
‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾ ಕೇವಲ ಒಂದು ತಿಂಗಳಿಗೆ ಒಟಿಟಿಗೆ ಕಾಲಿಡಲು ರೆಡಿ ಆಗಿದೆ. ಹೌದು, ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ರಿಲೀಸ್ ಆದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಚಿತ್ರ ಅಕ್ಟೋಬರ್ 31ಕ್ಕೆ ಒಟಿಟಿಗೆ ಕಾಲಿಡುತ್ತಿದೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಮಧ್ಯೆಯೂ ಈ ನಿರ್ಧಾರ ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾರತದ ಕಲೆಕ್ಷನ್ 592 ಕೋಟಿ ರೂಪಾಯಿ. ಅಕ್ಟೋಬರ್ 27ರಂದು (ನಾಲ್ಕನೇ ಸೋಮವಾರ) ಸಿನಿಮಾ 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ, ವಾರದ ದಿನವೂ ಸಿನಿಮಾ ಉತ್ತಮವಾಗಿಯೇ ಗಳಿಕೆ ಮಾಡುತ್ತಿದೆ. ಮುಂಬರೋ ವೀಕೆಂಡ್ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇತ್ತು. ಆದಾಗ್ಯೂ ಸಿನಿಮಾನ ಒಟಿಟಿಗೆ ತರುವ ನಿರ್ಧಾರ ಮಾಡಲಾಗಿದೆ. ಇದಕ್ಕೆ ಅಸಲಿ ಕಾರಣ ಏನು ಎಂಬುದು ರಿವೀಲ್ ಆಗಿದೆ.
‘ಕಾಂತಾರ’ ಚಿತ್ರವನ್ನು ಅಮೇಜಾನ್ ಪ್ರೈಮ್ ವಿಡಿಯೋ ಖರೀದಿ ಮಾಡಿತ್ತು. ಅದೇ ರೀತಿ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಇದೇ ಒಟಿಟಿ ಸಂಸ್ಥೆ ಖರೀದಿಸಿದೆ. ಅಕ್ಟೋಬರ್ 31ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಬಿಡುಗಡೆ ಕಾಣಲಿದೆ. ಕೇವಲ ಒಂದು ತಿಂಗಳಿಗೆ ಒಟಿಟಿಗೆ ಬರಲು ಕಾರಣ ಪ್ರೈಮ್ ವಿಡಿಯೋ ಹಾಗೂ ಹೊಂಬಾಳೆ ಮಧ್ಯೆ ಆದ ಒಪ್ಪಂದ.
get ready to witness the LEGENDary adventure of BERME 🔥#KantaraALegendChapter1OnPrime, October 31@hombalefilms @KantaraFilm @shetty_rishab @VKiragandur @ChaluveG @rukminitweets @gulshandevaiah #ArvindKashyap @AJANEESHB @HombaleGroup pic.twitter.com/ZnYz3uBIQ2
— prime video IN (@PrimeVideoIN) October 27, 2025
ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಈ ಕಾರಣದಿಂದಲೇ ಅಮೇಜಾನ್ ಪ್ರೈಮ್ ವಿಡಿಯೋದವರು 125 ಕೋಟಿ ರೂಪಾಯಿ ನೀಡಿ ಸಿನಿಮಾನ ಖರೀದಿ ಮಾಡಿದೆ ಎನ್ನಲಾಗಿದೆ. ಇಷ್ಟು ದೊಡ್ಡ ಮೊತ್ತ ನೀಡಿದ್ದರಿಂದ ಒಂದೇ ತಿಂಗಳಿಗೆ ಚಿತ್ರವನ್ನು ಒಟಿಟಿಗೆ ತರಲು ಒಪ್ಪಿಗೆ ನೀಡಬೇಕು ಎಂಬ ಷರತ್ತು ಇತ್ತು. ಈ ಷರತ್ತಿಗೆ ಹೊಂಬಾಳೆ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ. ಹೀಗಾಗಿಯೇ ಒಂದೇ ತಿಂಗಳಿಗೆ ಸಿನಿಮಾ ಒಟಿಟಿಗೆ ಬರುತ್ತಿದೆ. ಈಗಾಗಲೇ ಚಿತ್ರ ಥಿಯೇಟರ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಅಂದುಕೊಂಡತೆ ಸಿನಿಮಾ ಒಟಿಟಿಯಲ್ಲಿ ಬಂದಿದ್ದಕ್ಕೆ ಅವರ ಕಡೆಯಿಂದಲೂ ದೊಡ್ಡ ಮೊತ್ತದ ಹಣ ಸಿಗಲಿದೆ.
ಇದನ್ನೂ ಓದಿ: ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
‘ಕಾಂತಾರ’ ಸಿನಿಮಾ ಮಾಡುವಾಗ ಅಷ್ಟು ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತದೆ ಎಂಬ ಕಲ್ಪನೆ ತಂಡದವರಿಗೂ ಇರಲಿಲ್ಲ. ಹೀಗಾಗಿ ಅಮೇಜಾನ್ ಜೊತೆ ಒಪ್ಪಂದ ಮಾಡಿಕೊಂಡು, ಬೇಗನೆ ಸಿನಿಮಾನ ಒಟಿಟಿಗೆ ತರಲು ಒಪ್ಪಂದ ಆಗಿತ್ತು. ನಂತರ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ ಪರಭಾಷೆಯಲ್ಲೂ ಬಿಡುಗಡೆ ಮಾಡಲಾಯಿತು. ಹೀಗಾಗಿ, ಒಟಿಟಿ ರಿಲೀಸ್ ದಿನಾಂಕವನ್ನು ಪ್ರೈಮ್ ವಿಡಿಯೋ ಮುಂದಕ್ಕೆ ಹಾಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Tue, 28 October 25