‘ಬಿಗ್ ಬಾಸ್ ಒಟಿಟಿ’ ಸ್ಪರ್ಧಿಗಳು ವೀಕ್ಷಕರನ್ನು ಸೆಳೆಯೋಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮನೆಯಲ್ಲಿ ಕಿಸ್ ಮಾಡಿದ ಘಟನೆ ಕೂಡ ನಡೆದಿದೆ. ಆದರೆ, ಈಗ ಬಿಗ್ ಬಾಸ್ ಸ್ಪರ್ಧಿ ಜೀಶನ್ ಖಾನ್ ಅವರು ಸಹ ಸ್ಪರ್ಧಿ ಪ್ರತೀಕ್ ಸೆಹಜ್ಪಾಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
‘ಬಾಸ್ ಮ್ಯಾನ್ ಬಾಸ್ ಲೇಡಿ’ ಹೆಸರಿನ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಜೀಶನ್ ಮತ್ತು ಪ್ರತೀಕ್ ನಡುವೆ ಕಿತ್ತಾಟ ಏರ್ಪಟ್ಟಿದೆ. ಆರಂಭದಲ್ಲಿ ಸಣ್ಣಗಿದ್ದ ಜಗಳ ನಂತರ ಮಿತಿ ಮೀರಿದೆ. ಇದು ಮನೆಯವರ ಗಮನಕ್ಕೆ ಬಂದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಪ್ರತೀಕ್ ಅವರನ್ನು ಜೀಶನ್ ತಳ್ಳಿ ಹಲ್ಲೆ ನಡೆಸಿದ್ದಾರೆ.
ಜೀಶನ್ ಮತ್ತು ದಿವ್ಯಾ ‘ ಬಿಗ್ ಬಾಸ್ ಮ್ಯಾನ್ ಹಾಗೂ ಬಿಗ್ ಬಾಸ್ ಲೇಡಿ’ ಆಗಿದ್ದರು. ಇವರು ಆಟದ ನಿಯಮ ಮುರಿದವರಿಗೆ ರೆಡ್ ಫ್ಲಾಗ್ ನೀಡಬೆಕಿತ್ತು. ಆದರೆ, ಇಬ್ಬರೂ ತಮ್ಮದೇ ನಿಯಮಗಳನ್ನು ಸೃಷ್ಟಿ ಮಾಡಿಕೊಂಡಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಉದ್ಭವ ಆದವು. ಜೀಶನ್ ಅವರು ಪ್ರತೀಕ್ ಮೇಲೆ ಹಲ್ಲೆ ಮಾಡಿ ಬಿಗ್ ಬಾಸ್ ನಿಯಮ ಮುರಿದರು. ಈ ಮೂಲಕ ಮನೆಯಿಂದ ಔಟ್ ಆದರು.
BREAKING NEWS??? Kar diya #BiggBoss ne @therealzeeshank ko ghar se beghar!! Aise kya hua task mein!! Dekho #BiggBossOTT 24×7 live channel NOW!! https://t.co/JQqK1c1AhX#BiggBossOTT #ItnaOTT #BiggBossOTTVootSelect #VootSelect #BBOtt24x7 #Voot @justvoot pic.twitter.com/Uj3uB6rhBq
— Bigg Boss (@BiggBoss) August 25, 2021
ಹಿಂದಿಯ ‘ಕುಂಕುಮ್ ಭಾಗ್ಯ’ ಧಾರಾವಾಹಿ ಮೂಲಕ ನಟ ಜೀಶನ್ ಖಾನ್ ಗುರುತಿಸಿಕೊಂಡರು. ಅವರು ಇತ್ತೀಚೆಗೆ ಗೋವಾ ವಿಮಾನ ನಿಲ್ದಾಣದಿಂದ ಮುಂಬೈಗೆ ಬರುವವರಿದ್ದರು. ಈ ವೇಳೆ ಸ್ನಾನ ಮಾಡಲು ತೆರಳುವಾಗ ತೊಡುವ ಬಟ್ಟೆಯನ್ನು ಹಾಕಿಕೊಂಡಿದ್ದರು. ಆದರೆ, ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸೋಕೆ ಅಲ್ಲಿನ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಈ ರೀತಿಯ ಉಡುಗೆಗೆ ಅನುಮತಿ ಇಲ್ಲ ಎಂದು ಅಧಿಕಾರಿಗಳು ಕಡ್ಡಿಮುರಿದಂತೆ ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
Rules! Rules! Rules! Aaj toote saare rules of the house, parinam swarup
Kiya @theonlyzeeshank ko ghar se out. Watch all the drama on #BiggBossOTT 24×7 live channel! https://t.co/JQqK1c1AhX#BiggBossOTT #ItnaOTT #BiggBossOTTVootSelect #VootSelect #BBOtt24x7 #Voot @justvoot pic.twitter.com/7aNoaUbLM3— Bigg Boss (@BiggBoss) August 25, 2021
ಇದನ್ನೂ ಓದಿ: ‘ಶುಗರ್ ಡ್ಯಾಡಿ, ಡ್ರಗ್ ಇನ್ ಸ್ಯಾಂಡಲ್ವುಡ್’; ಬಿಗ್ ಬಾಸ್ನಿಂದ ಬಂದ ಬೆನ್ನಲ್ಲೇ ಪುಸ್ತಕ ಬರೆಯಲು ಮುಂದಾದ ಪ್ರಶಾಂತ್ ಸಂಬರಗಿ
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್ ಬಾಸ್ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ