Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್​ನಿಂದ ಇಂದು ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಇವರೇ ನೋಡಿ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ. ಆದರೆ ಈ ವಾರ ಎಲಿಮಿನೇಷನ್ ಪಕ್ಕಾ ಆಗಿದೆ. ಈ ವಾರ ಜೋಡಿ ಎಲಿಮಿನೇಷನ್ ಎಂದು ಸುದೀಪ್ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ಈ ವಾರ ಬಿಗ್​ಬಾಸ್​ ಮನೆಯಿಂದ ಹೊರಬಿದ್ದಿರುವುದು ಯಾರು?

ಬಿಗ್​ಬಾಸ್​ನಿಂದ ಇಂದು ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಇವರೇ ನೋಡಿ
Follow us
ಮಂಜುನಾಥ ಸಿ.
|

Updated on: Nov 17, 2024 | 10:07 AM

ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಕಳೆದ ವಾರ ಭವ್ಯಾ ಅವರು ಇನ್ನೇನು ಎಲಿಮಿನೇಟ್ ಆಗಿಯೇ ಬಿಟ್ಟರು ಎಂಬಲ್ಲಿಗೆ ಹೋಗಿ ಅವರು ಮನೆಯಿಂದ ಹೊರ ಹೋಗದೆ ಉಳಿದುಕೊಂಡಿದ್ದರು. ಅಸಲಿಗೆ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ. ಆದರೆ ಈ ವಾರ ಎಲಿಮಿನೇಷನ್ ಪಕ್ಕಾ ಆಗಲಿದೆ. ಮಾತ್ರವಲ್ಲದೆ, ನಿನ್ನೆ ತೋರಿಸಿರುವ ಬಿಗ್​ಬಾಸ್ ಪ್ರೋಮೋ ಪ್ರಕಾರ ಈ ವಾರ ಒಬ್ಬರಲ್ಲ ಬದಲಿಗೆ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅಂದಹಾಗೆ ಈ ವಾರ ಎಲಿಮಿನೇಷನ್ ಆಗುತ್ತಿರುವುದು ಯಾರು? ಇಲ್ಲಿದೆ ಮಾಹಿತಿ.

ಈ ವಾರ ಜೋಡಿ ಟಾಸ್ಕ್​ ಇತ್ತು. ಮನೆಯ ಸದಸ್ಯರು ಜೋಡಿಗಳಾಗಿ ಒಬ್ಬರಿಗೊಬ್ಬರು ಒಟ್ಟೊಟ್ಟಿಗೆ ಟಾಸ್ಕ್​ನಲ್ಲಿ ಭಾಗಿ ಆಗಬೇಕಿತ್ತು, ಪರಸ್ಪರ ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು ಒಟ್ಟಿಗೆ ಬಾಳಬೇಕಿತ್ತು. ಇದೇ ಕಾರಣಕ್ಕೆ ಈ ವಾರ ಜೋಡಿ ಎಲಿಮಿನೇಷನ್ ಆಗಲಿದೆ ಎನ್ನುವ ಸುಳಿವನ್ನು ಶನಿವಾರದ ಎಪಿಸೋಡ್​ನಲ್ಲಿಯೇ ಸುದೀಪ್ ನೀಡಿದ್ದರು. ಅಲ್ಲದೆ ಕಳೆದ ವಾರ ಎಲಿಮಿನೇಷನ್ ಆಗಿರದ ಕಾರಣ ಈ ವಾರ ಇಬ್ಬರು ಎಲಿಮಿನೇಟ್ ಆಗಬಹುದು ಎಂಬ ಊಹೆಯೂ ಪ್ರೇಕ್ಷಕರಿಗೆ ಇತ್ತು.

ಕಳೆದ ವಾರ ಭವ್ಯಾ ಗೌಡ ಇನ್ನೇನು ಎಲಿಮಿನೇಟ್ ಆದರು ಎಂಬಲ್ಲಿಗೆ ಹೋಗಿ ವಾಪಸ್ಸಾಗಿದ್ದರು. ಧನರಾಜ್ ಸಹ ಲಿಸ್ಟ್​ನಲ್ಲಿದ್ದರು. ಆದರೆ ಅವರನ್ನು ಶನಿವಾರವೇ ಸುದೀಪ್ ಸೇಫ್ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಅವರು ಧನರಾಜ್, ಮೋಕ್ಷಿತಾ ಮತ್ತು ಗೋಲ್ಡ್ ಸುರೇಶ್ ಅವರನ್ನು ಮಾತ್ರವೇ ಸೇಫ್ ಮಾಡಿದ್ದಾರೆ. ಇನ್ನೂ ಹಲವು ಸ್ಪರ್ಧಿಗಳು ನಾಮಿನೇಷನ್ ತೂಗುಗತ್ತಿಯ ಕೆಳಗೆ ಇದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಅನುಷಾ ರೈ ಅವರು ಈ ವಾರ ಬಿಗ್​ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ, ಬರುತ್ತಿರುವವರು ಯಾರು?

ಅನುಷಾ ರೈ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಇತರೆ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಅನುಷಾ ರೈ ಅವರು ಮನೆಯಲ್ಲಿ ತುಸು ಕಡಿಮೆ ಗಮನ ಸೆಳೆದಿದ್ದಾರೆ. ಟಾಸ್ಕ್​ಗಳಲ್ಲಿಯೂ ತುಸು ಕಡಿಮೆ ಪ್ರದರ್ಶನವನ್ನೇ ತೋರಿಸಿದ್ದಾರೆ. ಚೈತ್ರಾ, ಇನ್ನಿತರರ ರೀತಿ ವಿವಾದಗಳಲ್ಲಿಯೂ ಭಾಗಿ ಆಗಿಲ್ಲ. ಹನುಮ, ಧನರಾಜ್ ರೀತಿ ಮನೊರಂಜನೆಯನ್ನೂ ಹೆಚ್ಚಾಗಿ ನೀಡಿಲ್ಲ. ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರಾದರೂ ಅದು ಮುಂದಿನ ವಾರಕ್ಕೆ ಉಳಿದುಕೊಳ್ಳುವಷ್ಟು ಸಾಕಾಗಿಲ್ಲ. ಈಗ ಅನುಷಾ ರೈ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಸುದೀಪ್ ಈ ವಾರ ಜೋಡಿ ಎಲಿಮಿನೇಷನ್ ಎಂದು ಹೇಳಿರುವ ಪ್ರೋಮೋ ಬಿಡುಗಡೆ ಮಾಡಲಾಗಿದೆಯಾದರೂ ಈ ವಾರ ಜೋಡಿ ಅಲ್ಲ ಬದಲಿಗೆ ಒಬ್ಬರೇ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಾರ ಧನರಾಜ್ ಎಲಿಮಿನೇಟ್ ಆಗುತ್ತಾರೆ ಎಂದು ಹಲವರು ನಿರೀಕ್ಷೆ ಮಾಡಿದ್ದರು. ಆದರೆ ಅನುಷಾ ಎಲಿಮಿನೇಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ