‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು

ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಈ ಕಾರಣಕ್ಕೆ ಮುಸ್ಲಿಂ ಹುಡುಗಿಯನ್ನೇ ಅವರು ಮದುವೆ ಆಗಿದ್ದರು. ಈಗ ಇವರ ದಾಂಪತ್ಯ ಕೊನೆ ಆಗಿದೆ.

‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು
‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು

Updated on: Nov 20, 2024 | 10:49 AM

ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಅವರು ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಇದರಿಂದ ಇವರ 29 ವರ್ಷಗಳ ದಾಂಪತ್ಯ ಕೊನೆ ಆಗಿದೆ. ಇಬ್ಬರೂ ಇನ್ನೇನು ಮೂರು ದಶಕಗಳ ದಾಂಪತ್ಯ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ, ಅದಕ್ಕೂ ಮೊದಲೇ ಇಬ್ಬರೂ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಈ ವಿಚಾರವನ್ನು ಸೈರಾ ಬಾನು ಅವರು ಖಚಿತಪಡಿಸಿದ್ದರು. ಈಗ ಎಆರ್​ ರೆಹಮಾನ್ ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ರೆಹಮಾನ್ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ  ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ ರೆಹಮಾನ್.

1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಆಗಿದ್ದರು. ರೆಹಮಾನ್ ಅವರು ನಾಚಿಕೆ ಸ್ವಭಾವದವರು. ಹೀಗಾಗಿ, ಅವರಿಗೆ ಯಾರನ್ನೂ ಪ್ರೀತಿ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ಅರೇಂಜ್ ಮ್ಯಾರೇಜ್ ಆಗಬೇಕಾಯಿತು. ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ಇದನ್ನೂ ಓದಿ: ಎಆರ್ ರೆಹಮಾನ್ ವಿಚ್ಛೇದನ: ಸೈರಾ ಬಾನು ಜೊತೆಗಿನ 29 ವರ್ಷಗಳ ದಾಂಪತ್ಯ ಅಂತ್ಯ

ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಈ ಕಾರಣಕ್ಕೆ ಮುಸ್ಲಿಂ ಹುಡುಗಿಯನ್ನೇ ಅವರು ಮದುವೆ ಆಗಿದ್ದರು. ಈಗ ಇವರ ದಾಂಪತ್ಯ ಕೊನೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us