ಸಿನಿಮಾದಲ್ಲಿ ಮಾಸ್ ಆಗಿರೋ ಪವನ್ ಕಲ್ಯಾಣ್ ರಿಯಲ್​ ಲೈಫ್​ನಲ್ಲಿ ಹೇಗೆ? ಇಲ್ಲಿದೆ ನೋಡಿ ಉತ್ತರ

ಪವನ್ ಕಲ್ಯಾಣ್ ಅವರ ನೇತೃತ್ವದ ಜನಸೇನಾ ಪಕ್ಷವು ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷದವರಿಂದಲೇ ಟೀಕೆ ಎದುರಿಸಬೇಕಾಯಿತು.  ಆದಾಗ್ಯೂ ಪವನ್ ಕಲ್ಯಾಣ್ ಅವರು ಈ ಟೀಕೆಗಳನ್ನು ಮೆಟ್ಟಿ ನಿಂತರು. ಅವರು ರಿಯಲ್ ಲೈಫ್​ನಲ್ಲಿ ಹೇಗೆ ಎಂಬುದನ್ನು ಕೆಲವರು ವಿವರಿಸಿದ್ದಾರೆ.

ಸಿನಿಮಾದಲ್ಲಿ ಮಾಸ್ ಆಗಿರೋ ಪವನ್ ಕಲ್ಯಾಣ್ ರಿಯಲ್​ ಲೈಫ್​ನಲ್ಲಿ ಹೇಗೆ? ಇಲ್ಲಿದೆ ನೋಡಿ ಉತ್ತರ
ಪವನ್ ಕಲ್ಯಾಣ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 11, 2024 | 7:57 AM

ಪವನ್ ಕಲ್ಯಾಣ್ (Pawan Kalyan) ಅವರು ರಾಜಕೀಯಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಇದೇ ಮೊದಲ ಬಾರಿಗೆ ಅವರಿಗೆ ಅಧಿಕಾರ ಸಿಕ್ಕಿದೆ. ಅವರ ಪಕ್ಷ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಗೆಲುವು ಕಂಡಿದೆ. ಈ ಗೆಲುವಿನಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಪವನ್ ತೆರೆಮೇಲೆ ಮಾಸ್ ಆಗಿ ಕಾಣಿಸಿಕೊಳ್ಳುತ್ತಾರೆ. ನಿಜ ಜೀವನದಲ್ಲಿ ಅವರು ಹೇಗೆ? ಈ ಪ್ರಶ್ನೆಗೆ ತಮಿಳು ನಟ ವಿಜಯ್ ಸೇತುಪತಿ ಅವರು ಉತ್ತರ ನೀಡಿದ್ದಾರೆ.

ಪವನ್ ಕಲ್ಯಾಣ್ ಅವರ ನೇತೃತ್ವದ ಜನಸೇನಾ ಪಕ್ಷವು ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷದವರಿಂದಲೇ ಟೀಕೆ ಎದುರಿಸಬೇಕಾಯಿತು.  ಆದಾಗ್ಯೂ ಪವನ್ ಕಲ್ಯಾಣ್ ಅವರು ಈ ಟೀಕೆಗಳನ್ನು ಮೆಟ್ಟಿ ನಿಂತರು. ಹಲವು ತ್ಯಾಗಗಳನ್ನು ಅವರು ಮಾಡಿದರು. ಇತ್ತೀಚೆಗೆ ಅನೇಕರು ಪವನ್ ಕಲ್ಯಾಣ್ ಅವರನ್ನು ಹೊಗಳುತ್ತಿದ್ದಾರೆ. ವಿಜಯ್ ಸೇತುಪತಿ ಕೂಡ ಪವನ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ನಿಜ ಜೀವನದಲ್ಲೂ ಮಾಸ್ ಎಂದಿದ್ದಾರೆ.

‘ಪವನ್ ಕಲ್ಯಾಣ್ ಅವರ ಶ್ರಮಕ್ಕೆ ನಾನು ಗೌರವ ಸೂಚಿಸುತ್ತೇನೆ. ಅವರ ಬಗ್ಗೆ ನನಗೆ ಖುಷಿ ಇದೆ. ರಾಜಕೀಯದಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಅವರನ್ನು ಅನೇಕರು ಟೀಕಿಸಿದ್ದರು. ಅವರ ಸ್ಥಿರತೆ ಬಗ್ಗೆ ಮೆಚ್ಚುಗೆ ಇದೆ. ಅವರ ಕಥೆಯಲ್ಲಿ ಅವರೇ ಹೀರೋ. ಎಲ್ಲರಲ್ಲೂ ಆ ಸ್ಥಿರತೆ ಬೇಕು. ವೈಯಕ್ತಿವಾಗಿ ನನಗೆ ಅವರು ಗೊತ್ತಿಲ್ಲ. ಆದರೆ ನನ್ನ ತೆಲುಗು ಗೆಳೆಯರು ವಾಟ್ಸಾಪ್​​ನಲ್ಲಿ ಅವರ ಗೆಲುವಿನ ಬಗ್ಗೆ ಹೇಳಿದ್ದಾರೆ. ಅವರು ಎಷ್ಟುಪಟ್ಟು ಗೆದ್ದಿದ್ದಾರೆ ಎಂದು ತಿಳಿಯಿತು’ ಎಂದು ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ:  ‘ಸರ್ಕಾರ ಕೊಡೋ ಸಂಬಳದಲ್ಲಿ ಒಂದು ರೂಪಾಯಿನೂ ಬಿಡಲ್ಲ’; ಪವನ್ ಕಲ್ಯಾಣ್

‘ಪವನ್ ಅವರು ಕೇವಲ ಸಿನಿಮಾಗಳಲ್ಲಿ ಅಲ್ಲ ನಿಜ ಜೀವನದಲ್ಲೂ ಮಾಸ್’ ಎಂದು ವಿಜಯ್ ಸೇತುಪತಿ ಅವರು ಹೊಗಳಿದ್ದಾರೆ. ‘ಮಹಾರಾಜು’ ಸಿನಿಮಾದ ಈವೆಂಟ್​​ನಲ್ಲಿ ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎನ್​ಡಿಎ ಸಭೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಹೊಗಳಿದ್ದರು. ಪವನ ಎಂದರೆ ಗಾಳಿ ಎಂದರ್ಥ. ‘ನೀವು ಪವನ ಅಲ್ಲ ಬಿರುಗಾಳಿ’ ಎಂದು ಮೆಚ್ಚುಗೆ ಸೂಚಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು
ಅಧಿಕಾರಿಗಳ ಸಭೆಯಲ್ಲಿ ನಿದ್ದೆಗೆ ಜಾರಿದ ನೂತನ ಎಂಎಲ್‌ಸಿ ಎ ವಸಂತಕುಮಾರ್
ಅಧಿಕಾರಿಗಳ ಸಭೆಯಲ್ಲಿ ನಿದ್ದೆಗೆ ಜಾರಿದ ನೂತನ ಎಂಎಲ್‌ಸಿ ಎ ವಸಂತಕುಮಾರ್
ದರ್ಶನ್ ಬಗ್ಗೆ ಕೇಳಿದ್ದಕ್ಕೆ ನೋ ರಿಯಾಕ್ಷನ್ ಎಂದ ನಟಿ ಶ್ರೀಲೀಲಾ
ದರ್ಶನ್ ಬಗ್ಗೆ ಕೇಳಿದ್ದಕ್ಕೆ ನೋ ರಿಯಾಕ್ಷನ್ ಎಂದ ನಟಿ ಶ್ರೀಲೀಲಾ