Uday Surya: ಬಿಗ್ ಬಾಸ್ ಮನೆಗೆ ಕಾಲಿಟ್ಟ ರಾಮಾಚಾರಿ ಧಾರಾವಾಹಿ ಖ್ಯಾತಿಯ ಉದಯ್ ಸೂರ್ಯ

Bigg Boss OTT kannada: ಇದೀಗ ಒಂಬತ್ತನೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಉದಯ್ ಸೂರ್ಯ ಕಾಲಿಟ್ಟಿದ್ದಾರೆ. ಧಾರಾವಾಹಿಯಿಂದ ಬ್ರೇಕ್ ಪಡೆದುಕೊಂಡಿದ್ದ ಉದಯ್ ಇತ್ತೀಚೆಗಷ್ಟೆ ರಾಮಾಚಾರಿ ಸೀರಿಯಲ್‌ನಲ್ಲಿ ಒಂದು ಒಳ್ಳೆಯ ಕ್ಯಾರೆಕ್ಟರ್‌ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದರು.

Uday Surya: ಬಿಗ್ ಬಾಸ್ ಮನೆಗೆ ಕಾಲಿಟ್ಟ ರಾಮಾಚಾರಿ ಧಾರಾವಾಹಿ ಖ್ಯಾತಿಯ ಉದಯ್ ಸೂರ್ಯ
Uday Surya
Edited By:

Updated on: Aug 07, 2022 | 9:58 AM

ಬಿಗ್ ಬಾಸ್ ಕನ್ನಡ ಓಟಿಟಿ (Bigg Boss Kannada OTT) ಮೊದಲ ದಿನವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಹೊಸ ಮುಖಗಳಿಂದ ಕೂಡಿರುವ ದೊಡ್ಮನೆಯಲ್ಲಿ ಈ ಬಾರಿಯ ಚೊಚ್ಚಲ ಓಟಿಟಿ ಸೀಸನ್ ಹೇಗಿರಲಿದೆ ಎಂಬುದು ನೋಡಬೇಕಿದೆ. ಈಗಾಗಲೇ ಕೆಲ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಾಗಿದ್ದು ಅದಾಗಲೇ ಆಟ ಶುರು ಮಾಡಿಕೊಂಡಿದ್ದಾರೆ. ಇದೀಗ ಹನ್ನೊಂದನೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಉದಯ್ ಸೂರ್ಯ (Uday Surya) ಕಾಲಿಟ್ಟಿದ್ದಾರೆ. ಧಾರಾವಾಹಿಯಿಂದ ಸಾಕಷ್ಟು ಪ್ರಸಿದ್ಧ ಪಡೆದುಕೊಂಡಿದ್ದ ಉದಯ್ ಅಲಿಯಾಸ್‌ ವಿವೇಕ್‌ ಕೆಲ ಸಮಯ ಮರೆಯಾಗಿದ್ದರು. ಆದರೆ, ಇತ್ತೀಚೆಗಷ್ಟೆ ರಾಮಾಚಾರಿ (Ramachary) ಸೀರಿಯಲ್‌ನಲ್ಲಿ ಒಂದು ಒಳ್ಳೆಯ ಕ್ಯಾರೆಕ್ಟರ್‌ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದರು.

ನಾಗಕನ್ನಿಕೆ ಧಾರವಾಹಿಯಲ್ಲಿ ವಿಲನ್ ಆಗಿ ಖ್ಯಾತಿ ಗಳಿಸಿದ್ದ ಉದಯ್ ಸೂರ್ಯ ಸಿನಿಮಾದಲ್ಲೂ ನಟಿಸಿದ್ದಾರೆ. ಬಡ್ಡೀಸ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ನಟ ಕಿರಣ್‌ ರಾಜ್‌ ಆಪ್ತ ಸ್ನೇಹಿತನಾಗಿರುವ ಉದಯ್ ಸೂರ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇವರೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಇಲ್ಲಿ ಹೇಗಿರುತ್ತಾರೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನು ಬಿಗ್ ಬಾಸ್ ಮನೆಗೆ ಈಗಾಗಲೇ ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್,
ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ ಅವರು ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ
‘ಬಿಗ್​ ಬಾಸ್​ ಒಟಿಟಿ’ಗೆ ಕಾಲಿಟ್ಟ ರಾಜಸ್ಥಾನಿ ಬೆಡಗಿ; ಕನ್ನಡ ಮಾತನಾಡುವುದನ್ನು ಕೇಳಿ ಮೆಚ್ಚಿಕೊಂಡ ಸುದೀಪ್​
Akshata kuki: ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಕಾಲಿಟ್ಟ ಅಕ್ಷತಾ ಕುಕ್ಕಿ
Rakesh Adiga: ‘ಬಿಗ್​ ಬಾಸ್​’ ಮನೆಗೆ ರಾಕೇಶ್ ಅಡಿಗ ಎಂಟ್ರಿ; ಆರಂಭ ಆಗುತ್ತಾ ಸೆಕೆಂಡ್ ಇನ್ನಿಂಗ್ಸ್​?
ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಬಿಗ್​ ಬಾಸ್​​ಗೆ ಸ್ಪರ್ಧಿ; ಈ ಕಲಾವಿದನ ಬದುಕು ಎಷ್ಟು ಕಷ್ಟ ಇತ್ತು ಗೊತ್ತಾ?

ಬಿಗ್​ ಬಾಸ್ ಓಟಿಟಿ ಸೀಸನ್ ಒಟ್ಟು 40 ದಿನಗಳ ವರೆಗೆ ನಡೆಯಲಿದೆ. 40 ದಿನಗಳ ಬಳಿಕ ಟಿವಿ ಯಲ್ಲಿ 100 ದಿನಗಳ 9ನೇ ಸೀಸನ್​ ಬಿಗ್ ಬಾಸ್ ಕನ್ನಡ ಶುರುವಾಗಲಿದೆ. ಇಲ್ಲಿ ಓಟಿಟಿ ಬಿಗ್ ಬಾಸ್​ನಲ್ಲಿ ಕೊನೆಯ ವರೆಗೂ ಇದ್ದ ಟಾಪ್ ಸ್ಪರ್ಧಿಗಳು ನೇರವಾಗಿ 9ನೇ ಸೀಸನ್ ಬಿಗ್​ ಬಾಸ್​ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಸುದೀಪ್ ಹೇಳಿದ್ದಾರೆ.

Published On - 10:20 pm, Sat, 6 August 22