
ಬಿಗ್ ಬಾಸ್ ಮನೆಯಲ್ಲಿರುವ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಬಿಗ್ ಬಾಸ್ ಒಟಿಟಿ ವೀಕ್ಷಕರಿಗೆ ಕೊಂಚ ಟೆನ್ಶನ್ ನೀಡುತ್ತಿದೆ. ಇಬ್ಬರೂ ಕ್ಲೋಸ್ ಆಗಿ ಇರುವುದು ಅನೇಕರಿಗೆ ಇಷ್ಟವಾಗಿತ್ತು. ಆದರೆ, ಈಗ ಆರೀತಿ ಇಲ್ಲ. ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಶಮಿತಾ ತಮ್ಮ ಮೊದಲ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
ಶಮಿತಾ ಈ ಮೊದಲು ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಶಮಿತಾ ಬಾಯ್ಫ್ರೆಂಡ್ ಈಗ ಇಲ್ಲ. ಈ ಬಗ್ಗೆ ಸಹ ಸ್ಪರ್ಧಿ ನೇಹಾ ಭಾಸಿನ್ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಮೊದಲ ಬಾಯ್ಫ್ರೆಂಡ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅದಾದ ನಂತರ ನನ್ನ ಜೀವನದಲ್ಲಿ ಯಾರನ್ನೂ ಬಿಟ್ಟುಕೊಂಡಿಲ್ಲ. ಅದಕ್ಕೆ ಇಷ್ಟೆಲ್ಲ ವರ್ಷ ಹಿಡಿಯಿತು’ ಎಂದು ಹೇಳುವ ಮೂಲಕ ರಾಕೇಶ್ ಬಾಪಟ್ಗೆ ಕ್ಲೋಸ್ ಆಗಿರುವ ವಿಚಾರವನ್ನು ಅವರು ಒಪ್ಪಿಕೊಂಡಿದ್ದಾರೆ.
ರಾಕೇಶ್ ಜತೆ ಶಮಿತಾ ಕ್ಲೋಸ್ ಇದ್ದಾರೆ. ಆದರೆ, ಈಗ ಇಬ್ಬರ ನಡುವೆ ಜಗಳಗಳು ಏರ್ಪಡುತ್ತಿವೆ. ಇದು ಅವರನ್ನು ಚಿಂತೆಗೆ ಈಡು ಮಾಡಿದೆ. ರಾಕೇಶ್ ಅವರನ್ನು ಕಳೆದುಕೊಳ್ಳುವ ಭಯ ಕೂಡ ಶಮಿತಾಗೆ ಕಾಡಿದೆ.
ಇತ್ತೀಚೆಗೆ ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರಾಕೇಶ್ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು. ಅವರು ಮಾತನಾಡುತ್ತಾ ಭಾವುಕರಾಗಿದ್ದು ವೀಕ್ಷಕರ ಗಮನಕ್ಕೆ ಬಂದಿದೆ. ‘ಶಮಿತಾ ಮನಸ್ಸು ಶುದ್ಧವಾಗಿದೆ. ನಾನು ಅವಳನ್ನು ನಿಜವಾಗಲೂ ಇಷ್ಟಪಡುತ್ತೇನೆ. ಅವಳು ಅದ್ಭುತ ವ್ಯಕ್ತಿ. ಶೋ ಮುಗಿದ ನಂತರವೂ ನಾವು ಕನೆಕ್ಟ್ ಆಗುತ್ತೇವೆ ಎಂದು ನನಗೆ ಅನಿಸುತ್ತದೆ. ನನಗೆ ಯಾರದ್ದಾದರೂ ಜೊತೆಗೆ ಸಂಬಂಧ ಬೆಳೆಸುವುದು ಎಂದರೆ ಭಯ. ಆದರೆ, ನಾನು ಅವಳಿಗೆ ಸಿಕ್ಕಾಪಟ್ಟೆ ಕನೆಕ್ಟ್ ಆಗುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದ್ದರು.
ಇನ್ನು, ಶಮಿತಾ ಕೂಡ ಇತ್ತೀಚೆಗೆ, ‘ನೀನು ಎಂದರೆ ನನಗೆ ಇಷ್ಟ. ಅದಕ್ಕಾಗಿಯೇ ನಾನು ನಿನಗೆ ಕಿಸ್ ಮಾಡೋಕೆ ಅವಕಾಶ ನೀಡಿದೆ’ ಎಂದು ಹೇಳಿದ್ದರು.
ತನ್ನ ಪರವಾಗಿ ನಿಲ್ಲುವ ಸಂಗಾತಿ ಬೇಕು ಆದರೆ ರಾಕೇಶ್ ಅಂತಹ ವ್ಯಕ್ತಿ ಅಲ್ಲ ಎಂದು ಹೇಳಿ ಶಾಕ್ ಕೊಟ್ಟ ಶಮಿತಾ ಶೆಟ್ಟಿ