ಪವನ್ ಕಲ್ಯಾಣ್ ಜನ್ಮದಿನ: ಸ್ಟಾರ್ ನಟನ ಒಟ್ಟೂ ಆಸ್ತಿ, ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ

| Updated By: ರಾಜೇಶ್ ದುಗ್ಗುಮನೆ

Updated on: Sep 02, 2023 | 8:26 AM

ಬರ್ತ್​ಡೇ ಪ್ರಯುಕ್ತ ಹಲವು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪವನ್ ಕಲ್ಯಾಣ್ ಕೇವಲ ಹೀರೋ ಅಲ್ಲ. ರಾಜಕಾರಣಿ ಹಾಗೂ ಉದ್ಯಮಿ ಕೂಡ ಹೌದು. ಸಿನಿಮಾಗೆ ಭರ್ಜರಿ ಸಂಭಾವನೆ ಪಡೆಯುವ ಅವರು, ಹಲವು ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಒಟ್ಟೂ ಆಸ್ತಿ, ಹೂಡಿಕೆ ಬಗ್ಗೆ ಇಲ್ಲಿದೆ ವಿವರ.

ಪವನ್ ಕಲ್ಯಾಣ್ ಜನ್ಮದಿನ: ಸ್ಟಾರ್ ನಟನ ಒಟ್ಟೂ ಆಸ್ತಿ, ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ
ಪವನ್ ಕಲ್ಯಾಣ್
Follow us on

ನಟ ಪವನ್ ಕಲ್ಯಾಣ್ ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನದ (Pawan Kalyan Birthday) ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಪವನ್ ಕಲ್ಯಾಣ್ ಅವರಿಗೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಅವರ ಸಿನಿಮಾ ತಂಡಗಳಿಂದ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಬಹುದು ಎಂದು ಅಭಿಮಾನಿಗಳು ಕಾದಿದ್ದಾರೆ. ಪವನ್ ಕಲ್ಯಾಣ್​ಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಬರ್ತ್​ಡೇ ಪ್ರಯುಕ್ತ ಹಲವು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪವನ್ ಕಲ್ಯಾಣ್ ಕೇವಲ ಹೀರೋ ಅಲ್ಲ. ರಾಜಕಾರಣಿ ಹಾಗೂ ಉದ್ಯಮಿ ಕೂಡ ಹೌದು. ಸಿನಿಮಾಗೆ ಭರ್ಜರಿ ಸಂಭಾವನೆ ಪಡೆಯುವ ಅವರು, ಹಲವು ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಒಟ್ಟೂ ಆಸ್ತಿ, ಹೂಡಿಕೆ ಬಗ್ಗೆ ಇಲ್ಲಿದೆ ವಿವರ.

ಸಿನಿಮಾ ಬದುಕು

ಪವನ್ ಕಲ್ಯಾಣ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1996ರಲ್ಲಿ. ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಚಿತ್ರಗಳಲ್ಲಿ ನಟಿಸಿ ಫೇಮಸ್ ಆದರು. 2021ರಲ್ಲಿ ಅವರ ನಟನೆಯ ‘ವಕೀಲ್ ಸಾಬ್’, 2022ರಲ್ಲಿ ‘ಭೀಮ್ಲಾ ನಾಯಕ್’ ರಿಲೀಸ್ ಆಯಿತು. ಇತ್ತೀಚೆಗೆ ‘ಬ್ರೋ’ ಸಿನಿಮಾ ಬಿಡುಗಡೆ ಆಗಿದೆ. ಸದ್ಯ ‘ಒಜಿ’, ‘ಹರಿ ಹರ ವೀರ ಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ರಾಜಕೀಯ ಬದುಕು

ಪವನ್ ಕಲ್ಯಾಣ್ ರಾಜಕೀಯಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಸಹೋದರ ಚಿರಂಜೀವಿ ಆರಂಭಿಸಿದ ‘ಪ್ರಜಾ ರಾಜ್ಯಂ ಪಾರ್ಟಿ’ಯ ಯುವ ಪಡೆಯ ಅಧ್ಯಕ್ಷರಾದರು. 2011ರಲ್ಲಿ ಈ ಪಕ್ಷ ಕಾಂಗ್ರೆಸ್​ ಜೊತೆ ಸೇರ್ಪಡೆ ಆದ ಬಳಿಕ ಅವರು ಇದನ್ನು ತೊರೆದರು. 2014ರಲ್ಲಿ ಜೆಎಸ್​ಪಿ (ಜನ ಸೇನಾ ಪಾರ್ಟಿ) ಸ್ಥಾಪಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಆಂಧ್ರ ಹಾಗೂ ತೆಲಂಗಾಣದಿಂದ ಈ ಪಕ್ಷ ಸ್ಪರ್ಧಿಸಿತು. ಆದರೆ, ಯಾವುದೇ ಸ್ಥಾನ ಗೆಲ್ಲಲಿಲ್ಲ. ಜೆಎಸ್​ಪಿ ಆಂಧ್ರ ಪ್ರದೇಶದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಒಟ್ಟೂ ಆಸ್ತಿ

ಕೆಲವು ವರದಿಗಳ ಪ್ರಕಾರ ಪವನ್ ಕಲ್ಯಾಣ್ ಅವರು 132 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇವರು ವಿಜಯವಾಡದಲ್ಲಿ ದೊಡ್ಡ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 16 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲೂ ಮನೆ ಇದೆ. ಹಲವು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಪ್ರತಿ ಚಿತ್ರಕ್ಕೆ ಇವರು 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬ್ರ್ಯಾಂಡ್​ಗಳ ಪ್ರಚಾರಕ್ಕೆ 4 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ರಿಯಲ್ ಎಸ್ಟೇಟ್ ಮೊದಲಾದ ಕಡೆ ಹೂಡಿಕೆ ಮಾಡಿದ್ದಾರೆ.

ಕಾರ್ ಕಲೆಕ್ಷನ್

ಸೆಲೆಬ್ರಿಟಿಗಳ ಬಳ ಕಾರ್ ಕಲೆಕ್ಷನ್ ಜೋರಿರುತ್ತದೆ. ಮರ್ಸಿಡಿಸ್ ಬೆಂಜ್ ಎಎಂಜಿ ಜಿ63, ಜಾಗ್ವಾರ್ ಎಕ್ಸ್​ಜೆ, ಬೆಂಜ್ ಜಿ55 ಎಎಂಜಿ, ಫೋರ್ಡ್ ಎಂಡೋವರ್, ಬಿಎಂಬ್ಲ್ಯೂ 520ಡಿ, ಬೆಂಜ್ ಆರ್​ 350, ಆಡಿ ಕ್ಯೂ 7 ಕಾರುಗಳನ್ನು ಅವರು ಹೊಂದಿದ್ದಾರೆ.

ಇದನ್ನೂ ಓದಿ: ‘ನನ್ನ ಮಗ ಹೀರೋ ಆಗಲ್ಲ’; ಸ್ಪಷ್ಟನೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ

ಮದುವೆ ವಿಚಾರದಲ್ಲಿ ಸುದ್ದಿ ಆಗಿದ್ದ  ಪವನ್ ಕಲ್ಯಾಣ್

ನಂದಿನಿ ಎಂಬ ಯುವತಿಯನ್ನು 1997ರಲ್ಲಿ ಪವನ್ ಕಲ್ಯಾಣ್ ವಿವಾಹ ಆದರು. ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹ ನಡೆದಿತ್ತು. ಆದರೆ, ಮದುವೆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. 2007ರಲ್ಲಿ ಇಬ್ಬರೂ ವಿಚ್ಛೇದನ ಹೊಂದಿದರು. ರೇಣು ದೇಸಾಯಿ ಅವರನ್ನು 2008ರಲ್ಲಿ ಪವನ್ ಕಲ್ಯಾಣ್ ವಿವಾಹ ಆದರು. ಅವರಿಂದಲೂ ಡಿವೋರ್ಸ್ ಪಡೆದರು. ಅನ್ನಾ ಅವರನ್ನು ಮದುವೆ ಆಗಿ ಕಳೆದ 10 ವರ್ಷಗಳಿಂದ ಸಂಸಾರ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ