ತಿದ್ದಾರೆ.

ಅಕ್ಷಯ್​ ಕುಮಾರ್ ನಂಬಿ ದುಡ್ಡು ಸುರಿದವರಿಗೆ ದೊಡ್ಡ ನಷ್ಟ; ಹಣ ಗಳಿಸಲು ನಿರ್ಮಾಪಕರ ಹೊಸ ಪ್ಲ್ಯಾನ್
ಅಕ್ಷಯ್ ಕುಮಾರ್
Follow us on

ಜೂನ್ 3ರಂದು ರಿಲೀಸ್ ಆದ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಸಾಮ್ರಾಟ್ ಪೃಥ್ವಿರಾಜ್​’ ಸಿನಿಮಾ (Samrat Prithviraj) ಮೊದಲ ವಾರಾಂತ್ಯದಲ್ಲಿ ಸಾಧಾರಣ ಕಲೆಕ್ಷನ್ ಮಾಡಿತು. ವಾರದ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಪಾತಾಳ ಕಂಡಿತು. ಜನರು ಈ ಚಿತ್ರವನ್ನು ಅಷ್ಟಾಗಿ ನೋಡಲೇ ಇಲ್ಲ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್​ ನಟರು ಸಿನಿಮಾದಲ್ಲಿ ನಟಿಸಿದ ಹೊರತಾಗಿಯೂ ಚಿತ್ರ ಸೋಲು ಕಂಡಿದೆ. 100 ಕೋಟಿ ರೂಪಾಯಿಯನ್ನೂ ಕಲೆಕ್ಷನ್ ಮಾಡಲಾಗದೆ ಒದ್ದಾಡಿದೆ. ಅಕ್ಷಯ್ ಅವರನ್ನು ನಂಬಿ ದುಡ್ಡು ಹಾಕಿದ ಯಶ್ ರಾಜ್​ ಫಿಲ್ಮ್ಸ್​ ಈಗ ಸಂಕಷ್ಟಕ್ಕೆ ಸಿಲುಕಿದೆ. ನಷ್ಟ ತುಂಬಿಕೊಳ್ಳಲು ನಿರ್ಮಾಪಕರು ಬೇರೆ ಮಾರ್ಗ ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಯಶ್ ರಾಜ್​ ಫಿಲ್ಮ್ಸ್​ ಬ್ಯಾನರ್ ಅಡಿಯಲ್ಲಿ ಹಲವು ಆ್ಯಕ್ಷನ್​ ಸಿನಿಮಾಗಳು, ಪ್ರೇಮ ಕಹಾನಿಯ ಚಿತ್ರಗಳು ಸಿದ್ಧಗೊಂಡಿದ್ದವು. ಇದೇ ಮೊದಲ ಬಾರಿಗೆ ಐತಿಹಾಸಿಕ ಕಥಾಹಂದರದ ಸಿನಿಮಾವನ್ನು ತೆರೆಮೇಲೆ ತರುವ ಪ್ರಯತ್ನ ಯಶ್ ರಾಜ್​ ಫಿಲ್ಮ್ಸ್​ನಿಂದ ಆಗಿದೆ. ‘ಸಾಮ್ರಾಟ್ ಪೃಥ್ವಿರಾಜ್​’ ಚಿತ್ರದ ಟ್ರೇಲರ್ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಿರಲಿಲ್ಲ. ಇನ್ನು, ಸಿನಿಮಾ ರಿಲೀಸ್ ಆದ ನಂತರದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರ ಇಲ್ಲಿಯವರೆಗೆ ಕೇವಲ 65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಜನರೇ ಬರುತ್ತಿಲ್ಲ. ಈ ಚಿತ್ರದಿಂದ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ.

ಐತಿಹಾಸಿಕ ಕಥಾಹಂದರದ ಚಿತ್ರವಾದ್ದರಿಂದ ದೊಡ್ಡದೊಡ್ಡ ಕೋಟೆಗಳ ಸೆಟ್ ನಿರ್ಮಿಸಲಾಗಿತ್ತು. ಇದಕ್ಕೆ ಹೆಚ್ಚಿನ ಹಣ ಖರ್ಚಾಗಿದೆ. ಸಿನಿಮಾ 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. ಈಗ ನಷ್ಟ ಭರಿಸಲು ನಿರ್ಮಾಪಕರು ಬಹುಬೇಗನೆ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
ಸೌತ್​ ಚಿತ್ರಗಳ ಎದುರು ಶೋ ಕಳೆದುಕೊಂಡ ‘ಸಾಮ್ರಾಟ್​ ಪೃಥ್ವಿರಾಜ್​’? ‘ವಿಕ್ರಮ್’​, ‘ಮೇಜರ್’​ ಮೇಲುಗೈ
ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’
‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?
ಕಮಲ್ ಹಾಸನ್ ‘ವಿಕ್ರಮ್​’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?

ಇದನ್ನೂ ಓದಿ: ನನ್ನ ಜತೆ ಅಲ್ಲು ಅರ್ಜುನ್ ಆದಷ್ಟು ಬೇಗ ಕೆಲಸ ಮಾಡಬೇಕು ಎಂದ ಅಕ್ಷಯ್ ಕುಮಾರ್

ಎರಡು ತಿಂಗಳ ನಂತರ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಸಿನಿಮಾ ಸೋತಿದ್ದರಿಂದ ಒಂದೇ ತಿಂಗಳಲ್ಲಿ ಒಟಿಟಿಗೆ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇದರಿಂದ ನಿರ್ಮಾಪಕರಿಗೆ ಹೆಚ್ಚು ಹಣ ಸಿಗಲಿದೆ. ಇದರಿಂದ ಒಂದಷ್ಟು ನಷ್ಟ ಭರಿಸುವ ಆಲೋಚನೆಯಲ್ಲಿ ನಿರ್ಮಾಣ ಸಂಸ್ಥೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.