Su From So OTT: ಯಾವ ಒಟಿಟಿಯಲ್ಲಿ ಬರಲಿದೆ ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾ?

‘ಸು ಫ್ರಮ್ ಸೋ’ ಸಿನಿಮಾ ಚಿತ್ರಮಂದಿರದಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿ ಮುನ್ನುಗ್ಗುತ್ತಿದೆ. ಒಟಿಟಿಯಲ್ಲಿ ಈ ಸಿನಿಮಾ ನೋಡಬೇಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ.

Su From So OTT: ಯಾವ ಒಟಿಟಿಯಲ್ಲಿ ಬರಲಿದೆ ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾ?
Su From So

Updated on: Aug 20, 2025 | 5:16 PM

2025ರ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿಯಲ್ಲಿ ‘ಸು ಫ್ರಮ್ ಸೋ’ (Su From So) ಸಿನಿಮಾ ಕೂಡ ಇದೆ. ಸಣ್ಣ ಬಜೆಟ್​​​ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ನಿಜಕ್ಕೂ ಸಾಧನೆಯೇ ಸರಿ. ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡ ‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ರಿಲೀಸ್ (Su From So OTT Release) ಯಾವಾಗ ಎಂದು ಪ್ರೇಕ್ಷಕರು ಕಾದಿದ್ದಾರೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ ಎಂಬ ಕೌತುಕ ಅಭಿಮಾನಿಗಳಿಗೆ ಇದೆ. ವರದಿಗಳ ಪ್ರಕಾರ, ‘ಜಿಯೋ ಹಾಟ್​ ಸ್ಟಾರ್’ (Jio Hotstar) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಜೆ.ಪಿ. ತುಮಿನಾಡು ನಿರ್ದೇಶನ ಮಾಡಿರುವ ‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ಡೀಲ್ ಮುಗಿದಿದೆ. ದೊಡ್ಡ ಮೊತ್ತಕ್ಕೆ ಒಟ್ಟಿಗೆ ಹಕ್ಕುಗಳು ಮಾರಾಟ ಆಗಿವೆ. ಅಲ್ಲದೇ, ಕಿರುತೆರೆ ಪ್ರಸಾರ ಹಕ್ಕುಗಳು ‘ಕಲರ್ಸ್ ಕನ್ನಡ’ ವಾಹಿನಿಗೆ ಮಾರಾಟ ಆಗಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವುದು ಬಾಕಿ ಇದೆ.

ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದಾರೆ. ನಿರ್ಮಾಪಕನಾಗಿ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಪರಭಾಷೆ ಮಂದಿ ಕೂಡ ‘ಸು ಫ್ರಮ್ ಸೋ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಿಮೇಕ್ ಮಾಡಲು ಬೇಡಿಕೆ ಬಂದಿದೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಾ? ರಾಜ್ ಪ್ಲ್ಯಾನೇ ಬೇರೆ
‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್ ಯಾರು? ಹಿನ್ನೆಲೆ ಏನು?
‘ಸು ಫ್ರಮ್ ಸೋ’ ಚಿತ್ರದಲ್ಲಿ ಈ ಪಾತ್ರಗಳೇ ಹೈಲೈಟ್; ಮಿಸ್ ಮಾಡಲೇಬಾರದು

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಹಾರರ್ ಕಾಮಿಡಿ ಕಹಾನಿ ಇದೆ. ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಪುಷ್ಪರಾಜ್ ಬೊಳ್ಳಾರ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎಲ್ಲ ಕಲಾವಿದರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ಚಿತ್ರದ ನಿರ್ಮಾಪಕ

Sacnilk ಪ್ರಕಾರ, ಭಾರತದಲ್ಲಿ ಈ ಸಿನಿಮಾ 79 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದ ಗಳಿಕೆ ಕೂಡ ಸೇರಿಸಿದರೆ 107 ಕೋಟಿ ರೂಪಾಯಿ ಮೀರಲಿದೆ. 25 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಈ ಚಿತ್ರ 50ನೇ ದಿನದತ್ತ ಮುಂದುವರಿಯುತ್ತಿದೆ. ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿದವರು ಒಟಿಟಿಯಲ್ಲಿ ಮತ್ತೊಮ್ಮೆ ನೋಡಲು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.