ನಟಿ ಅಮೀಶಾ ಪಟೇಲ್ (Ameesha Patel) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ನಿರೀಕ್ಷಿಸಿದ ರೀತಿಯಲ್ಲಿ ಅವರಿಗೆ ಈಗ ಆಫರ್ ಸಿಗುತ್ತಿಲ್ಲ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅವರು ಸುದ್ದಿ ಆಗುವುದು ಬೋಲ್ಡ್ ಫೋಟೋಗಳ ಮೂಲಕ. ಅಲ್ಲದೇ ಅವರೀಗ ಒಟಿಟಿಗಳ (OTT) ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿ ಆಗುತ್ತಿದ್ದಾರೆ. ಒಟಿಟಿಯಲ್ಲಿ ಸಲಿಂಗ ಕಾಮದ ಸಿನಿಮಾ, ವೆಬ್ ಸಿರೀಸ್ಗಳೇ ಹೆಚ್ಚಾಗಿವೆ ಎಂಬುದು ಅವರ ಅನಿಸಿಕೆ. ಅವರ ಈ ಮಾತಿಗೆ ಉರ್ಫಿ ಜಾವೇದ್ (Urfi Javed) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರ ಹೇಳಿಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಅಮೀಶಾ ಪಟೇಲ್ ನಟಿಸಿರುವ ‘ಗದರ್ 2’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರದ ಸಲುವಾಗಿ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಒಟಿಟಿ ಬಗ್ಗೆ ಅಮೀಶಾ ಪಟೇಲ್ ಅವರಿಗೆ ಬೇರೆಯದೇ ಭಾವನೆ ಇದೆ. ‘ಜನರು ಶುದ್ಧವಾದ, ಒಳ್ಳೆಯ ಸಿನಿಮಾ ನೋಡಲು ಕಾದಿದ್ದಾರೆ. ಅಜ್ಜಿ-ತಾತನ ಜೊತೆ ಮೊಮ್ಮಕ್ಕಳು ಕೂಡ ಕುಳಿತು ನೋಡುವಂತಹ ಸಿನಿಮಾಗಳನ್ನು ನಾವು ಇಂದು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಒಟಿಟಿಯಲ್ಲಿ ಖಂಡಿತವಾಗಿ ನಿಮಗೆ ಅದು ಸಿಗುವುದಿಲ್ಲ’ ಎಂದು ಅಮೀಶಾ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: Urfi Javed: ಮೊದಲ ಬಾರಿ ಮೆಚ್ಚುಗೆಗೆ ಪಾತ್ರವಾಯ್ತು ಉರ್ಫಿ ಜಾವೇದ್ ಬಟ್ಟೆ; ‘ನನಗೆ ಬೇಕು’ ಅಂತ ಕಮೆಂಟ್ ಮಾಡಿದ ನೇಹಾ ಧೂಪಿಯಾ
‘ಒಟಿಟಿಯಲ್ಲಿ ಕೇವಲ ಸಲಿಂಗ ಕಾಮದ ವಿಷಯಗಳೇ ತುಂಬಿಕೊಂಡಿವೆ. ಅದನ್ನು ನೋಡುವಾಗ ಮಕ್ಕಳ ಕಣ್ಣುಗಳನ್ನು ಮುಚ್ಚಬೇಕಿದೆ ಅಥವಾ ಅವರು ಅಂಥದ್ದನ್ನು ನೋಡದ ರೀತಿಯಲ್ಲಿ ಟಿವಿಗೆ ಚೈಲ್ಡ್ ಲಾಕ್ ಹಾಕಬೇಕಿದೆ. ಇಂಥದ್ದನ್ನೆಲ್ಲ ನೀವು ನಿಮ್ಮ ಮಕ್ಕಳೊಂದಿಗೆ ನೋಡಲು ಬಯಸುವುದಿಲ್ಲ’ ಎಂದು ಅಮೀಶಾ ಪಟೇಲ್ ಹೇಳಿದ್ದಾರೆ. ಅವರ ಈ ಹೇಳಿಕೆಗೆ ನಟಿ ಉರ್ಫಿ ಜಾವೇದ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Urfi Javed: ಚೂಯಿಂಗ್ ಗಮ್ನಿಂದ ಸಿದ್ಧವಾಯ್ತು ಉರ್ಫಿ ಜಾವೇದ್ ಬಟ್ಟೆ; ಅಸಹ್ಯ ಎಂದು ಕಮೆಂಟ್ ಮಾಡಿದ ನೆಟ್ಟಿಗರು
‘ಸಲಿಂಗ ಕಾಮ ಎಂದರೇನು? ಮಕ್ಕಳನ್ನು ಅದರಿಂದ ದೂರ ಇರಿಸುತ್ತೀರಾ? ಇಂಥ ಸೂಕ್ಷ್ಮ ವಿಚಾರದ ಬಗ್ಗೆ ತಿಳುವಳಿಕೆ ಇಲ್ಲದೇ ಮಾತನಾಡುವ ಸೆಲೆಬ್ರಿಟಿಗಳನ್ನು ಕಂಡರೆ ನನಗೆ ಕಿರಿಕಿರಿ ಆಗುತ್ತದೆ. 25 ವರ್ಷಗಳಿಂದ ಕೆಲಸ ಸಿಗದ ಕಾರಣ ಅವರು ಇಂಥ ಕೆಟ್ಟ ವ್ಯಕ್ತಿಯಾಗಿ ಪರಿವರ್ತನೆಗೊಂಡಿದ್ದಾರೆ’ ಎಂದು ಉರ್ಫಿ ಜಾವೇದ್ ಅವರು ಅಮೀಶಾ ಪಟೇಲ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.