‘ಹೀರಾಮಂಡಿ’ ವೆಬ್​ ಸಿರೀಸ್​ ಯಶಸ್ಸಿಗೆ ಗೌರವ ಸಲ್ಲಿಸಿದ ‘ಅಮುಲ್​’

|

Updated on: May 08, 2024 | 7:33 PM

ಸ್ವಾತಂತ್ರ್ಯ ಪೂರ್ವದ ಕಥೆಯನ್ನು ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ಹೇಳಲಾಗಿದೆ. ಇದಕ್ಕೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ, ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ ಮುಂತಾದವರು ಈ ವೆಬ್​ ಸಿರೀಸ್​ನಲ್ಲಿ ಬಣ್ಣ ಹಚ್ಚಿದ್ದಾರೆ. ‘ಅಮುಲ್​’ ಕಡೆಯಿಂದ ಈ ವೆಬ್​ ಸರಣಿಗೆ ಪ್ರಶಂಸೆ ಸಿಕ್ಕಿದೆ.

‘ಹೀರಾಮಂಡಿ’ ವೆಬ್​ ಸಿರೀಸ್​ ಯಶಸ್ಸಿಗೆ ಗೌರವ ಸಲ್ಲಿಸಿದ ‘ಅಮುಲ್​’
‘ಹೀರಾಮಂಡಿ’ ವೆಬ್​ ಸಿರೀಸ್​ ಯಶಸ್ಸಿಗೆ ಗೌರವ ಸಲ್ಲಿಸಿದ ‘ಅಮುಲ್​’
Follow us on

ಒಟಿಟಿ ಪ್ರೇಕ್ಷಕರು ಹೀರಾಮಂಡಿ’ (Heeramandi) ವೆಬ್​ ಸಿರೀಸ್​ ನೋಡಿ ಖುಷಿಪಟ್ಟಿದ್ದಾರೆ. ಹಲವು ಕಾರಣಗಳಿಂದ ಈ ವೆಬ್​ ಸರಣಿಗೆ ಜನರ ಮೆಚ್ಚುಗೆ ಸಿಕ್ಕಿದೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ವೀಕ್ಷಣೆಗೆ ಲಭ್ಯವಾದ ಈ ವೆಬ್​ ಸಿರೀಸ್​ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅನೇಕರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ‘ಅಮುಲ್​’ (Amul) ಸಂಸ್ಥೆ ಕೂಡ ‘ಹೀರಾಮಂಡಿ’ಗೆ ಭೇಷ್ ಎಂದಿದೆ. ವಿಶೇಷ ಕಾರ್ಟೂನ್​ ಮೂಲಕ ಈ ವೆಬ್​ ಸರಣಿಗೆ ಗೌರವ ಸಲ್ಲಿಸಲಾಗಿದೆ.

ಹಿರಿಯ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರು ‘ಹೀರಾಮಂಡಿ’ ವೆಬ್​ ಸರಣಿಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಬಹುವರ್ಷಗಳ ಕನಸು. ಅನೇಕ ವರ್ಷಗಳ ಹಿಂದೆಯೇ ಈ ಕಥೆಯನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಲು ಹೊರಟಿದ್ದರು. ಈಗ ಅದೇ ಕಥೆಯನ್ನು ವೆಬ್​ ಸಿರೀಸ್​ ರೂಪದಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಅನೇಕ ಪ್ರತಿಭಾವಂತ ನಟ-ನಟಿಯರು ಇದರಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ದ್ವಿಪಾತ್ರ ಮಾಡಿ ಸೈ ಎನಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ

ಸ್ವಾತಂತ್ರ್ಯ ಪೂರ್ವ ಕಾಲದ ಲಾಹೋರ್​ನಲ್ಲಿ ಇದ್ದ ಶ್ರೀಮಂತ ವೇಶ್ಯೆಯರು ಮತ್ತು ನವಾಬರ ಕಥೆ ‘ಹೀರಾಮಂಡಿ’ಯಲ್ಲಿದೆ. ಈ ವೆಬ್​ ಸರಣಿಯಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಸಂಜೀದಾ ಶೇಖ್​, ಅದಿತಿ ರಾವ್​ ಹೈದರಿ, ಶರ್ಮಿನ್​ ಸೇಗಲ್​, ತಹ ಶಾ, ಶೇಖರ್​ ಸುಮನ್, ಅಧ್ಯಯನ್​ ಸುಮನ್​, ಫರ್ದೀನ್ ಖಾನ್​, ರಿಚಾ ಚಡ್ಡಾ ಮುಂತಾದವರು ನಟಿಸಿದ್ದಾರೆ.

‘ದೇವದಾಸ್​’, ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರು ಇದೇ ಮೊದಲ ಬಾರಿಗೆ ಒಟಿಟಿಗೆ ಕಾಲಿಟ್ಟಿದ್ದಾರೆ. ಅವರು ಆ್ಯಕ್ಷನ್​-ಕಟ್​ ಹೇಳಿದ ಮೊದಲ ವೆಬ್​ ಸಿರೀಸ್​ ‘ಹೀರಾಮಂಡಿ’. ಸಿನಿಮಾಗಳ ರೀತಿಯೇ ಈ ವೆಬ್​ ಸಿರೀಸ್​ ಅನ್ನು ಕೂಡ ಅವರು ಬಹಳ ಅದ್ದೂರಿಯಾಗಿ ತೆರೆಗೆ ತಂದಿದ್ದಾರೆ. ದೊಡ್ಡ ದೊಡ್ಡ ಸೆಟ್​ಗಳು, ಮನ ಸೆಳೆಯುವ ಸಂಗೀತ, ಕಲರ್​ಫುಲ್​ ಕಾಸ್ಟ್ಯೂಮ್​ ಮುಂತಾದ ಅಂಶಗಳು ಇದರಲ್ಲಿ ಹೈಲೈಟ್​ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.