ಪಾಕಿಸ್ತಾನದ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ದವನ ಬದುಕು ಬದಲಿಸಿತು ಈ ರಿಯಾಲಿಟಿ ಶೋ

2016 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪಾಕಿಸ್ತಾನದ ಟೀ ಮಾರುವ ಅರ್ಷದ್ ಖಾನ್, 'ಶಾರ್ಕ್ ಟ್ಯಾಂಕ್ ಪಾಕಿಸ್ತಾನ'ದಲ್ಲಿ ತಮ್ಮ 'ಕೆಫೆ ಚಾಯ್ ವಾಲಾ'ಕ್ಕೆ ದೊಡ್ಡ ಮೊತ್ತದ ಹೂಡಿಕೆ ಪಡೆದಿದ್ದಾರೆ. ಶಾರ್ಕ್‌ಗಳಿಂದ 1 ಕೋಟಿ ಪಾಕಿಸ್ತಾನಿ ರೂಪಾಯಿ ಹೂಡಿಕೆ ಪಡೆದಿದ್ದಾರೆ.

ಪಾಕಿಸ್ತಾನದ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ದವನ ಬದುಕು ಬದಲಿಸಿತು ಈ ರಿಯಾಲಿಟಿ ಶೋ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Nov 17, 2024 | 3:02 PM

ಕೆಲವು ವರ್ಷಗಳ ಹಿಂದೆ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ಟೀ ಮಾರುತ್ತಿದ್ದ ಓರ್ವ ಸುಂದರ ಯುವಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದರು. ಅರ್ಷದ್ ಖಾನ್ ಎಂಬುದು ಈ ಹುಡುಗನ ಹೆಸರು. ಈ ಫೋಟೋ ವೈರಲ್ ಆಗಿದ್ದು 2016 ರಲ್ಲಿ. ಅರ್ಷದ್‌ನ ಸಂಪೂರ್ಣ ಭವಿಷ್ಯ ಈಗ ಬದಲಾಗಿದೆ. ಅವರು ‘ಶಾರ್ಕ್ ಟ್ಯಾಂಕ್ ಪಾಕಿಸ್ತಾನ’ದಲ್ಲಿ ತಮ್ಮ ಕೆಫೆ ವ್ಯವಹಾರಕ್ಕಾಗಿ ಹೂಡಿಕೆ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಷದ್ ತಮ್ಮ ಆನ್‌ಲೈನ್ ಜನಪ್ರಿಯತೆ ಮತ್ತು ಭವಿಷ್ಯದ ಕನಸುಗಳನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ಅವರ ಜೊತೆಗಾರ ಕಾಜಿಮ್ ಹಾಸನ್ ಕೂಡ ಇದ್ದರು. ಅವರು ತಮ್ಮ ಬ್ರಾಂಡ್ ‘ಕೆಫೆ ಚಾಯ್​ವಾಲಾ’ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಮತ್ತು 1 ಕೋಟಿ ಪಾಕಿಸ್ತಾನಿ ರೂಪಾಯಿ ಹೂಡಿಕೆಯನ್ನು ಕೇಳಿದರು.

‘ಶಾರ್ಕ್ ಟ್ಯಾಂಕ್’ ಶೋನಲ್ಲಿ ಕೆಲವು ದೊಡ್ಡ ಉದ್ಯಮಿಗಳು ಕುಳಿತಿರುತ್ತಾರೆ ಮತ್ತು ವಿವಿಧ ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಇದು ಸ್ಟಾರ್ಟ್‌ಅಪ್‌ಗಳು, ಸಣ್ಣ ಉದ್ಯಮಗಳಿಗೆ ಹೂಡಿಕೆ ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಅರ್ಷದ್ ತಮ್ಮ ಬಗ್ಗೆ ಮಾಹಿತಿ ನೀಡಿದರು. ‘2016 ರಲ್ಲಿ, ನನ್ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರ ನಂತರ ಕೆಲವು ತಿಂಗಳುಗಳವರೆಗೆ ನನಗೆ ನಿಜವಾಗಿಯೂ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ಮಾಡೆಲಿಂಗ್ ಮತ್ತು ನಟನೆಯನ್ನು ಸಹ ಪ್ರಾರಂಭಿಸಿದೆ. ಅದಕ್ಕೂ ಮೊದಲು ನಾನು ಇಸ್ಲಾಮಾಬಾದ್‌ನ ಹೊರಗೆ ಹೋಗಿರಲಿಲ್ಲ. ನನ್ನದೇ ಕೆಫೆ ಆರಂಭಿಸುವಂತೆ ಅನೇಕರು ಸಲಹೆ ನೀಡಿದ್ದಾರೆ. ಇತರರ ಧಾಬಾಗಳಲ್ಲಿ ಕೆಲಸ ಮಾಡುವಾಗ, ನಾನು ನನ್ನದೇ ಆದ ಕೆಫೆಯನ್ನು ಹೊಂದುವ ಕನಸು ಕಾಣುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಸದ್ದೇ ಇಲ್ಲದೆ ಸಿನಿಮಾ ಮುಗಿಸಿದ ಶ್ರೀಲೀಲಾ, ರಾಬಿನ್​ಹುಡ್​ಗೆ ನಾಯಕಿ

ಅರ್ಷದ್ ಅವರ ಸಹ ಉದ್ಯಮಿ ಕಾಜಿಮ್ ‘2020 ರಲ್ಲಿ, ನಾವು ನಮ್ಮ ಮೊದಲ ಕೆಫೆಯನ್ನು ಪ್ರಾರಂಭಿಸಿದ್ದೇವೆ. ಅದು ಇಸ್ಲಾಮಾಬಾದ್‌ನ ಮೇಲ್ಛಾವಣಿಯ ಕೆಫೆಯಾಗಿತ್ತು. ಆದರೆ ಈ ಕೆಫೆ ಪ್ರಾರಂಭವಾದ ಕೂಡಲೇ ಕೊರೊನಾ ಮಹಾಮಾರಿ ಬಂದಿತು. ನಂತರ ಅಕ್ಟೋಬರ್‌ನಲ್ಲಿ ನಾವು ಮತ್ತೆ ಪ್ರಾರಂಭಿಸಿದೆವು. ಈಗ ನಾವು ಪಾಕಿಸ್ತಾನದಲ್ಲಿ ಎರಡು ಮತ್ತು ಇಂಗ್ಲೆಂಡ್‌ನಲ್ಲಿ ಮೂರು ಮಳಿಗೆಗಳನ್ನು ಹೊಂದಿದ್ದೇವೆ. ನಾವು ಫ್ರ್ಯಾಂಚೈಸ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. 35 ಸಾವಿರ ಪಾಕಿಸ್ತಾನದ ರೂಪಾಯಿಗಳಿಗೆ ನಾವು ಕೆಫೆಯನ್ನು ಫ್ರಾಂಚೈಸ್ ಮಾಡುತ್ತೇವೆ ಮತ್ತು 5 ಪ್ರತಿಶತ ರಾಯಲ್ಟಿ ಸ್ವೀಕರಿಸುತ್ತೇವೆ’ ಎಂದರು ಅವರು.

ಮೂರು ವರ್ಷಗಳಲ್ಲಿ ಅವರ ಒಟ್ಟು ಗಳಿಕೆ ಸುಮಾರು 2 ಕೋಟಿ ಪಾಕಿಸ್ತಾನಿ ರೂಪಾಯಿ ಎಂದು ಕಾರ್ಯಕ್ರಮದ ತೀರ್ಪುಗಾರ ಜುನೈದ್ ಇಕ್ಬಾಲ್ ಉಲ್ಲೇಖಿಸಿದ್ದಾರೆ. ರಬೀಲ್ ವಾರಾಯಿಚ್ ಅರ್ಷದ್ ಮತ್ತು ಕಾಜಿಮ್‌ಗೆ 1 ಕೋಟಿ ರೂ. ನೀಡಲು ಒಪ್ಪಿದ್ದಾರೆ. ಆದರೆ ಆದಾಯ ಕಡಿಮೆ ಇರುವುದರಿಂದ ವ್ಯಾಪಾರಕ್ಕೆ ಹೆಚ್ಚಿನ ಗಮನ ನೀಡಬೇಕಾಗಿರುವುದರಿಂದ ಶೇ.24ರಷ್ಟು ಈಕ್ವಿಟಿ ನೀಡುವಂತೆ ಕೋರಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sun, 17 November 24

ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್