
ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಬತ್ತಾ’ ಸಿನಿಮಾ ಈಗ ಒಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡಿದ್ದ ಈ ಚಿತ್ರಕ್ಕೆ ಡಿಜಿಟಲ್ ವೇದಿಕೆಯಲ್ಲಿ ಅದ್ಭುತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದ ವಿಭಿನ್ನ ಕಥಾಹಂದರ ಮತ್ತು ಕಲಾವಿದರ ನೈಜ ಅಭಿನಯ ವೀಕ್ಷಕರ ಮನ ಗೆಲ್ಲುತ್ತಿದೆ. ಚಿತ್ರಮಂದಿರಗಳಿಗಿಂತ ಒಟಿಟಿಯಲ್ಲೇ ಈ ಚಿತ್ರಕ್ಕೆ ಅತಿ ಹೆಚ್ಚು ಧನಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ ಅನ್ನೋದು ವಿಶೇಷ. ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ.
ಈ ತಮಿಳು ಡ್ರಾಮಾ ಸಿನಿಮಾವನ್ನು ಬಾಲಾಜಿ ತರಣೀತಾರನ್ ನಿರ್ದೇಶಿಸಿದ್ದಾರೆ. ಚಿತ್ರವು ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದವು. ಆದರೂ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಸಿನಿಮಾ ಚಿತ್ರಮಂದಿರದಲ್ಲಿ ಕೇವಲ 33 ಕೋಟಿ ರೂಪಾಯಿ ಗಳಿಸಿತ್ತು.
ಪ್ರಸ್ತುತ ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರ ಲಭ್ಯವಿದೆ. ಇದರಿಂದಾಗಿ ಸಿನಿಮಾ ಹೆಚ್ಚು ವೀಕ್ಷಕರನ್ನು ತಲುಪಲು ಸಾಧ್ಯವಾಗಿದೆ. ವಿಜಯ್ ಸೇತುಪತಿ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ಅವರ ಅಭಿನಯಕ್ಕೆ ಮಾರುಹೋಗಿದ್ದಾರೆ.
ಶಾಲೆಯ ಶೌಚಾಲಯದಲ್ಲಿ ಸಣ್ಣ ಹುಡುಗನೊಬ್ಬ ಆಕಸ್ಮಿಕವಾಗಿ ಗ್ಯಾಂಗ್‌ಸ್ಟರ್‌ನನ್ನು ಬಂಧಿಸುತ್ತಾನೆ. ಈ ಘಟನೆಯಿಂದ ಆತನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಈ ಅಪರೂಪದ ಕಥಾವಸ್ತು ವೀಕ್ಷಕರನ್ನು ಸೆಳೆಯುತ್ತಿದೆ. ಭಾವನಾತ್ಮಕ ಸನ್ನಿವೇಶಗಳು ಒಟಿಟಿ ವೀಕ್ಷಕರಿಗೆ ತುಂಬಾ ಹತ್ತಿರವಾಗಿವೆ. ನೈಜ ಅಭಿನಯ ಸಿನಿಮಾ ಮೆರುಗನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು, ಕನ್ನಡದ ವೆಬ್ ಸರಣಿಯೂ ಇದೆ
ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದವರು ಈಗ ಒಟಿಟಿಯಲ್ಲಿ ವೀಕ್ಷಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಟಿಟಿ ಬಿಡುಗಡೆಯು ಈ ಚಿತ್ರಕ್ಕೆ ಹೊಸ ಜೀವ ನೀಡಿದೆ. ಚಿತ್ರಮಂದಿರದಲ್ಲಿ ಸಿಗದ ಯಶಸ್ಸು ಮತ್ತು ಮೆಚ್ಚುಗೆ ಈಗ ಒಟಿಟಿಯಲ್ಲಿ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.