ಬಿಗ್ ಬಾಸ್​ನಿಂದ ಸಿನಿಮಾಗಳು ಬರುತ್ತೆ ಅನ್ನೋದು ಸುಳ್ಳು; ಕರಾಳ ಸತ್ಯ ಹೇಳಿದ ಧರ್ಮ ಕೀರ್ತಿರಾಜ್

ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಸಿನಿಮಾ ಆಫರ್​​​ಗಳು ಬರುತ್ತವೆ ಎಂಬ ನಂಬಿಕೆ ತಪ್ಪು ಎಂದು ಹೇಳಿದ್ದಾರೆ. ಬಿಗ್ ಬಾಸ್ ಮೂಲಕ ಅವರು ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಿದ್ದಾರೆ ಮತ್ತು ತಮ್ಮ ಬಗ್ಗೆ ಜನರಿಗೆ ತಿಳುವಳಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಒಳ್ಳೆಯ ಸಿನಿಮಾಗಳ ಮೂಲಕ ಅವರು ಜನರನ್ನು ಮೆಚ್ಚಿಸುವ ಭರವಸೆ ಹೊಂದಿದ್ದಾರೆ.

ಬಿಗ್ ಬಾಸ್​ನಿಂದ ಸಿನಿಮಾಗಳು ಬರುತ್ತೆ ಅನ್ನೋದು ಸುಳ್ಳು; ಕರಾಳ ಸತ್ಯ ಹೇಳಿದ ಧರ್ಮ ಕೀರ್ತಿರಾಜ್
ಧರ್ಮ

Updated on: Mar 01, 2025 | 11:56 AM

ಬಿಗ್ ಬಾಸ್​ನಲ್ಲಿ ಮಿಂಚಿದ ಬಳಿಕ ಸಿನಿಮಾ ಆಫರ್​ಗಳು ಬರೋಕೆ ಆರಂಭ ಆಗುತ್ತವೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಆದರೆ, ಈ ಮಾತು ಇತ್ತೀಚಗೆ ಸುಳ್ಳಾಗುತ್ತಿದೆ. ಕೆಲವರಿಗೆ ಒಂದೆರಡು ಆಫರ್​ಗಳು ಬಂದಿರಬಹುದು. ಆದರೆ, ನಂತರ ಸಾಬೀತು ಮಾಡಿಕೊಳ್ಳದೆ ಇದ್ದರೆ ಮತ್ತೆ ಆಫರ್​ಗಳು ಬರೋದು ಅನುಮಾನವೇ. ಆದರೆ, ಯಾರೊಬ್ಬರೂ ಈ ವಿಚಾರವನ್ನು ಓಪನ್ ಆಗಿ ಹೇಳಿಕೊಳ್ಳೋಕೆ ರೆಡಿ ಇಲ್ಲ. ಧರ್ಮ ಕೀರ್ತಿರಾಜ್ ಅವರು ಈ ವಿಚಾರವನ್ನು ಓಪನ್ ಆಗಿ ಮಾತನಾಡಿದ್ದಾರೆ.

ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಧರ್ಮ ಕೀರ್ತಿರಾಜ್ ಮುಕ್ತವಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಧರ್ಮ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಅವರ ಹಿನ್ನಡೆಗೆ ಇದು ಕೂಡ ಕಾರಣ ಆಯಿತು ಎನ್ನಬಹುದು. ಹೊರ ಬಂದ ಬಳಿಕವೂ ಅವರು ಮುಕ್ತವಾಗಿ ಮಾತನಾಡೋದನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್​ನಿಂದ 50 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ’: ವೇದಿಕೆಯಲ್ಲೇ ಹೇಳಿದ ಹನುಮಂತ 

ಇದನ್ನೂ ಓದಿ
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ನಟ
ಹುಬ್ಬಳ್ಳಿ ವೇದಿಕೆಯಲ್ಲೂ ಹನುಮಂತನ ಮದುವೆ ಮಾತು; ವಿಡಿಯೋ ನೋಡಿ..
ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಗತ್ತು ತೋರಿಸಿ ಬಂದಿದ್ದ ಕಿಚ್ಚ ಸುದೀಪ್
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ

‘ಬಿಗ್ ಬಾಸ್​ನಿಂದ ಸಿನಿಮಾ ಆಫರ್​ಗಳು ಬರುತ್ತವೆ ಅನ್ನೋದು ತಪ್ಪು. ಸಿನಿಮಾನೇ ಬೇರೆ, ಇದೇ ಬೇರೆ’ ಎಂದು ಧರ್ಮ ಅವರು ಹೇಳಿಕೊಂಡಿದ್ದಾರೆ. ಅವರು ಹೇಳಿರುವ ವಿಚಾರವನ್ನು ಅನೇಕರು ಒಪ್ಪಿದ್ದಾರೆ. ಇಷ್ಟು ವರ್ಷಗಳಾದರೂ ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅಷ್ಟು ಆಫರ್ ಬಂತು, ಇಷ್ಟು ಆಫರ್ ಬಂತು ಎಂದು ಹೇಳಿದವರೇ ಹೆಚ್ಚು. ಆದರೆ, ಧರ್ಮ ಅವರು ಮಾತ್ರ ಓಪನ್ ಆಗಿ ಸತ್ಯ ಹೇಳಿದ್ದಾರೆ.

‘ಬಿಗ್ ಬಾಸ್’ನಿಂದ ಏನೂ ಲಾಭ ಆಗಲೇ ಇಲ್ಲವೇ? ಹಾಗಿಲ್ಲ. ಇದರಿಂದ ಸಾಕಷ್ಟು ಒಳಿತೂ ಆಗಿದೆ ಎಂದು ಧರ್ಮ ಹೇಳಿದ್ದಾರೆ. ‘ಅವನು ಕೀರ್ತಿರಾಜ್ ಮಗ, ಅವನಿಗೆ ಧಿಮಾಕು ಎಂದೆಲ್ಲ ಜನರು ನನ್ನ ಬಗ್ಗೆ ಅಂದುಕೊಂಡಿದ್ದಿರಬಹುದು. ಆದರೆ, ಬಿಗ್ ಬಾಸ್​ಗೆ ಹೋಗಿ ನಾನು ಯಾರು ಅನ್ನೋದು ಗೊತ್ತಾಗಿದೆ. ಜನರ ಜೊತೆ ರೀಕನೆಕ್ಟ್ ಆದೆ. ಒಳ್ಳೆಯ ಸಿನಿಮಾ ಕೊಟ್ಟರೆ ಜನರು ನನ್ನ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಬಂದಿದೆ’ ಎಂದಿದ್ದಾರೆ ಧರ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.