AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಶೂಟಿಂಗ್​ ಮುಗಿದಿಲ್ಲ; ಕಮಲ್​ ಹಾಸನ್​ ಸಿನಿಮಾಗೆ 150 ಕೋಟಿ ರೂಪಾಯಿ ಬಿಸ್ನೆಸ್

ಹಲವು ವರ್ಷಗಳ ಬಳಿಕ ಕಮಲ್​ ಹಾಸನ್​ ಮತ್ತು ಮಣಿರತ್ನಂ ಅವರು ಜೊತೆಯಾಗಿ ‘ಥಗ್​ ಲೈಫ್​’ ಚಿತ್ರ ಮಾಡುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್​ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ನೆಟ್​ಫ್ಲಿಕ್ಸ್​ ಒಟಿಟಿ ಸಂಸ್ಥೆ ಬರೋಬ್ಬರಿ 150 ಕೋಟಿ ರೂಪಾಯಿಗೆ ಈ ಸಿನಿಮಾದ ಪ್ರಸಾರ ಹಕ್ಕುಗಳನ್ನು ಖರೀದಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇನ್ನೂ ಶೂಟಿಂಗ್​ ಮುಗಿದಿಲ್ಲ; ಕಮಲ್​ ಹಾಸನ್​ ಸಿನಿಮಾಗೆ 150 ಕೋಟಿ ರೂಪಾಯಿ ಬಿಸ್ನೆಸ್
ಮಣಿರತ್ನಂ, ಕಮಲ್​ ಹಾಸನ್
ಮದನ್​ ಕುಮಾರ್​
|

Updated on: Sep 20, 2024 | 8:58 PM

Share

ನಟ ಕಮಲ್​ ಹಾಸನ್​ ಅವರಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ‘ವಿಕ್ರಮ್’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಇದ್ದ ಡಿಮ್ಯಾಂಡ್​ ಇನ್ನಷ್ಟು ಹೆಚ್ಚಾಯಿತು. ಈಗ ಅವರು ರಾಜಕೀಯವನ್ನು ಕೊಂಚ ಬದಿಗಿಟ್ಟು ಸಿನಿಮಾದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಅವರ ಜೊತೆ ದಿಗ್ಗಜ ನಿರ್ದೇಶಕ ಮಣಿರತ್ನಂ ಅವರು ಕೈ ಜೋಡಿಸಿ ‘ಥಗ್ ಲೈಫ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಒಟಿಟಿ ಹಕ್ಕುಗಳ ಮಾರಾಟದ ಬಗ್ಗೆ ಅಚ್ಚರಿಯ ಸುದ್ದಿ ಕೇಳಿಬಂದಿದೆ. ಬರೋಬ್ಬರಿ 150 ಕೋಟಿ ರೂಪಾಯಿಗೆ ವ್ಯಾಪಾರ ನಡೆದಿದೆ.

ಕಮಲ್​ ಹಾಸನ್​ ಅವರ ಸಿನಿಮಾಗಳಿಗೆ ಇರುವ ಪ್ರೇಕ್ಷಕರ ವರ್ಗ ದೊಡ್ಡದು. ಫ್ಯಾಮಿಲಿ ಆಡಿಯನ್ಸ್​ ಹೆಚ್ಚಾಗಿ ಕಮಲ್​ ಹಾಸನ್​ ಅವರ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಎಲ್ಲ ವಯೋಮಾನದವರಿಗೂ ಕಮಲ್​ ಹಾಸನ್​ ಎಂದರೆ ಇಷ್ಟ. ಈ ಕಾರಣದಿಂದ ಅವರ ಸಿನಿಮಾಗೆ ಒಟಿಟಿಯಲ್ಲೂ ಬೇಡಿಕೆ ಇದೆ. ಇನ್ನು, ಮಣಿರತ್ನಂ ಅವರ ಸಿನಿಮಾಗೂ ಫ್ಯಾಮಿಲಿ ಪ್ರೇಕ್ಷಕರು ಉಘೇ ಎನ್ನುತ್ತಾರೆ. ಆದ್ದರಿಂದ ‘ಥಗ್​ ಲೈಫ್​’ ಸಿನಿಮಾ ಬಗ್ಗೆ ಭಾರಿ ಹೈಪ್​ ಸೃಷ್ಟಿ ಆಗಿದೆ.

ಸಿನಿಮಾದ ಶೂಟಿಂಗ್​ ಮುಗಿದು, ಟೀಸರ್​, ಸಾಂಗ್​ ಅಥವಾ ಟ್ರೇಲರ್​ ನೋಡಿದ ಬಳಿಕ ಒಟಿಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚುವುದು ವಾಡಿಕೆ. ಆದರೆ ಕೆಲವು ಸಿನಿಮಾಗಳಿಗೆ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ಭಾರಿ ಡಿಮ್ಯಾಂಡ್​ ಸೃಷ್ಟಿ ಆಗುತ್ತದೆ. ‘ಥಗ್​ ಲೈಫ್​’ ಸಿನಿಮಾ ಕೂಡ ಆ ಹಾದಿಯಲ್ಲಿದೆ. ಚಿತ್ರೀಕರಣ ಇನ್ನೂ ಪ್ರಗತಿಯಲ್ಲಿ ಇರುವಾಗಲೇ ಒಟಿಟಿ ಪ್ರಸಾರ ಹಕ್ಕು ಮಾರಾಟ ಆಗಿರುವ ಬಗ್ಗೆ ಸುದ್ದಿ ಸಿಕ್ಕಿದೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ಕಮಲ್​ ಹಾಸನ್ ನಟನೆ; ಇದು ಅಟ್ಲಿ ಪ್ಲ್ಯಾನ್

ನೆಟ್​ಫ್ಲಿಕ್ಸ್​ ಒಟಿಟಿ ಸಂಸ್ಥೆಯು 150 ಕೋಟಿ ರೂಪಾಯಿ ನೀಡಿ ‘ಥಗ್​ ಲೈಫ್​’ ಸಿನಿಮಾದ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಬಳಿಕ ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ. ಎ.ಆರ್​. ರೆಹಮಾನ್​ ಅವರು ‘ಥಗ್​ ಲೈಫ್​’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿಂಬು, ತ್ರಿಶಾ ಕೃಷ್ಣನ್​, ಪಂಕಜ್​ ತ್ರಿಪಾಠಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ಈ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More