ವೈವಾಹಿಕ ಅತ್ಯಾಚಾರದ ದೃಶ್ಯವನ್ನು ಸೆಕ್ಸ್ ಸೀನ್ ಅಂತ ಕರೆದಿದ್ದಕ್ಕೆ ನಟಿ ಮೆರ್ಹೀನ್ ಪಿರ್ಜಾದಾ ಬೇಸರ
‘ಸುಲ್ತಾನ್ ಆಫ್ ದೆಹಲಿ’ ವೆಬ್ ಸರಣಿಯಲ್ಲಿ ಕ್ರೂರವಾದ ವೈವಾಹಿಕ ಅತ್ಯಾಚಾರದ ಒಂದು ದೃಶ್ಯ ಇದೆ. ಇದನ್ನು ಅನೇಕರು ಸೆಕ್ಸ್ ಸೀನ್ ಎಂದು ಬಿಂಬಿಸಿದ್ದಾರೆ. ಇದರಿಂದ ತಮಗೆ ನೋವಾಗಿದೆ ಎಂದು ಮೆಹ್ರೀನ್ ಪಿರ್ಜಾದಾ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ನಟಿಯ ಅನಿಸಿಕೆಗೆ ಸಹಮತ ಸೂಚಿಸಿದ್ದಾರೆ.
ನಟಿ ಮೆರ್ಹೀನ್ ಪಿರ್ಜಾದಾ (Mehreen Pirzada) ಅವರು ಸಿನಿಮಾ ಮಾತ್ರವಲ್ಲದೇ ವೆಬ್ ಸರಣಿಯಲ್ಲೂ ಬೇಡಿಕೆ ಹೊಂದಿದ್ದಾರೆ. ಇತ್ತೀಚೆಗೆ ಅವರು ಒಟಿಟಿ ಲೋಕಕ್ಕೆ ಕಾಲಿಟ್ಟರು. ಅವರು ನಟಿಸಿದ ಮೊದಲ ವೆಬ್ ಸೀರಿಸ್ ‘ಸುಲ್ತಾನ್ ಆಫ್ ದೆಹಲಿ’ (Sultan of Delhi) ಇತ್ತೀಚೆಗೆ ಬಿಡುಗಡೆ ಆಯಿತು. ಅದರಲ್ಲಿ ಇರುವ ಒಂದು ದೃಶ್ಯವನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಆ ಕಾರಣಕ್ಕಾಗಿ ಮೆರ್ಹೀನ್ ಪಿರ್ಜಾದಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ವೆಬ್ ಸರಣಿಯಲ್ಲಿ ಇರುವ ವೈವಾಹಿಕ ಅತ್ಯಾಚಾರದ (Marital Rape) ದೃಶ್ಯವನ್ನು ಸೆಕ್ಸ್ ಸೀನ್ ಎಂದು ಕೆಲವರು ಕರೆದಿರುವುದಕ್ಕೆ ಮೆಹ್ರೀನ್ ಪಿರ್ಜಾದಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನನ್ನ ಅಭಿಮಾನಿಗಳು ಈ ವೆಬ್ ಸೀರಿಸ್ ನೋಡಿ ಎಂಜಾಯ್ ಮಾಡಿದ್ದಾರೆ ಅಂತ ಭಾವಿಸುತ್ತೇನೆ. ಕೆಲವೊಮ್ಮೆ ಸ್ಕ್ರಿಪ್ಟ್ಗಾಗಿ ನಮ್ಮ ನೀತಿ-ನಿಯಮಗಳಿಗೆ ವಿರುದ್ಧವಾದನ್ನು ಮಾಡಬೇಕಾಗುತ್ತದೆ. ನಟನೆಯನ್ನು ಕಲೆ ಮತ್ತು ಉದ್ಯೋಗ ಎಂದು ತಿಳಿದಿರುವ ಕಲಾವಿದರು ಈ ರೀತಿ ಮಾಡಬೇಕಾಗುತ್ತದೆ. ‘ಸುಲ್ತಾನ್ ಆಫ್ ದೆಹಲಿ’ ವೆಬ್ ಸರಣಿಯಲ್ಲಿ ಕ್ರೂರವಾದ ವೈವಾಹಿಕ ಅತ್ಯಾಚಾರದ ಒಂದು ದೃಶ್ಯ ಇದೆ. ಇದನ್ನು ಅನೇಕರು ಸೆಕ್ಸ್ ಸೀನ್ ಎಂದು ಬಿಂಬಿಸಿದ್ದಾರೆ. ಇದರಿಂದ ನನಗೆ ನೋವಾಗಿದೆ’ ಎಂದು ಮೆಹ್ರೀನ್ ಪಿರ್ಜಾದಾ ಪೋಸ್ಟ್ ಮಾಡಿದ್ದಾರೆ.
Recently I made my OTT Debut in the web series, “Sultan of Delhi” on Disney Hotstar. I hope my fans have enjoyed watching the series. Sometimes scripts demand certain actions which might go against your own morals. As a professional actor who considers acting an art and at the…
— Mehreen Pirzada👑 (@Mehreenpirzada) October 17, 2023
‘ಅವರಿಗೂ ಅಕ್ಕ-ತಂಗಿ ಇದ್ದಾರೆ ಎಂಬುದು ಅರ್ಥ ಆಗಬೇಕು. ಯಾರಿಗೂ ಇಂಥ ಸ್ಥಿತಿ ಬರಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಟಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಕೆಲಸ. ನಿರ್ದೇಶಕ ಮಿಲನ್ ಲುತಾರಿಯಾ ಅವರು ತುಂಬ ವೃತ್ತಿಪರವಾಗಿ ನಡೆದುಕೊಂಡಿದ್ದಾರೆ. ಅಂಥ ಕಷ್ಟದ ಸನ್ನಿವೇಶದ ಶೂಟಿಂಗ್ ವೇಳೆ ನಮಗೆ ಮುಜುಗರ ಆಗದಂತೆ ನೋಡಿಕೊಂಡಿದ್ದಾರೆ. ಯಾವುದೇ ಪಾತ್ರಕ್ಕಾದರೂ ನಾನು ಅತ್ಯುತ್ತಮವಾಗಿ ನಟಿಸಲು ಪ್ರಯತ್ನಿಸುತ್ತೇನೆ’ ಎಂದು ಮೆಹ್ರೀನ್ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನೀ ಸಿಗೋವರೆಗೂ’ ಚಿತ್ರದ ಲವರ್ ಬಾಯ್ ಶಿವಣ್ಣ ಲುಕ್ ರಿಲೀಸ್; ಹ್ಯಾಟ್ರಿಕ್ ಹೀರೋಗೆ ವಯಸ್ಸೇ ಆಗೋಲ್ಲ ಎಂದ ಅಭಿಮಾನಿಗಳು
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ನಟಿಯ ಅನಿಸಿಕೆಗೆ ಸಹಮತ ಸೂಚಿಸಿದ್ದಾರೆ. ‘ನೀವು ಸ್ಟ್ರಾಂಗ್ ಆಗಿರಿ’ ಎಂದು ಅನೇಕರು ಧೈರ್ಯ ತುಂಬಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೆಹ್ರೀನ್ ಪಿರ್ಜಾದಾ ಅವರು ಆ್ಯಕ್ಟೀವ್ ಆಗಿದ್ದಾರೆ. ತಮಿಳು, ತೆಲುಗು, ಕನ್ನಡ, ಪಂಜಾಬಿ, ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.