AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?

ತೆಲುಗಿನ ಜನಪ್ರಿಯ ಟಾಕ್ ಶೋ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ ನಾಲ್ಕನೇ ಸೀಸನ್ ಆರಂಭ ಬರಲಿದೆ. ಯಾವ ದೊಡ್ಡ ಚಾನೆಲ್​ಗಳ ಕೈಗೆ ಸಹ ಸಿಗದ ತೆಲುಗಿನ ಸ್ಟಾರ್ ನಟ-ನಟಿಯರು ಬಾಲಯ್ಯ ನಡೆಸಿಕೊಡುವ ಈ ಒಟಿಟಿ ಟಾಕ್ ಶೋಗೆ ಬರುತ್ತಾರೆ. ಈ ಬಾರಿ ಯಾರ್ಯಾರು ಬರಲಿದ್ದಾರೆ?

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?
ಮಂಜುನಾಥ ಸಿ.
|

Updated on: Oct 16, 2024 | 7:33 PM

Share

ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಟಾಕ್ ಶೋ ಎಂದರೆ ಅದು ‘ಅನ್​ಸ್ಟಾಪೆಬಲ್ ವಿತ್ ಬಾಲಕೃಷ್ಣ’. ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಈ ಶೋ ಒಂದರಿಂದಲೇ ಒಟಿಟಿ ಲಾಭದಲ್ಲಿದೆ ಎಂದರೆ ತಪ್ಪಾಗಲಾರದು. ನಂದಮೂರಿ ಬಾಲಕೃಷ್ಣ ತಮ್ಮದೇ ಆದ ರಗಡ್ ಸ್ಟೈಲ್​ನಲ್ಲಿ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಯಾವ ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳ ಕೈಗೂ ಸಿಕ್ಕದ ತೆಲುಗು ಚಿತ್ರರಂಗದ ಟಾಪ್ ಸ್ಟಾರ್​ಗಳು ಸಹ ಬಾಲಯ್ಯ ಕರೆದರೆ ಸಾಕು ಓಡೋಡಿ ಈ ಶೋಗೆ ಬರುತ್ತಾರೆ. ಬಾಲಯ್ಯ ಅಂತೂ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಕೇಳಿ ಅತಿಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಉತ್ತರ ಹೊರತೆಗೆಯುತ್ತಾರೆ.

ಕಳೆದ ಸೀಸನ್​ನಲ್ಲಿ ಬಾಲಿವುಡ್ ಸ್ಟಾರ್​ ನಟ ರಣ್​ಬೀರ್ ಕಪೂರ್, ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು, ಮಹೇಶ್ ಬಾಬು, ಅಲ್ಲು ಅರ್ಜುನ್, ನಿರ್ಮಾಪಕ ಸುರೇಶ್, ಕೀರವಾಣಿ, ಬ್ರಹ್ಮಾನಂದಂ ಇನ್ನೂ ಹಲವಾರು ಟಾಪ್ ತಾರೆಯರು ಈ ಶೋಗೆ ಆಗಮಿಸಿದ್ದರು. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರುಗಳು ದೊಡ್ಡ ದೊಡ್ಡ ಟಿವಿ ಚಾನೆಲ್​ಗಳ ಕೈಗೆ ಸಿಗುವುದಿಲ್ಲ ಆದರೆ ಬಾಲಯ್ಯ ಶೋಗೆ ಖುದ್ದಾಗಿ ಬಂದು ಸಂದರ್ಶನ ನೀಡಿದ್ದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಈಗ ಅನ್​ಸ್ಟಾಪಬಲ್ ವಿತ್ ಬಾಲಯ್ಯ ಸೀಸನ್ 4 ಪ್ರಾರಂಭ ಆಗಲಿದೆ. ಆಹಾ ಒಟಿಟಿ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಅತಿಥಿಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಾಗಿಲ್ಲ. ಆದರೆ ಮೂಲಗಳ ಪ್ರಕಾರ, ಈ ಬಾರಿಯ ಸೀಸನ್​ನ ಮೊದಲ ಅತಿಥಿ ಮೆಗಾಸ್ಟಾರ್ ಚಿರಂಜೀವಿ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಹಾಗೂ ಬಾಲಯ್ಯ ನಡುವೆ ದಶಕಗಳ ಕಾಲ ಸ್ಪರ್ಧೆ-ಪ್ರತಿಸ್ಪರ್ಧೆ ಇದ್ದರೂ ಸಹ ಇಬ್ಬರೂ ಒಳ್ಳೆಯ ಗೆಳೆಯರೇ ಹಾಗಾಗಿ ಗೆಳೆಯನನ್ನು ಮೊದಲ ಸೀಸನ್​ಗೆ ಕರೆತರಲು ಬಾಲಯ್ಯ ಸಜ್ಜಾಗಿದ್ದಾರೆ.

ಮಾತ್ರವೇ ಅಲ್ಲದೆ ಈ ಬಾರಿ ‘ಪುಷ್ಪ 2’ ಬಿಡುಗಡೆ ಸಹ ಇರುವ ಕಾರಣ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಸಹ ಬರಲಿದ್ದಾರಂತೆ. ಹಾಗೆಯೇ ರಾಜಮೌಳಿ-ಮಹೇಶ್ ಬಾಬು, ಸಮಂತಾ ಈ ವರೆಗೂ ಅನ್​ಸ್ಟಾಪೆಬಲ್ ಶೋಗೆ ಬಂದಿಲ್ಲ ಹಾಗಾಗಿ ಸಮಂತಾ ಬರುವ ಸಾಧ್ಯತೆ ಇದೆ. ಶ್ರೀಲೀಲಾ ಸಹ ಬರಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಹೀರೋ ಆಗಲು ಮುಂದಾಗಿರುವ ಬಾಲಯ್ಯ ಅವರ ಪುತ್ರ ಮೋಕ್ಷಜ್ಞ ಸಹ ಟಾಕ್ ಶೋಗೆ ಬರಲಿದ್ದಾರೆ. ಇನ್ನೂ ಕೆಲವು ಬಾಲಿವುಡ್ ತಾರೆಯರು ಸಹ ಈ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ